ತನ್ನ ತಾಯಿಯೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು ದೂರು ನೀಡಿದ್ದ ಬಾಲಕ; ಪ್ರಕರಣ ವಜಾ

ತನ್ನ ಮೇಲೆ ಸತತ ಮೂರು ವರ್ಷಗಳಿಂದ ತನ್ನ ತಾಯಿಯೇ ಅತ್ಯಾಚಾರ ಎಸಗಿದ್ದಾಳೆ ಎಂದು 13 ವರ್ಷದ ಬಾಲಕನೊಬ್ಬ ದೂರು ನೀಡಿದ್ದ ಪ್ರಕರಣವನ್ನು ಪೋಕ್ಸೊ ನ್ಯಾಯಲಯ ವಜಾಗೊಳಿಸಿದ್ದು, ತಾಯಿಯನ್ನು ಆರೋಪದಿಂದ ಖುಲಾಸೆಗೊಳಿಸಿದೆ.

ಕೇರಳದ ಕಡಕವೂರ್‌ ಎಂಬಲ್ಲಿನ ನಿವಾಸಿಯಾಗಿದ್ದ ಬಾಲಕ, ತನ್ನ ತಾಯಿ ವಿರುದ್ದವೇ 2020ರ ಡಿಸೆಂಬರ್‌ನಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿದ್ದ. ದೂರಿನಲ್ಲಿ, ತನ್ನ ಮೇಲೆ ತನ್ನ ತಾಯಿ ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾಳೆ ಎಂದು ಆರೋಪಿಸಿದ್ದ.

ದೂರಿನ ಆಧಾರ ಮೇಲೆ ಆಯೆಯನ್ನು ಪೊಲೀಸರು ಬಂಧಿಸಿದ್ದರು. ಆಕೆ ಒಂದು ತಿಂಗಳ ಕಾಲ ಜೈಲಿನಲ್ಲಿದ್ದರು. ಬಳಿಕ ವಿಚಾರಣೆ ನಡೆಸಿದ್ದ ತಿರುವನಂತಪುರಂನ ಪೋಕ್ಸೊ ನ್ಯಾಯಾಲಯ ಪ್ರಕರಣದ ತನಿಖೆ ಆದೇಶಿಸಿ, ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.

ಐಜಿ ಅರ್ಶಿತಾ ಅತ್ತಲ್ಲೂರು ನೇತೃತ್ವದ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಬಾಲಕನು ತಾಯಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾನೆ ಎಂದು ವರದಿಯಲ್ಲಿ ಹೇಳಿದೆ. ಅಲ್ಲದೆ, ಆಕೆಯ ವಿಚ್ಛೇದಿತ ಪತಿಯ ಕುತಂತ್ರದಿಂದ ಬಾಲಕ ಈ ರೀತಿ ದೂರು ನೀಡಿದ್ದಾರೆ ಎಂದೂ ತನಿಖಾ ತಂಡ ಹೇಳಿದೆ.

ತಂಡವು ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ನ್ಯಾಯಾಲಯವು ಮಹಿಳೆಯ ವಿರುದ್ಧದ ಕಾನೂನು ಕ್ರಮಗಳನ್ನು ಶನಿವಾರ ವಜಾಗೊಳಿಸಿದೆ. ಅಲ್ಲದೆ, ತನಿಖಾ ತಂಡದ ವಿರುದ್ದ ಆಕೆಯ ವಿಚ್ಛೇದಿತ ಮತಿ ಸಲ್ಲಿಸಿದ್ದ ಮನವಿಯನ್ನೂ ವಜಾಗೊಳಿಸಲಾಗಿದೆ.

2017 ರಿಂದ 2020ರ ಅವಧಿಯಲ್ಲಿ ತನ್ನ ತಾಯಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಬಾಲಕ ದೂರು ನೀಡಿದ್ದ, ಪ್ರಕರಣ ದಾಖಲಿಸಿಕೊಂಡಿದ್ದ ಕಡಕ್ಕಾವೂರು ಪೊಲೀಸರು 2020ರ ಡಿಸೆಂಬರ್ 28 ರಂದು ತಾಯಿಯನ್ನು ಬಂಧಿಸಿದ್ದರು. ಬಂಧನದ ಒಂದು ತಿಂಗಳ ನಂತರ ಜಾಮೀನು ಪಡೆದು ಹೊರಬಂದಿದ್ದರು.

ಇದನ್ನೂ ಓದಿ: ಬಾಲಕಿ ಮೇಲೆ ಪೇದೆಯಿಂದ ಲೈಂಗಿಕ ದೌರ್ಜನ್ಯ; ಬಯಲಾಯ್ತು ಪೊಲೀಸನ ಕರಾಳ ಮುಖ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights