Bigg Boss ರಿಯಾಲಿಟಿ ಶೋ: ಬಿಗ್‌ಬಾಸ್‌ ನಿರೂಪಕರಾಗಿ ನಟಿ ರಮ್ಯಾ ಕೃಷ್ಣ?

ಎಲ್ಲಾ ಭಾಷೆಯ ಕಿರುತೆರೆಯಲ್ಲಿ ಹೆಚ್ಚಿನ ಜನರ ವಿಮರ್ಶೆಗೆ ಮತ್ತು ಮೆಚ್ಚುಗೆಗೆ ಒಳಗಾಗಿರುವ ಕಾರ್ಯಕ್ರಮ ಬಿಗ್‌ಬಾಸ್‌. ಸದ್ಯ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ Bigg Boss ಪ್ರಸಾರವಾಗುತ್ತಿದೆ ಇದೀಗ, ಬಿಗ್‌ಬಾಸ್‌ ನಿರೂಪಕರಾಗಿ ನಟಿ ರಮ್ಯಾ ಕೃಷ್ಣ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡದಲ್ಲಿ ಕಿಚ್ಚ ಸುದೀಪ್​, ಹಿಂದಿಯಲ್ಲಿ ಸಲ್ಮಾನ್​ ಖಾನ್​ ಅವರು ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ಧಾರೆ. ಅಂತೆಯೇ, ತೆಲುಗು ಮತ್ತು ತಮಿಳಿನಲ್ಲಿಯೂ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ನಿರೂಪಕರು ಆಗ್ಗಾಗ್ಗೆ ಬದಲಾಗುತ್ತಿದ್ದಾರೆ. ಸದ್ಯ, ತಮಿಳು ಬಿಗ್​ ಬಾಸ್​ 5ರ ನಿರೂಪಣೆ ಮಾಡುತ್ತಿದ್ದ ಕಮಲ್​ ಹಾಸನ್​ ಅವರಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಅವರು ಬಿಗ್‌ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಡುವ ಸಾಧ್ಯತೆ ಇಲ್ಲ. ಹೀಗಾಗಿ, ಅವರ ಬದಲಿಗೆ ನಟಿ ರಮ್ಯಾ ಕೃಷ್ಣ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಲಾಗಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಬಹುಭಾಷಾ ನಟಿ ರಮ್ಯಾ ಕೃಷ್ಣ ಅವರು, ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಅವರು ದೊಡ್ಡ ಅಭಿಮಾನಿ ಬಳಗ ಇದೆ. ಅಷ್ಟೇ ಅಲ್ಲದೇ, ನಂ.1 ಜೋಡಿ, ಬಿಗ್​ ಬಾಸ್​ ಜೋಡಿಗಳು​ ಸೇರಿದಂತೆ ಕೆಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ, ಜಡ್ಜ್​ ಆಗಿಯೂ ಕೂಡ ಅವರು ಕೆಲಸ ಮಾಡಿದ್ದಾರೆ.

2019ರಲ್ಲಿ ‘ಬಿಗ್​ ಬಾಸ್​ ತೆಲುಗು ಸೀಸನ್​ 3’ ಕಾರ್ಯಕ್ರಮ ನಿರೂಪಣೆಯನ್ನು ನಟ ನಾಗಾರ್ಜುನ ಅವರು ಮಾಡುತ್ತಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಅವರು ಕೆಲವು ವಾರಗಳ ಕಾಲ ನಿರೂಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ರಮ್ಯಾ ಕೃಷ್ಣ ಅವರು ಕಾರ್ಯಕ್ರಮವನ್ನು ಮುನ್ನಡೆಸಿದ್ದರು. ಹೀಗಾಗಿ, ಅದೇ ಅನುಭವದಿಂದ ಅವರು ತಮಿಳು ಬಿಗ್‌ಬಾಸ್‌-5ರ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಯಾರನ್ನು ಚಾನೆಲ್‌ ಆಯ್ಕೆ ಮಾಡಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

ಇದನ್ನೂ ಓದಿ: ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಬರ್ಬರ ಕೊಲೆ: ಅಪರಾಧಿಗಳಿಗೆ ಕೆಮಿಕಲ್‌ ಕ್ಯಾಸ್ಟ್ರೇಶನ್‌ ಶಿಕ್ಷೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights