ರಷ್ಯಾ ಪರ್ಮ್ ವಿವಿಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿ : ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು!
ರಷ್ಯಾದ ಪರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದೆ.
ಪರಿಚಿತನೊಬ್ಬ ಸೋಮವಾರ ಮುಂಜಾನೆ ರಷ್ಯಾದ ಪರ್ಮ್ ಸ್ಟೇಟ್ ಯೂನಿವರ್ಸಿಟಿಯ ಕೊಠಡಿಗೆ ಆಗಮಿಸಿ ಮನಸೋ ಇಚ್ಚೆ ಫೈರಿಂಗ್ ಮಾಡಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ವಿದ್ಯಾರ್ಥಿಗಳು ಹಾರಿದ್ದಾರೆ. ಆರೇಳು ಅಡಿ ಎತ್ತರದಿಂದ ವಿದ್ಯಾರ್ಥಿಗಳು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಫೈರಿಂಗ್ ವೇಳೆ ನಾಲ್ವರು ಗಾಯಗೊಂಡಿದ್ದಾರೆನ್ನಲಾಗುತ್ತಿದೆ. ವರದಿಗಳ ಪ್ರಕಾರ ಸದ್ಯ ದಾಳಿಕೋರರನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯ ವೀಡಿಯೋಗಳು ವೈರಲ್ ಆಗಿವೆ.
Вооруженный человек вошел в здание университета и открыл стрельбу. pic.twitter.com/sQCh7JoHSb
— Рустем Адагамов (@adagamov) September 20, 2021