ಡ್ರಗ್ಸ್-ಆನ್-ಕ್ರೂಸ್ ಪ್ರಕರಣ : ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಖಾತ್ರಿ ಮನೆ ಮೇಲೆ ದಾಳಿ!

ಡ್ರಗ್ಸ್-ಆನ್-ಕ್ರೂಸ್ ಪ್ರಕರಣದಲ್ಲಿ ಹಲವಾರು ಹೊಸಬರ ಹೆಸರು ಕೇಳಿ ಬರುತ್ತಿದ್ದು ಎನ್ ಸಿಬಿ ಅವರ ಬಂಧನಕ್ಕೆ ಬಲೆ ಬೀಸಿದೆ. ಇದರ ಬೆನ್ನಲ್ಲೆ  ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಖಾತ್ರಿ ಅವರ ಮುಂಬೈಮನೆ ಮೇಲೆ ದಾಳಿ ಮಾಡಲಾಗಿದೆ.

ಡ್ರಗ್ಸ್ ಆನ್ ಮುಂಬೈ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾದಲ್ಲಿರುವ ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಖಾತ್ರಿ ಅವರ ಮನೆ ಮತ್ತು ಕಚೇರಿಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ದಾಳಿ ಮಾಡಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಬಂಧನದ ಬಳಿಕ ಈ ದಾಳಿ ನಡೆದಿದೆ.

ರೇವ್ ಪಾರ್ಟಿ ಪ್ರಕರಣದಲ್ಲಿ ಅಖಿತ್ ಕುಮಾರ್ ಎಂಬಾತನ ಹೆಸರು ಕೇಳಿಬಂದಿತ್ತು. ಈತನ ವಿಚಾರಣೆಯಲ್ಲಿ ಖಾತ್ರಿಯ ಹೆಸರು ಬಹಿರಂಗವಾಗಿದೆ. ಈ ವಾರದ ಆರಂಭದಲ್ಲಿ ಅಖಿತ್ ಕುಮಾರ್ ನನ್ನು ಉಪನಗರ ಪೊವಾಯಿಯಿಂದ ಬಂಧಿಸಲಾಯಿತು. ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಈಗ 18 ಕ್ಕೇರಿಕೆಯಾಗಿದೆ.

ಕ್ರೂಸ್ ಮೇಲೆ ದಾಳಿ ನಡೆಸಿದಾಗ ಎನ್ ಸಿಬಿ 13 ಗ್ರಾಂ ಕೊಕೇನ್, 21 ಗ್ರಾಂ ಚರಸ್, 22 ಮಾತ್ರೆಗಳ ಎಂಡಿಎಂಎ, 5 ಗ್ರಾಂ ಎಂಡಿ ಮತ್ತು 1.33 ಲಕ್ಷ ನಗದನ್ನು ವಶಪಡಿಸಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights