ಪ್ರಧಾನಿಯಾದರೆ, ನನ್ನ ಮೊದಲ ಆದೇಶ ‘ಮಹಿಳಾ ಮೀಸಲಾತಿ’ ಜಾರಿಗೆ ತರುವುದು: ರಾಹುಲ್ ಗಾಂಧಿ

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಶನಿವಾರ ಕೆಲ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಲಾಗಿದ್ದ ದೀಪಾವಳಿ ಔತಣ ಕೂಟದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ತಾವು ಪ್ರಧಾನಿಯಾದರೆ, ತಮ್ಮ‌ಮೊದಲ ಆದೇಶದಲ್ಲಿ‌ಮಹಿಳಾ ಮೀಸಲಾತಿ ಘೋಷಿಸುವುದಾಗಿ ಹೇಳಿದ್ದಾರೆ.

ಔತಣಕೂಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಯೊಬ್ಬರು, ರಾಹುಲ್‌ಗಾಂಧಿಗೆ ನೀವು ಪಿಎಂ ಆದರೆ, ಮೊದಲ ನೀಡುವ ಆದೇಶ ಯಾವುದು ಎಂದು ಪ್ರಶ್ನಿಸಿದ್ದಾರೆ.‌ಇದಕ್ಕೆ ಉತ್ತರಿಸಿದ ರಾಹುಲ್, ತಾವು ಪಿಎಂ ಆದರೆ ಮಾಡುವ ಮೊಟ್ಟ ಮೊದಲ ಕೆಲಸ ಮಹಿಳಾ ಮೀಸಲಾತಿ ಜಾರಿಗೊಳಿಸುವುದು ಎಂದಿದ್ದಾರೆ.

ಈ ಸಂಬಂಧ ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ಸುಮಾರು ಒಂದು ನಿಮಿಷದ ವೀಡಿಯೋ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಔತಣ ಕೂಟದಲ್ಲಿ ಭಾಗಿಯಾದ ಅತಿಥಿಗಳಲ್ಲಿ ಒಬ್ಬರು ಅವರ ಬಳಿ, “ನೀವು ಪ್ರಧಾನಿಯಾದ ಬಳಿಕ ಮೊಟ್ಟ ಮೊದಲು ಕೊಡುವ ಸರ್ಕಾರಿ ಆದೇಶ ಯಾವುದು?” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ “ನಾನು ಮಹಿಳಾ ಮೀಸಲಾತಿ ನೀಡುತ್ತೇನೆ” ಎಂದಿದ್ದಾರೆ. ಅಲ್ಲದೇ “ನಿಮ್ಮ ಮಗುವಿಗೆ ನೀವು ಏನು ಕಲಿಸುತ್ತೀರಿ ಎಂದು ಯಾರಾದರೂ ನನ್ನನ್ನು ಕೇಳಿದರೆ; ಒಂದು ವಿಷಯ – ನಾನು ನಮ್ರತೆ ಎಂದು ಹೇಳುತ್ತೇನೆ. ಏಕೆಂದರೆ, ನಮ್ರತೆಯಿಂದ, ನೀವು ತಿಳುವಳಿಕೆಯನ್ನು ಪಡೆಯುತ್ತೀರಿ” ಎಂದು ಅವರು ಹೇಳಿದ್ದಾರೆ.

ಇನ್ನು ವಿಡಿಯೋ ಬಗ್ಗೆ ಬರೆದುಕೊಂಡಿರುವ ರಾಹುಲ್ ಗಾಂಧಿ ಸೇಂಟ್ ಜೋಸೆಫ್ಸ್ ಮೆಟ್ರಿಕ್ ಹಯರ್‌ ಸೆಕೆಂಡರಿ ಶಾಲೆ, ಮುಳಗುಮೂಡು, ಕನ್ಯಾಕುಮಾರಿಯ ಸ್ನೇಹಿತರೊಂದಿಗೆ ಸಂವಹನ ಮತ್ತು ಭೋಜನ. ಈ ಭೇಟಿ ದೀಪಾವಳಿಯನ್ನು ಇನ್ನಷ್ಟು ವಿಶೇಷಗೊಳಿಸಿತು. ಸಂಸ್ಕೃತಿಗಳ ಸಂಗಮ ನಮ್ಮ ದೇಶದ ದೊಡ್ಡ ಶಕ್ತಿಯಾಗಿದೆ ಮತ್ತು ನಾವು ಅದನ್ನು ಸಂರಕ್ಷಿಸಬೇಕು ಎಂದು ಬರೆದಿದ್ದಾರೆ.

ಇನ್ನು ಸಹೋದರ-ಸಹೋದರಿಯ ಈ ಜೋಡಿ ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಸೇಂಟ್ ಜೋಸೆಫ್ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights