ಹಿಂದೂತ್ವವಾದಿ ಸಂಘಟನೆಗಳಿಂದ ಕಾಮೇಡಿಯನ್ ಫಾರೂಖಿಗೆ ಬೆದರಿಕೆ; ದಿನಕ್ಕೆ 50 ಬೆದರಿಕೆ ಕರೆಗಳು!

ಹಿಂದುತ್ವವಾದಿ ಸಂಘಟನೆಗಳ ಬೆದರಿಕೆಯಿಂದಾಗಿ ತನಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಸ್ಟ್ಯಾಂಡ್‌‌ಅಪ್‌ ಕಾಮೇಡಿಯನ್‌ ಮುನಾವರ್ ಫಾರೂಖಿ ಭಾನುವಾರ ಹೇಳಿಕೊಂಡಿದ್ದಾರೆ. ತಾವು ಕಾರ್ಯಕ್ರಮ ನಡೆಸುವ ಸ್ಥಳಗಳನ್ನು ಸುಟ್ಟುಹಾಕುವುದಾಗಿ ಅಕ್ಟೋಬರ್ 27 ರಂದು ಹಿಂದುತ್ವ ಗುಂಪುಗಳು ಕಾರ್ಯಕ್ರಮ ಸಂಘಟಕರಿಗೆ ಬೆದರಿಕೆ ಹಾಕಿದ್ದರಿಂದ ತಮ್ಮ ಮೂರು ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಮುನಾವರ್‌ ತಿಳಿಸಿದ್ದಾರೆ.

“ನನಗೆ ಪ್ರತಿದಿನ 50 ಬೆದರಿಕೆ ಕರೆಗಳು ಬರುತ್ತವೆ. ನಾನು ನನ್ನ ಸಿಮ್ ಕಾರ್ಡ್ ಅನ್ನು ಮೂರು ಬಾರಿ ಬದಲಾಯಿಸಬೇಕಾಗಿತ್ತು. ನನ್ನ ಫೋನ್‌ ನಂಬರ್‌ ಸೋರಿಕೆಯಾದಾಗ ನನಗೆ ಕರೆ ಮಾಡಿ ನಿಂದಿಸಲಾಗುತ್ತಿದೆ” ಎಂದು ಮುನಾವರ್‌ ಭಾನುವಾರದಂದು NDTV ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರಾಮ-ಹಿಂದೂತ್ವದಿಂದ ಏನೂ ನೆಟ್ಟಗಾಗಲ್ಲ; ನಾವು ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ: ವೈಎಸ್‌ವಿ ದತ್ತ

“ಸುಮಾರು 1500 ಜನರು ಮೂರು ಪ್ರಕರ್ಶನಗಳಿಗೆ ಒಂದು ತಿಂಗಳ ಮೊದಲೇ ಟಿಕಟ್‌ ಕಾಯ್ದಿರಿಸಿದ್ದಾರೆ. ಇದು ಹಲವಾರು ಜನರು ವಾಸಿಸುವ ದೇಶದ ಕರಾಳ ಸತ್ಯವಾಗಿದೆ. ನನ್ನ ವಿಷಯದಲ್ಲಿ, ಅವರು ಧರ್ಮವನ್ನು ಬಳಸುತ್ತಿದ್ದು, ಇದು ನನ್ನನ್ನು ಭಯಭೀತನಾನ್ನಾಗಿ ಮಾಡುತ್ತದೆ” ಎಂದು ಮುನಾವರ್‌ ಹೇಳಿದ್ದಾರೆ.

ಬಿಜೆಪಿ ರಾಜಕಾರಣಿಯೊಬ್ಬರ ಮಗ ನೀಡಿದ ದೂರಿನ ಆಧಾರದ ಮೇಲೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಜನವರಿಯಲ್ಲಿ ಮುನಾವರ್‌ ಅವರನ್ನು ಬಂಧಿಸಿದಾಗಿನಿಂದ ಹಿಂದುತ್ವ ಗುಂಪುಗಳು ನಿರಂತರವಾಗಿ ಅವರನ್ನು ಗುರಿಯಾಗಿಸಿಕೊಂಡಿವೆ.

ಅವರು ತಮ್ಮ ಪ್ರದರ್ಶನಗಳನ್ನು ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ‘ನೀಡಲಿದ್ದಾರೆ’ ಎಂದು ದೂರುದಾರರು ಆರೋಪಿಸಿದ್ದರು. ಆದರೆ ಅಂದು ಮುನಾವರ್‌ ಅವರನ್ನು ಕಾರ್ಯಕ್ರಮ ಪ್ರಾರಂಭಿಸುವ ಮುನ್ನವೆ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: 2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?

ನಂತರ ಇಂದೋರ್‌ ಪೊಲೀಸರು, ಮುನಾವರ್‌ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಎಂಬುದಕ್ಕೆ ಯಾವುದೇ ದೃಶ್ಯ ಸಾಕ್ಷ್ಯಗಳಿಲ್ಲ ಎಂದು ಒಪ್ಪಿಕೊಂಡಿದ್ದರು.

ಎರಡು ಗಂಟೆಗಳ ಅವಧಿಯ ಕಾರ್ಯಕ್ರಮದ 10 ಸೆಕೆಂಡುಗಳ ವೀಡಿಯೊ ತುಣುಕುಗಳನ್ನು ಹಂಚಿಕೊಳ್ಳುವ ಮೂಲಕ ಬಜರಂಗದಳವು ತನ್ನನ್ನು ಗುರಿಯಾಗಿಸಿಕೊಂಡಿದೆ. ವೀಡಿಯೊ ತುಣುಕನ್ನು ಸಂದರ್ಭಕ್ಕೆ ಮೀರಿ ತೋರಿಸಲಾಗುತ್ತಿದೆ ಎಂದು ಮುನಾವರ್‌ ಹೇಳಿದ್ದಾರೆ.

ಅವರು ಬಿಡುಗಡೆಯಾದ ನಂತರ, ತಾನು 50 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅವುಗಳಲ್ಲಿ 90% ಸಂದರ್ಭ ಪ್ರೇಕ್ಷಕರು ತನ್ನ ಧರ್ಮವನ್ನು ನೋಡದೆ ಚಪ್ಪಾಳೆ ತಟ್ಟಿ ಗೌರವಿಸಿದ್ದಾರೆ. ತನ್ನ ಒಂದು ಕಾರ್ಯಕ್ರಮದಲ್ಲಿ ಸುಮಾರು 80 ಜನರು ಜೀವನೋಪಾಯವನ್ನು ಗಳಿಸುತ್ತಾರೆ. ಈಗ ಒಂದುವರೆ ವರ್ಷಗಳಿಂದ ತಾನು ಕೆಲಸವಿಲ್ಲದೆ ಇದ್ದೇನೆ. ದ್ವೇಷ ಗೆದ್ದಿದೆ, ಆದ್ದರಿಂದಲೇ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ಆದರೆ ಅದು ಎಲ್ಲಿಯವರೆಗೆ ಗೆಲ್ಲಲು ಸಾಧ್ಯ? ನಾವು ಖಂಡಿತಾ ಗೆಲ್ಲುತ್ತೇವೆ” ಎಂದು ಮುನಾವರ್‌ ಫಾರೂಖಿ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಯುವಕನ ಬರ್ಬರ ಹತ್ಯೆ; 7 ಹಿಂದೂತ್ವವಾದಿ ಕಾರ್ಯಕರ್ತರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights