ಹಾಸನ: ವರದಕ್ಷಿಣೆ ದೌರ್ಜನ್ಯ; ಮದುವೆಯಾದ 19 ದಿನಗಳಲ್ಲೇ ಯುವತಿ ಸಾವು

ಜಗತ್ತು ಎಷ್ಟೇ ಮುಂದುವರೆದರೂ ಕೆಲವು ಅನಿಷ್ಟ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ. ಇದರಲ್ಲಿ ವರದಕ್ಷಿಣೆ ಪದ್ದತಿಯೂ ಒಂದು. ವರದಕ್ಷಿಣೆ ಕಿರುಕುಳಕ್ಕೆ ಮಹಿಳೆಯರು ಬಲಿಯಾಗುತ್ತಲೇ ಇದ್ದಾರೆ. ಇದೇ ದೌರ್ಜನ್ಯದಿಂದಾಗಿ 22 ವರ್ಷದ ಯುವತಿಯೊಬ್ಬರು ಬಲಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಸಲೀಂ ನಗರದಲ್ಲಿ ಫಿಜಾ ಖನಂ ಎಂಬ ಯುವತಿ ಮದುವೆಯಾದ ಮೂರೇ ವಾರದಲ್ಲಿ ಸಾವನ್ನಪ್ಪಿದ್ದಾರೆ. ಆಕೆಯ ಪೋಷಕರು ವರದಕ್ಷಿಣೆ ಕಿರುಕುಳ ನೀಡಿ ತಮ್ಮ ಮಗಳನ್ನು ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ ಶಾಗಿಲ್ ಅಹಮದ್, ಇಬ್ಬರಿಗೂ ಡಿಸೆಂಬರ್ 2 ರಂದು ವಿವಾಹವಾಗಿತ್ತು. ಆದರೆ, ಮದುವೆಯಾದ 19ನೇ ದಿನಕ್ಕೆ ಫಿಜಾ ಖಾನಂ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ತಮ್ಮ ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪಿಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಿಜಾ ಖಾನಂ ಅವರು ಪತಿ ಶಾಗಿಲ್ ಅಹಮದ್ ಸೇರಿದಂತೆ ಆತನ ಸಹೋದರರು ಮತ್ತು ಶಾಗಿಲ್‌ನ ತಾಯಿಯ ವಿರುದ್ಧ ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವುಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಮತಾಂದ ಸರ್ವಾಧಿಕಾರ: ರಾಜ್ಯದ ಮುಂದೆ ‘ಧಾರ್ಮಿಕ ಬಂಧೀಖಾನೆಯ ವಿದೇಯಕ’

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights