ಕೋಲ್ಕತ್ತಾ ಪಾಲಿಕೆ ಚುನಾವಣೆ: ಠೇವಣಿ ಕಳೆದುಕೊಂಡ ಮೊದಲ ಸ್ಥಾನದಲ್ಲಿ ಬಿಜೆಪಿ!

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದೆ. 144 ವಾರ್ಡ್‌ಗಳ ಪೈಕಿ ಟಿಎಂಸಿ ಬರೋಬ್ಬರಿ 134 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದೇ ಚುನಾವಣೆಯಲ್ಲಿ ಬಿಜೆಪಿ ಅತ್ಯದಿಕ ಠೇವಣಿ ಮೊತ್ತವನ್ನು ಕಳೆದುಕೊಂಡಿದೆ ಎಂದು ತಿಳಿದು ಬಂದಿದೆ.

ಠೇವಣಿ ಕಳೆದುಕೊಂಡಿರುವ ಅತೀದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೆ, ಕಾಂಗ್ರೆಸ್‌ ನಂತರದ ಸ್ಥಾನದಲ್ಲಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ, ಎಡರಂಗದ ಸಾಧನೆ ಉತ್ತಮಮಾಗಿದೆ.

ಇದನ್ನೂ ಓದಿ:‘ನೀತಿಗೆಟ್ಟವರು, ದ್ರೋಹಿಗಳ ಗುಂಪು ಪಕ್ಷ ನಡೆಸುತ್ತಿದೆ’: ಕೊಲ್ಕತ್ತಾ ಪಾಲಿಕೆ ಚುನಾವಣೆ ಸೋಲಿನ ಬಳಿಕ ಸ್ವಪಕ್ಷದ ವಿರುದ್ಧ ಬಿಜೆಪಿ ಹಿರಿಯ ನಾಯಕ ಆಕ್ರೊಶ

144 ವಾರ್ಡ್‌ಗಳ ಕೊಲ್ಕತ್ತಾ ಮುನ್ಸಿಪಲ್‌‌ನಲ್ಲಿ ಬಿಜೆಪಿಯು 142 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಇವುಗಳಲ್ಲಿ 116 ಅಭ್ಯರ್ಥಿಗಳ ಠೇವಣಿ ಕೈತಪ್ಪಿದೆ. ಚಲಾವಣೆ ಆಗಿರುವ ಮತಗಳ ಪೈಕಿ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯು ಆರನೇ ಒಂದು ಭಾಗವನ್ನು ಗಳಿಸಲು ವಿಫಲವಾದರೆ ಠೇವಣಿ ಕಳೆದುಕೊಳ್ಳಬೇಕಾಗುತ್ತದೆ.

“ಇದು ವಾಸ್ತವ, ಇದು ಮುನ್ಸಿಪಲ್‌ ಚುನಾವಣೆಯಲ್ಲಿ ನಮ್ಮ ಪಕ್ಷದ ಕಳಪೆ ಪ್ರದರ್ಶನವಾಗಿದೆ. 2010ರಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಶಾಸಕರೇ ಇಲ್ಲದಿದ್ದಾಗ ಕೊಲ್ಕತ್ತಾ ಮುನ್ಸಿಪಲ್ 144 ವಾರ್ಡ್‌ಗಳಲ್ಲಿ ಮೂರು ವಾರ್ಡ್‌ಗಳನ್ನು ಗೆದ್ದಿದ್ದೆವು. ಈ ಬಾರಿ 70 ಶಾಸಕರು ಮತ್ತು 17 ಸಂಸದರ ದಂಡು ಹೊಂದಿದ್ದರೂ, ಪಕ್ಷವು ಮೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲು ವಿಫಲವಾಗಿದೆ. 2015 ರಲ್ಲಿ ಏಳು ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಪಕ್ಷವು ಉತ್ತಮ ಸಾಧನೆ ಮಾಡಿತ್ತು” ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಚುನಾವಣಾ ಆಯೋಗವು ಮುನ್ಸಿಪಲ್‌‌ ಚುನಾವಣೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ತಲಾ ರೂ 500 ರೂ ಹಾಗೂ ಮಹಿಳಾ ಅಭ್ಯರ್ಥಿಗಳು ಮತ್ತು ಎಸ್‌ಸಿ ಅಭ್ಯರ್ಥಿಗಳಿಗೆ 250 ರೂ.ಗಳನ್ನು ಠೇವಣಿ ಪಡೆಯುತ್ತದೆ.

ಇದನ್ನೂ ಓದಿ: ಹೊಸಪೇಟೆ: ಬಿಜೆಪಿ ಅಭ್ಯರ್ಥಿಗೆ ಬಿ ಫಾರಂ ಕೊಟ್ಟು ಕಾಂಗ್ರೆಸ್‌ ಯಡವಟ್ಟು!

ರಾಜ್ಯದ ರಾಜಕೀಯ ವಿಶ್ಲೇಷಕರ ಪ್ರಕಾರ, ಕೊಲ್ಕತ್ತಾ ಮುನ್ಸಿಪಲ್ ಚುನಾವಣೆಯಲ್ಲಿ ಸಿಪಿಐ(ಎಂ) ತನ್ನ ಗಳಿಯಲ್ಲಿ ಹೆಚ್ಚು ಸಾಧನೆ ಮಾಡಿರುವುದು ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದ್ದು, ಹೀನಾಯ ಸೋಲಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಎಡರಂಗದ ಮತಬ್ಯಾಂಕ್‌‌‌‌ ಅನ್ನು ಒಡೆದು ಬಂಗಾಳದ ಈ ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಮತಗಳಿಸಿತ್ತು. ಆದರೆ ಕೊಲ್ಕತ್ತಾ ಮುನ್ಸಿಪಲ್‌ ಚುನಾವಣೆಯಲ್ಲಿ ಬಿಜೆಪಿಯು ಹೀನಾಯವಾಗಿ ಸೋಲಲು ಎಡರಂಗ ಕಾರಣ. ಯಾಕೆಂದರೆ ಎಡರಂಗವು ತನ್ನ ಹಿಂದಿನ ಮತ ಹಂಚಿಕೆಯ ಒಂದು ಭಾಗವನ್ನು ಮರಳಿ ಪಡೆದಿದೆ” ಎಂದು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಬಿಷ್ಣುಪ್ರಿಯಾ ದತ್ತಾ ಗುಪ್ತಾ ಹೇಳಿದ್ದಾರೆ ಎಂದು TNIE ವರದಿ ಹೇಳಿದೆ.

ಡಿಸೆಂಬರ್ 19 ರಂದ ಪಾಲಿಕೆಯ 144 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. 144 ಕಾರ್ಪೊರೇಟರ್‌ಗಳ ಸ್ಥಾನಕ್ಕೆ ಒಟ್ಟು 950 ಅಭ್ಯರ್ಥಿಗಳು ಕಣದಲ್ಲಿದ್ದರು. ಪಾಲಿಕೆಯ ಈ ಹಿಂದಿನ ಚುನಾವಣೆಗಳು 2015 ರಲ್ಲಿ ನಡೆದಿದ್ದವು. ಡಿಸೆಂಬರ್‌ 21 ರ ಮಂಗಳವಾರದಂದು ಫಲಿತಾಂಶ ಹೊಬಿದ್ದಿದ್ದು, ಇದರಲ್ಲಿ ಟಿಎಂಸಿ 134 ವಾರ್ಡ್‌ಗಳಲ್ಲಿ ಗೆದ್ದರೆ, ಬಿಜೆಪಿ ಕೇವಲ 3 ವಾರ್ಡ್‌‌ಗಳಲ್ಲಷ್ಟೇ ಗೆಲುವು ಪಡೆದುಕೊಂಡಿದೆ.

ಉಳಿದಂತೆ ಸಿಪಿಐಎಂ 1 ವಾರ್ಡ್‌, ಸಿಪಿಐ ಒಂದು ವಾರ್ಡ್‌, ಕಾಂಗ್ರೆಸ್‌ 2 ಮತ್ತು ಪಕ್ಷೇತರ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ.

2015 ರ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ 114 ವಾರ್ಡ್‌ಗಳಲ್ಲಿ, ಸಿಪಿಎಂ 10, ಬಿಜೆಪಿ 7, ಕಾಂಗ್ರೆಸ್‌ 5, ಸಿಪಿಐ 2, ಐಎನ್‌ಡಿ 3, ಆರ್‌ಎಸ್‌ಪಿ 2 ಮತ್ತು ಎಐಎಫ್‌ಬಿ 1 ಗೆದ್ದಿದ್ದವು. ಆದರೆ ಈ ಬಾರಿ ಟಿಎಂಸಿ ಬಹುತೇಕ ಏಕಮೇವ ಪಕ್ಷವಾಗಿ ಹೊರಹೊಮ್ಮಿದೆ.

ಸುಮಾರು 40.5 ಲಕ್ಷ ಮತದಾರರಲ್ಲಿ ಶೇಕಡಾ 63 ರಷ್ಟು ಮತದಾರರು ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಸಹ, ಎರಡು ಬೂತ್‌ಗಳಲ್ಲಿ ಬಾಂಬ್‌ಗಳನ್ನು ಎಸೆಯುವುದು ಸೇರಿದಂತೆ ಹಿಂಸಾಚಾರದ ಘಟನೆಗಳು ನಡೆದಿದ್ದವು.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಕೋಲ್ಕತ್ತಾ ಪಾಲಿಕೆಯ 144 ಸ್ಥಾನಗಳಲ್ಲಿ 134 ಗೆದ್ದ ಟಿಎಂಸಿ; 3 ಸ್ಥಾನಕ್ಕಿಳಿದ ಬಿಜೆಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights