ಕೇರಳದಲ್ಲಿ ಅಕ್ಟೋಬರ್ 25 ರಿಂದ ಸಿನಿಮಾ ಮಂದಿರಗಳು, 18 ರಿಂದ ಕಾಲೇಜುಗಳು ಓಪನ್!

ಕೇರಳದಲ್ಲಿ ಕೊರೊನಾ ಕಾರಣಕ್ಕೆ ಬಂದ್ ಮಾಡಲಾಗಿದ್ದ ಸಿನಿಮಾ ಮಂದಿರಗಳನ್ನು ಹಾಗೂ ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಅಕ್ಟೋಬರ್ 25 ರಿಂದ ಸಿನಿಮಾ ಮಂದಿರಗಳು, 18 ರಿಂದ ಕಾಲೇಜುಗಳು ತೆರೆಯಲಿವೆ.

ಕೊರೋನವೈರಸ್ ಲಸಿಕೆಯ ಎರಡು ಡೋಸ್ ತೆಗೆದುಕೊಂಡವರಿಗೆ ಚಿತ್ರಮಂದಿರಗಳು ಮತ್ತು ಆಡಿಟೋರಿಯಂಗಳ ಪ್ರವೇಶಕ್ಕೆ ಅವಕಾಶವಿರುತ್ತದೆ. ಅಕ್ಟೋಬರ್ 25 ರಿಂದ ಶೇಕಡಾ 50 ರಷ್ಟು ಚಿತ್ರಮಂದಿರಗಳು ಪುನರಾರಂಭವಾಗಲಿದೆ ಎಂದು ರಾಜ್ಯ ಸರ್ಕಾರ ಶನಿವಾರ ಕೋವಿಡ್ -19 ನಿರ್ಬಂಧಗಳ ಸಡಿಲಿಕೆಯ ವೇಳೆ ಘೋಷಿಸಿದೆ.

ಅಕ್ಟೋಬರ್ 18 ರಿಂದ ಸಂಪೂರ್ಣವಾಗಿ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಕೋವಿಡ್ -19 ಮೌಲ್ಯಮಾಪನ ಸಭೆಯಲ್ಲಿ ಮದುವೆ ಮತ್ತು ಅಂತ್ಯಕ್ರಿಯೆಗಾಗಿ ಜನರ ಸಂಖ್ಯೆಯನ್ನು 50 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಕೋವಿಡ್ -19 ಕಾರಣದಿಂದಾಗಿ ಕೇರಳದಲ್ಲಿ ಥಿಯೇಟರ್‌ಗಳು ಮತ್ತು ಆಡಿಟೋರಿಯಂಗಳು ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿವೆ.

ನಿರಂತರವಾಗಿ ಚಿತ್ರಮಂದಿರಗಳನ್ನು ಮುಚ್ಚುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಇದು ಚಿತ್ರರಂಗವನ್ನೇ ನಂಬಿಕೊಂಡ ಕುಟುಂಬಗಳ ಜೀವನೋಪಾಯದ ಮೇಲೆ ಭಾರೀ ಪರಿಣಾಮ ಬೀರಿತ್ತು.

ಕಳೆದ ವರ್ಷ ಮಾರ್ಚ್ ನಿಂದ ಮುಚ್ಚಿದ್ದ ಶಾಲೆಗಳನ್ನು ಕೇರಳ ಸರ್ಕಾರ ಕಳೆದ ವಾರ ನವೆಂಬರ್ 1 ರಿಂದ ತೆರೆಯಲು ಅನುಮತಿ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights