ಭಾರತ v/s ಪಾಕ್: ಗೆಲುವಿನ ಪರಂಪರೆ ಮುಂದುವರೆಸುತ್ತಾ ಟೀಂ ಇಂಡಿಯಾ; ಅಭಿಮಾನಿಗಳಲ್ಲಿ ಕೌತುಕ!

2021ರ ಐಸಿಸಿ ಟಿ-20 ವರ್ಲ್ಡ್‌ ಕಪ್‌ ಆರಂಭವಾಗಿದೆ. ನಿನ್ನೆ ನಡೆದ ಆರಂಭಿಕ ಆಟಗಳಲ್ಲಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳು ಗೆಲುವು ಸಾಧಿಸಿವೆ. ಇಂದು (ಭಾನುವಾರ) ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಪಾಕ್‌ ವಿರುದ್ದ ಟಿ-20ಯಲ್ಲಿ ಸೋಲು ಕಾಣದೇ ಗೆಲುವಿನ ಹಾದಿಯಲ್ಲಿ ಮುನ್ನುಗ್ಗಿದ ಟೀಂ ಇಂಡಿಯಾ ಈ ಬಾರಿಯೂ ಪಾಕ್‌ ತಂಡವನ್ನು ಮಣಿಸುವುದೇ ಎಂದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿದೆ.

ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಹಿಂದಿನ ಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಪಾಕಿಸ್ಥಾನದ ವಿರುದ್ದದ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ಅದೇ ರೀತಿಯಲ್ಲಿ ಹಿಂದಿನ ಹಲವು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭಾಗವಹಿಸಿದ್ದು, ಹಿಂದಿನ ಪರಂಪರೆಯನ್ನು ಮುಂದುವರೆಸುವುದೇ, ಪಾಕಿಸ್ತಾನದ ವಿರುದ್ದದ ಎಲ್ಲಾ ಆಟಗಳನ್ನು ಗೆಲ್ಲುವುದೇ ಎಂಬುದು ಕೂತುಹಲ ಹುಟ್ಟುಹಾಕಿದೆ.

ಅದೇ ರೀತಿಯಲ್ಲಿ ಪಾಕಿಸ್ಥಾನಕ್ಕೆ ಇದೊಂದು ಸವಾಲಾಗಿದ್ದು, ಟೀಂ ಇಂಡಿಯಾವನ್ನು ಮಣಿಸಿ, ತನ್ನ ಸೋಲಿನ ಇತಿಹಾಸವನ್ನು ತೊಡೆದು ಹಾಕಬೇಕಾದ ಅನಿವಾರ್ಯತೆ ಪಾಕಿಸ್ಥಾನ ತಂಡಕ್ಕಿದೆ. ಪಾಕಿಸ್ತಾನ ತಂಡವನ್ನು ಬಾಬರ್ ಆಜಂ ಮುನ್ನಡೆಸುತ್ತಿದ್ದಾರೆ.

ಚಿತ್ರ ಕೃಪೆ: ಪ್ರಜಾವಾಣಿ
ಚಿತ್ರ ಕೃಪೆ: ಪ್ರಜಾವಾಣಿ

ಈಗಾಗಲೇ ಭಾರತದ ಹಿಂದೂತ್ವವಾದಿ ಮುಖಂಡರು ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ವಿರೋಧಿಸುತ್ತಿದ್ದಾರೆ. ರಾಜಕೀಯವಾಗಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವುದು ಇದಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಇದೇ ಕಾರಣಕ್ಕಾಗಿ ಎರಡೂ ತಂಡಗಳ ನಡುವೆ ಹಲವು ವರ್ಷಗಳಿಂದ ವಿಶ್ವಕಪ್ ಹೊರತುಪಡಿಸಿ ಬೇರೆಯಾವುದೇ ಕ್ರಿಕೆಟ್‌ ಸರಣಿಗಳು ನಡೆದಿಲ್ಲ.

ಇಂದು ರಾತ್ರಿ 7.30ಕ್ಕೆ ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ.

ಇದನ್ನೂ ಓದಿ: ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್‌ ಸಕ್ಕರೆ ಪುಡಿಯಾಗಿ ಮಾರ್ಪಡುತ್ತದೆ: ಸಚಿವ ಛಗನ್ ಭುಜ್ಬಾಲ್ ವ್ಯಂಗ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights