ವಿಜಯಪುರದ ಹಲವೆಡೆ ತಡರಾತ್ರಿ ಕಂಪಿಸಿದ ಭೂಮಿ : ಆತಂಕದಲ್ಲಿ ದಿನದೂಡಿದ ಜನ!

ವಿಜಯಪುರದ ಹಲವೆಡೆ ತಡರಾತ್ರಿ ಭೂಮಿ ಕಂಪಿಸಿದ್ದು ಆತಂಕದಲ್ಲಿ ಜನ ದಿನದೂಡುವಂತಾಗಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಒಂದಾದ ವಿಜಯಪುರದಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿದೆ. ಇದರಿಂದ ಜನ ಆತಂಕದಲ್ಲಿ ದಿನಕಳೆಯುವಂತಾಗಿದೆ.

ವಿಜಯಪುರ ‌ನಗರದ ರೈಲ್ವೆ ಸ್ಟೇಷನ್ ಪ್ರದೇಶ, ಅಲ್ಲಾಪುರ ಓಣಿ, ಅಲ್ಲಾಪುರ ತಾಂಡಾ, ಶಿವಗಿರಿ ಬಡಾವಣೆ ಹಾಗು ಗೋಳಗುಮ್ಮಟ ಪ್ರದೇಶ ಸೇರಿದಂತೆ ಹಲವೆಡೆ ತಡರಾತ್ರಿ 12.20ರ ವೇಳೆಗೆ ಜನರಿಗೆ ಭೂಕಂಪನದ ಅನುಭವವಾಗಿದೆ.

ಆಲಮಟ್ಟಿಯ ಭೂಮಾಪನ ಕೇಂದ್ರದಲ್ಲಿದ್ದ ರಿಕ್ಟರ್ ಮಾಪಕದಲ್ಲಿ ಸರಿಯಾದ ತೀವ್ರತೆ ದಾಖಲಾಗದ ಕಾರಣ ಜಿಲ್ಲಾಡಳಿತಕ್ಕೂ ತಲೆನೋವು ತಂದಿರಿಸಿದೆ.

ಈಗಾಗಲೇ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದೇ ತಿಂಗಳಲ್ಲಿ ಆರು ಬಾರಿ ಭೂಮಿ ನಡುಗಿದೆ. ಸೆಪ್ಟೆಂಬರ್ 4ರ ಮಧ್ಯರಾತ್ರಿ ಹಾಗೂ ಸೆಪ್ಟೆಂಬರ್ 11ರಂದು ಜಿಲ್ಲೆಯ ಬಸವನಬಾಗೇವಾಡಿ ಹಾಗೂ ವಿಜಯಪುರ ನಗರದಲ್ಲಿ ಭೂಕಂಪನವಾಗಿತ್ತು.‌ ಆಗ ಭೂ ಮಾಪನ ಕೇಂದ್ರದಲ್ಲಿದ್ದ ರಿಕ್ಟರ್ ಮಾಪಕದಲ್ಲಿ 3.9 ನಷ್ಟು ತೀವ್ರತೆ ದಾಖಲಾಗಿತ್ತು. ಅಕ್ಟೋಬರ್ 1 ಹಾಗೂ 2 ರಂದು ಮತ್ತೆ ಭೂಕಂಪನ ಜರುಗಿದೆ.

ಈ ವೇಳೆ 2.5 ನಷ್ಟು ತೀವ್ರತೆ ದಾಖಲಾಗಿತ್ತು. ಕಳೆದೊಂದು ವಾರದಲ್ಲಿಯೇ ಕೊಲ್ದಾರ್ ಹೊರ್ತಿ, ವಿಜಯಪುರ ನಗರ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ್ದು ಜನರ ಅರಿವಿಗೆ ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights