ಮುಂಬೈ ಡ್ರಗ್ ಕೇಸ್ : ಬಿಜೆಪಿ ನಾಯಕನ ಸೋದರಮಾವನ ಬಿಡುಗಡೆ – ಪ್ರೂಫ್ ನೀಡುತ್ತೇನೆಂದ ಎನ್‌ಸಿಪಿ ನಾಯಕ!

ಮುಂಬೈ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ವೇಳೆ ದಾಳಿ ಮಾಡಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ದಿಂದ ಬಂಧಿತರಾಗಿರುವವರಲ್ಲಿ ಒಬ್ಬರನ್ನು ಇಂದು ಬಿಡುಗಡೆ ಮಾಡಲಾಗಿದೆ. ಮುಂಬೈ ಕ್ರೂಸ್ ಡ್ರಗ್ಸ್ ದಂಧೆಯಲ್ಲಿ ಬಿಜೆಪಿ ನಾಯಕನ ಸೋದರಮಾವನನ್ನು ಎನ್‌ಸಿಬಿ ಬಿಡುಗಡೆ ಮಾಡಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪುರಾವೆಗಳನ್ನು ಬಿಡುಗಡೆ ಮಾಡುವುದಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ನವಾಬ್ ಮಲಿಕ್ ಹೇಳಿದ್ದಾರೆ.

ದೇಶದ ಮಾದಕ ದ್ರವ್ಯ ವಿರೋಧಿ ಏಜೆನ್ಸಿ ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ಬಲೆ ಬೀಸಿದೆ. ಆದರೆ ಇದು ಕೇವಲ ಪ್ರಚಾರಕ್ಕಾಗಿ ಮಾತ್ರ ಎಂದು ಮಲಿಕ್ ಹೇಳಿದ್ದಾರೆ.  ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಗಂಟೆಗಳ ನಂತರ ಡ್ರಗ್ಸ್ ಬಸ್ಟ್ ಪ್ರಕರಣದಲ್ಲಿ ಜಾಮೀನು ವಿಚಾರಣೆಗಾಗಿ ಅವಕಾಶ ನೀಡಲಾಗಿದೆ.

“NCB ಯ ವಲಯ ನಿರ್ದೇಶಕ, ವಾಂಖೆಡೆ ಆ ದಿನ ದಾಳಿ ನಡೆಸಿದ ನಂತರ 8-10 ಜನರು NCB ವಶದಲ್ಲಿದ್ದರು ಎಂದು ಹೇಳಿದರು. ನಂತರ ನ್ಯಾಯಾಲಯದಲ್ಲಿ ಒಬ್ಬ ಅಧಿಕಾರಿ 3 ಮತ್ತು ನಂತರ 5 ಆರೋಪಿಗಳನ್ನು ಕರೆತಂದರು. ದಾಳಿ ನಡೆಸಿದ ಅಧಿಕಾರಿ ಅಸ್ಪಷ್ಟ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ದಿನ ಬಂಧಿತರಾದವರು 8 ಅಲ್ಲ 10 ಜನರನ್ನು ಬಂಧಿಸಲಾಗಿದೆ ಎಂದು ನನಗೆ ಖಾತ್ರಿಯಿದೆ. NCB 2 ಜನರನ್ನು ಬಿಡುಗಡೆ ಮಾಡಿದೆ. ಒಬ್ಬ ವ್ಯಕ್ತಿ ಎಲ್ಲರನ್ನು ಕ್ರೂಸ್ ಹಡಗಿಗೆ ಕರೆಸಿಕೊಂಡವನು ಮತ್ತು ಇನ್ನೊಬ್ಬ ಬಿಜೆಪಿ ನಾಯಕನ ಸೋದರಮಾವ. ಆದರೆ ಇವರಿಬ್ಬರನ್ನು ಬಿಡುಗಡೆ ಮಾಡಲಾಗಿದೆ ” ಎಂ ಮಲಿಕ್ ಆರೋಪಿಸಿದ್ದಾರೆ.

“ಇವೆಲ್ಲವೂ ವಾಂಖೇಡೆ ಅವರ ಅಡಿಯಲ್ಲಿ ನಡೆಯುತ್ತಿವೆ. ನಾನು ತುಂಬಾ ಜವಾಬ್ದಾರಿಯುತವಾಗಿ ಮಾತನಾಡುತ್ತಿದ್ದೇನೆ. ಈ ಪ್ರಕರಣಕ್ಕೆ ಮುಂಬೈ ಬಿಜೆಪಿ ನಾಯಕನ ಸಂಬಂಧವಿದೆ ಎಂದು ಸಾಬೀತುಪಡಿಸಲು ನಾಳೆ ನಾನು ಸಾಕ್ಷ್ಯವನ್ನು ಬಿಡುಗಡೆ ಮಾಡುತ್ತೇನೆ” ಎಂದು ಮಲಿಕ್ ಹೇಳಿದರು.

ಎನ್‌ಸಿಬಿ ಕ್ರಮಗಳು ರಾಜ್ಯವನ್ನು ಮಾನಹಾನಿ ಮಾಡುವ ಗುರಿಯನ್ನು ಹೊಂದಿವೆ. ಅಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಬಿಜೆಪಿಯ ಮಾಜಿ ಮಿತ್ರ ಶಿವಸೇನಾ ಅಧಿಕಾರದಲ್ಲಿದೆ. “ರಿಯಾ ಚಕ್ರವರ್ತಿಯಿಂದ ಹಿಡಿದು ದೀಪಿಕಾ ಪಡುಕೋಣೆ ವರೆಗೂ ಮತ್ತು ಆರ್ಯನ್ ಖಾನ್ ಸೇರಿದಂತೆ ಇತರ ಸೆಲೆಬ್ರಿಟಿಗಳ ವಿಚಾರಣೆಯನ್ನು ಎನ್‌ಸಿಬಿ ಪ್ರಚಾರಕ್ಕಾಗಿ ಮಾಡುತ್ತದೆ. ಇದರಲ್ಲಿ ಅನೇಕ ಪ್ರಕರಣಗಳು ನಕಲಿಯಾಗಿವೆ” ಎಂದು ಶ್ರೀ ಮಲಿಕ್ ಇಂದು ತಿಳಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights