ಇಳಿಯುತ್ತಿದೆ ಕೊರೊನಾ ಸಂಖ್ಯೆ: ರಾಜ್ಯದಲ್ಲಿ 286 ಹೊಸ ಪ್ರಕರಣಗಳು ಪತ್ತೆ; 7 ಸಾವು
ರಾಜ್ಯದಲ್ಲಿ 2ನೇ ಅಲೆಯ ನಂತರ, ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಗುರುವಾರ ರಾಜ್ಯಾದ್ಯಂತ 286 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೂವರೆಗೂ ರಾಜ್ಯದಲ್ಲಿ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆ 29,91,142 ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 38,138 ಕ್ಕೆ ತಲುಪಿದೆ ಎಂದು ಇಲಾಖೆ ತಿಳಿಸಿದೆ.
ಗುರುವಾರ 289 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ಗಳನ್ನು ಆಗಿದ್ದು, ಇದುವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆ ಕಂಡವರ ಸಂಖ್ಯೆ 29,44,958 ಕ್ಕೆ ತಲುಪಿದೆ.
ಗುರುವಾರ ವರದಿಯಾದ 286 ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲೆ 169 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ 171 ಮಂದಿ ಡಿಸ್ಚಾರ್ಜ್ ಮತ್ತು 3 ಸಾವುಗಳು ಸಂಭವಿಸಿವೆ.
ಉಳಿದಂತೆ, ಕೊಡಗು, ಕೊಪ್ಪಳ, ಮೈಸೂರು ಮತ್ತು ತುಮಕೂರಿನಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಹಾಸನ 23, ದಕ್ಷಿಣ ಕನ್ನಡ 17, ಉತ್ತರ ಕನ್ನಡ 16, ತುಮಕೂರು 12, ಮೈಸೂರು 11 ಹೊಸ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 8,017 ಆಗಿದೆ.