ಲಾಕ್ ಡೌನ್ ಎಫೆಕ್ಟ್ : ಜಾತ್ರೆ ಮಾಡಲು ಬಂದ್ರು ಲಘುಲಾಠಿ ಪ್ರಸಾದ ತಿಂದ್ರು

ಲಾಕ್ ಡೌನ್ ನಡುವೆಯೂ ಮೊನ್ನೆಯಷ್ಟೇ ಕಲಬುರಗಿಯಲ್ಲಿ ಒಂದು ಬಾರಿಯಲ್ಲ 2 ಬಾರಿ ಜನ ಜಾತ್ರೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೀಗ ಇದೇ ರೀತಿ ಜನ ಗದಗದಲ್ಲೂ ಜಾತ್ರೆ ಮಾಡಲು ಮುಂದಾಗಿ ಪೊಲೀಸರಿಂದ ಲಾಠಿ ಏಟು ತಿಂದಿದ್ದಾರೆ.

ಹೌದು…  ಲಾಕ್ ಡೌನ ನಡುವೆಯೂ ಜಾತ್ರೆ ಮಾಡಲು ಬಂದ ಜನರಿಗೆ ಪೊಲೀಸರು ಲಾಠಿ ಏಟು ಕೊಟ್ಟ ಘಟನೆ ಗದಗದ  ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದಲ್ಲಿ ನಡೆದಿದೆ.ಮುಶಿಗೇರಿಯಲ್ಲಿ ಮುಖಂಡರು ಗ್ರಾಮದೇವತೆ ಪೂಜಾ ಕೊನೆಯ ವಾರ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆದಿದ್ದಾರೆ.

ಜಿಲ್ಲೆಯಲ್ಲಿ ನಾಲ್ವರಿಗೆ ಕೊರೊನಾ ವೈರಸ್ ತಗುಲಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಹೀಗಿದ್ದರೂ ಜನ ಮಾತ್ರ ಇನ್ನೂ ಬುದ್ಧಿ ಕಲಿಯುತ್ತಿಲ್ಲ. ಗ್ರಾಮ ಮಟ್ಟದ ಪಂಚಾಯಿತಿ ಅಧಿಕಾರಿಯ ನಿರ್ಲಕ್ಷ್ಯತನವೂ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಮುಶಿಗೇರಿಯಲ್ಲಿ ಮಂಗಳವಾರ ಬೆಳಗ್ಗೆ ಆಶಾ ಕಾರ್ಯಕರ್ತೆಯರನ್ನು ಗ್ರಾಮಸಭೆಗೆ ಕರೆಯದೇ ತಮ್ಮಷ್ಟಕ್ಕೆ ತಾವೇ ಸಭೆ ನಡೆಸಿದ್ದಾರೆ. ಈ ಸಭೆನಲ್ಲಿ ಗ್ರಾಮದೇವತೆ ಜಾತ್ರೆ ಬಗ್ಗೆ ಗುಪ್ತಸಭೆ ನಡೆಸಿದ್ದಾರೆ ಎನ್ನುವ ಆರೋಪ ಸಹ ಕೇಳಿಬರುತ್ತಿದೆ. ದೇವರಿಗೆ ಉಡಿತುಂಬವ ಕಾರ್ಯದ ವೇಳೆ ಜನರು ಜಮಾವಣೆಗೊಂಡಿದ್ದರು. ಗುಂಪು ಚದುರಿಸಲು ಪೊಲೀಸರು ಲಘುಲಾಠಿ ಪ್ರಸಾದ ನೀಡಿ ಕಳಿಸಿದ್ದಾರೆ. ಗ್ರಾಮದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಲಾಗಿದೆ.

ದೇಶದಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 19 ಸಾವಿರದ 984ಕ್ಕೆ ತಲುಪಿದೆ. ಇದರಲ್ಲಿ 15 ಸಾವಿರದ 474 ಆ್ಯಕ್ವೀವ್​ ಪ್ರಕರಣಗಳಿದ್ದು ಇಲ್ಲಿಯವರೆಗೆ 3,870 ಮಂದಿ ಗುಣಮುಖರಾದ್ದಾರೆ. ಅಲ್ಲದೇ, ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಒಟ್ಟಾರೆ 640ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1383 ಹೊಸ ಪ್ರಕರಣಗಳು ದಾಖಲಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಒಟ್ಟು 50 ಮಂದಿ ಸಾವಿಗೀಡಾಗಿದ್ದಾರೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights