ಗೋವಾ ಚುನಾವಣೆ: ಹಾಲಿ ಶಾಸಕರಿಗೆ ಕೋಕ್‌ ಕೊಡುತ್ತಿರುವ ಬಿಜೆಪಿ; ಹೊಸ ಅಭ್ಯರ್ಥಿಗಳ ಹುಡುಕಾಟ!

ಗೋವಾದ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ತನ್ನ ಹೆಚ್ಚಿನ ಹಾಲಿ ಶಾಸಕರನ್ನು 2022ರ ಚುನಾವಣೆಯಲ್ಲಿ ಕೈಬಿಡುವ ಸಾಧ್ಯತೆ ಇದ್ದು, ಹೊಸ ಯುವ ಮುಖಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಕೇಸರಿ ಪಕ್ಷವು 2014 ರಿಂದ ಗೋವಾದಲ್ಲಿ ಅಧಿಕಾರದಲ್ಲಿದೆ. ಅಲ್ಲಿ ಅಧಿಕಾರ ವಿರೋಧಿ ಅಲೆ ಇದ್ದು, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಭವಿಷ್ಯವನ್ನು ಹಾನಿಗೊಳಿಸಬಹುದು ಎಂದು ಹೇಳಲಾಗಿದೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ, ಪಕ್ಷವು ತನ್ನ ಹಾಲಿ ಶಾಸಕರಲ್ಲಿ 15-20% ಕೈಬಿಟ್ಟಿತ್ತು. ಇದೀಗ, ಕೊರೊನಾ ಸೋಂಕನ್ನು ನಿಭಾಯಿಸುವಲ್ಲಿ ಕಳಪೆ ನಿರ್ವಹಣೆ. ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯ ಕಾರಣ ಹಲವಾರು ರೋಗಿಗಳ ಸಾವು ಸೇರಿದಂತೆ ಹಲವಾರು ಸಮಸ್ಯೆಗಳ ವಿಚಾರದಲ್ಲಿ ಸರ್ಕಾರದ ವಿರುದ್ದ ಸಾರ್ವಜನಿಕ ಅಸಮಾಧಾವಿದೆ. ಅಲ್ಲದೆ, ಬಾಂಬೆ ಹೈಕೋರ್ಟ್‌ನ ಗೋವಾ ಬೆಂಚ್‌ ಕೂಡ ಕೊರೊನಾ ಸಾವುಗಳ ವಿಚಾರದಲ್ಲಿ ಸರ್ಕಾರ ವಿರುದ್ದ ಆಕ್ಷೇಪ ವ್ಯಕ್ತಪಡಿಸಿತ್ತು. ಇದೆಲ್ಲ, ಬಿಜೆಪಿಗೆ ತಲೆನೋವಾಗಿದೆ.

ಗೋವಾ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಅವರು ಹಿರಿಯ ಬಿಜೆಪಿ ನಾಯಕರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಹಾಲಿ ಶಾಸಕರನ್ನು ಕಣಕ್ಕಿಳಿಸುವುದು ಪಕ್ಷಕ್ಕೆ ಹಾನಿಯಾಗಬಹುದು ಎಂದು ಅವರು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

“ಎಎಪಿ ಮತ್ತು ಟಿಎಂಸಿ ಪಕ್ಷಗಳೂ ಕೂಡ ಗೋವಾದಲ್ಲಿ ಸ್ಪರ್ಧಿಸುತ್ತಿದ್ದು, ಇದು ಚುನಾವಣಾ ಹೋರಾಟವನ್ನು ತೀವ್ರಗೊಳಿಸಿದೆ. ಬಹು ಆಯಾಮಗಳಿಂದ ಸ್ಪರ್ಧೆಗಳಿದ್ದು, ಇದು ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳನ್ನು ಊಹಿಸುವುದು ಕಷ್ಟ. ಅಂತಹ ಹೋರಾಟದಲ್ಲಿ ಗೆಲುವಿನ ಅಂತರವು ತುಂಬಾ ತೆಳುವಾಗಿರುತ್ತದೆ. ಇಂತಹ ಸನ್ನಿವೇಶಗಳು ಬಿಜೆಪಿ ಪರ ಅಥವಾ ವಿರುದ್ಧವಾಗಿರಬಹುದು” ಎಂದು ಗೋವಾ ಮೂಲದ ಹಿರಿಯ ಪತ್ರಕರ್ತ ಸುಮಿತ್ ನಾಯಕ್ ಹೇಳಿದ್ದಾರೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆದ್ದಿತ್ತು. ಕೆಲವು ಸ್ಥಾನಗಳ ಅಂತರದಿಂದಾಗಿ ಅದು ಅಧಿಕಾರ ರಚಿಸುವ ಅವಕಾಶವನ್ನು ಕಳೆದುಕೊಂಡಿತ್ತು. ಕಾಂಗ್ರೆಸ್ ಪಕ್ಷದ ಆಲಸ್ಯದ ನಡವಳಿಕೆಯಿಂದಾಗಿ ಕೊನೆಯ ಕ್ಷಣದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. ಆದರೂ, 2017ರ ಚುನಾವಣೆಯಲ್ಲಿಯೇ ಜನರು ಬಿಜೆಪಿಯ ವಿರುದ್ದ ಮತ ಚಲಾಯಿಸಿದ್ದರು. ಆದ್ದರಿಂದ ಪಕ್ಷವು ಅದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿಲ್ಲ” ಎಂದು ನಾಯಕ್ ಹೇಳಿದ್ದಾರೆ.

ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಶಿವಸೇನಾ ಮತ್ತು ಎನ್‌ಸಿಪಿ ಒಕ್ಷಗಳೂ ಕೂಡ ಬಿಜೆಪಿಗೆ ಭಾರೀ ಪೈಪೋಟಿ ನೀಡುವ ಸಾಧ್ಯತೆ ದಟ್ಟವಾಗಿದೆ

ಇದನ್ನೂ ಓದಿ: ಆಧುನಿಕ ಮಹಿಳೆಯರು ಮಕ್ಕಳನ್ನು ಹೆರಲು ಬಯಸುತ್ತಿಲ್ಲ ಎಂದ ಸುಧಾಕರ್; ಸಚಿವರಿಗೆ ಚಿಕಿತ್ಸೆ ಅಗತ್ಯವಿದೆ ಎಂದ ನೆಟ್ಟಿಗರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights