Fact check: ಲತಾ ಮಂಗೇಶ್ಕರ್‌ ಅಂತಿಮ ನಮನದ ವೇಳೆ ಶಾರುಖ್ ಜೊತೆಗಿರುವುದು ಗೌರಿ ಖಾನ್ ಅಲ್ಲ

ಅಗಲಿದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ರವರಿಗೆ ಇಡೀ ದೇಶವೇ ಭಾವಪೂರ್ಣ ಶ್ರಧ್ದಾಂಜಲಿ ಸಲ್ಲಿಸಿತು. ದೇಶದ ನಾಯಕರು ಸೇರಿದಂತೆ, ಚಿತ್ರರಂಗದ ನಟ-ನಟಿಯರು ಮಂಬೈಗೆ ತೆರಳಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು. ಈ ವೇಳೆ ಬಾಲಿವುಡ್ ನಟ ಶಾರುಖ್ ಖಾನ್‌ ತಮ್ಮ ಪತ್ನಿ ಗೌರಿ ಖಾನ್ ಅವರೊಂದಿಗೆ  ಅಂತಿಮ ನಮನ ಸಲ್ಲಿಸುತ್ತಿದ್ದಾರೆ ಎಂಬ ಚಿತ್ರಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿವೆ.

ವೈರಲ್ ಪೋಟೋದಲ್ಲಿ ಶಾರುಖ್ ಖಾನ್ ಇಸ್ಲಾಂ ಪದ್ದತಿಯಂತೆ ದುವಾ ಮಾಡುತ್ತಿದ್ದರೆ ಅವರ ಪತ್ನಿ ಗೌರಿ ಖಾನ್ ಹಿಂದೂ ಸಂಪ್ರದಾಯದಂತೆ ಕೈಮುಗಿದು ಅಂತಿಮ ನಮನ ಸಲ್ಲಿಸಿದ್ದಾರೆ ಎಂಬ ಸಾಲುಗಳೊಂದಿಗೆ ಹಂಚಿಕೆಯಾಗಿವೆ.

ಶಾರಖ್ ಖಾನ್ ಮತ್ತುಗೌರಿ ಖಾನ್ ಎಂದು ಹೇಳುತ್ತಿರುವ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋ 

ಫ್ಯಾಕ್ಟ್‌ಚೆಕ್:

ಹೌದು ಇದು ಗೌರಿ ಖಾನ್ ಅಲ್ಲ, ನಿನ್ನೆ ನಡೆದ ಲತಾ ಮಂಗೇಶ್ಕರ್ ಅವರ ಅಂತಿಮ ನಮನ ಸಲ್ಲಿಸುವ ವೇಳೆ ಶಾರುಖ್ ಖಾನ್ ಜೊತೆಯಲ್ಲಿ ಇದ್ದದ್ದು ಅವರ ಪತ್ನಿ ಗೌರಿ ಖಾನ್ ಅಲ್ಲ ಅದು ಅವರ ಮ್ಯಾನೇಜರ್‌ ಪೂಜಾ ದದ್ಲಾನಿ ಎಂದು ಖಚಿತವಾಗಿದೆ. ನೆನ್ನೆ ಗೌರಿಯವರು ಶಾರುಖ್ ಅವರೊಂದಿಗೆ ಅಂತಿಮ ನಮನ ಸಲ್ಲಿಸಲು ಹೋಗಿರಲಿಲ್ಲ ಎಂದು ವರದಿಯಾಗಿದೆ.

ಹಲವರು ತಮ್ಮ  ಟ್ವಿಟ್ಟರ್ ಮೂಲಕ ಶಾರುಖ್ ಖಾನ್ ಪೂಜಾ ಅವರೊಂದಿಗೆ ಫತೇಹಾ ಓದುತ್ತಿರುವ ಅದೇ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ, ಎಲ್ಲರೂ ಅದು ಗೌರಿ ಖಾನ್ ಎಂದು ನಂಬಿದ್ದರು. ಇನ್ನು ಕೆಲವರು ಅದೇ ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಜೊತೆ ಇರುವುದು ಪೂಜಾ, ಅದು ಗೌರಿ ಅಲ್ಲ ಎಂದು ತಿದ್ದುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

https://twitter.com/Sharanyashettyy/status/1490369718884380674?ref_src=twsrc%5Etfw%7Ctwcamp%5Etweetembed%7Ctwterm%5E1490369718884380674%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fentertainment%2Ffact-check-did-shah-rukh-khan-attend-lata-mangeshkars-funeral-with-wife-gauri-khan-know-truth-behind-viral-photo-5226764%2F

ಹಾಗಾಗಿ ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿರುವ ಶಾರುಖ್ ಖಾನ್ ಅವರೊಂದಿಗಿರುವುದು ಪತ್ನಿ ಗೌರಿ ಖಾನ್ ಎಂಬುದು ಸುಳ್ಳು, ಅಲ್ಲಿರುವುದು ಶಾರುಖ್ ಖಾನ್ ಅವರ ಮ್ಯಾನೇಜರ್‌ ಪೂಜಾ ದದ್ಲಾನಿ ಎಂಬುದು ಫ್ಯಾಕ್ಟ್‌ಚೆಕ್ ಮೂಲಕ ಖಚಿತವಾಗಿದೆ.


ಇದನ್ನೂ ಓದಿ: Fact check: ಸಮಾಜವಾದಿ ಪಕ್ಷದ ರ್‍ಯಾಲಿಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆ ಕೂಗಿಲ್ಲ, ಇದು BJP ಹಬ್ಬಿಸಿದ ಸುಳ್ಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights