ಒಮಿಕ್ರೋನ್ ಕೊರೊನಾ ರೂಪಾಂತರಿ ವೇಗವಾಗಿ ಹರಡುತ್ತದೆ; ಎಚ್ಚರಿಕೆ ವಹಿಸಲು WHO ಕರೆ!
ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ B.1.1.529 ಸ್ಟ್ರೈನ್ ಎಂಬ ಹೊಸ ರೀತಿಯ ಕೊರೊನಾ ರೋಪಾಂತರಿ ವೈರಸ್ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯು ಈ ರೂಪಾಂತರಿಯನ್ನು ಒಮಿಕ್ರೋನ್ (Omicron) ಎಂದು ಮರುನಾಮಕರಣ ಮಾಡಿದೆ.
ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಈ ವೈರಸ್‌ನ ಲಕ್ಷಣಗಳು ಮೊದಲಿದ್ದ ವೈರಸ್‌ನ ಲಕ್ಷಣಗಳನ್ನೇ ಹೊಂದಿತ್ತದೆ. ಈ ರೂಪಾಂತರಿಯು ಇತರ ರೂಪಾಂತರಿಗಳಾ ಆಲ್ಫಾ, ಬೀಟಾ ಮತ್ತು ಗಾಮಾದ ರೀತಿಯಲ್ಲಿ ದುರ್ಬಲವಾಗಿದೆಯೇ ಅಥವಾ ಹೆಚ್ಚು ಗಂಭೀರ ಸ್ವರೂಪವನ್ನು ಹೊಂದಿದೆಯೇ ಎಂದು ಪರಿಶೀಲಿಸಬೇಕಿದೆ ಎಂದು ಹೇಳಿದೆ.
Omicron ಹರಡುವಿಕೆಗೆ ಕಡಿವಾಣ ಹಾಕಲು ಹಲವು ರಾಷ್ಟ್ರಗಳು ದಕ್ಷಿಣ ಆಫ್ರೀಕಾದಿಂದ ಬರುವ ವಿಮಾನಗಳನ್ನು ನಿಷೇಧಿಸಲು ಮುಂದಾಗಿವೆ. ಆದರೆ, ಸ್ಟಾಕ್ ಮಾರುಕಟ್ಟೆಗಳು ಮತ್ತು ತೈಲ ಬೆಲೆಗಳ ಮೇಲೂ ಈ ನಿರ್ಬಂಧಗಳು ಪರಿಣಾಮ ಬೀರುವ ಸಾಧ್ಯತೆ ಇದ್ದು, ಜಾಗತಿಕ ಆರ್ಥಿಕ ಚೇತರಿಕೆಗೆ ಭಾರೀ ಹೊಡೆತವನ್ನು ನೀಡುತ್ತವೆ ಎಂದು WHO ಹೇಳಿದೆ.
“ಈ ಹೊಸ ರೂಪಾಂತರಿಯು ಹಾನಿಕಾರಕ ಬದಲಾವಣೆಯನ್ನು ಸೂಚಿಸುತ್ತವೆ ಎಂಬ ಪುರಾವೆಗಳ ಆಧಾರದ ಮೇಲೆ B.1.1.529 ಅನ್ನು ಕಾಳಜಿಯ ರೂಪಾಂತರಿ (VOC) ಎಂದು WHO ಹೇಳಿದ್ದು, ಇದನ್ನು Omicron ಎಂದು ಹೆಸರಿಸಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಲ್ಲಿ ಮೊದಲ ಬಾರಿಗೆ ಒಮಿಕ್ರೋನ್ ಸೋಂಕು ದೃಢೀಕರಿಸಲ್ಪಟ್ಟಿದೆ. ಇತ್ತೀಚಿನ ವಾರಗಳಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಸೋಂಕುಗಳು ತೀವ್ರವಾಗಿ ಹೆಚ್ಚುತ್ತಿದ್ದು, ಈ ರೂಪಾಂತರಿಯೇ ಮೂಲ ಕಾರಣವೆಂದು ಹೇಳಲಾಗಿದೆ. ಪ್ರಾಥಮಿಕ ಪುರಾವೆಗಳನ್ನು ಗಮನಿಸಿದರೆ, ಇತರ VOC ಗಳಿಗಿಂತ ಈ ರೂಪಾಂತರಿಯು ಹೆಚ್ಚಿನ ಅಪಾಯವನ್ನು ಸೂಚಿಸುತ್ತವೆ ಎಂದು WHO ಹೇಳಿದೆ.
ದಕ್ಷಿಣ ಆಫ್ರಿಕಾದ ಹೊರತಾಗಿ, ಮಲಾವಿಯಿಂದ ಇಸ್ರೇಲ್ ಪ್ರಯಾಣಿಸಿದ ವ್ಯಕ್ತಿಯಲ್ಲಿಯೂ ಓಮಿಕ್ರೋನ್ ಪತ್ತೆಯಾಗಿದೆ. ಅಲ್ಲದೆ, ಬೆಲ್ಜಿಯಂ ಮತ್ತು ಹಾಂಗ್ ಕಾಂಗ್‌ನಲ್ಲೂ ಈ ರೂಪಾಂತರಿ ಪತ್ತೆಯಾಗಿದೆ.
ಇದನ್ನೂ ಓದಿ: ಕೋವಿಡ್ ಮಾತ್ರೆಗಳು ಭರವಸೆ ನೀಡುತ್ತವೆ; ಆದರೆ, ಅವುಗಳ ಉಪಯುಕ್ತತೆ ಇನ್ನೂ ಅನಿಶ್ಚಿತ!