Fact check: 2024 ಚುನಾವಣಾ ಭವಿಷ್ಯವನ್ನು ಪ್ರಶಾಂತ್ ಕಿಶೋರ್‌ ಹೇಳಿಲ್ಲ

ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರು ಹೇಳಿದ್ದಾರೆ ಎನ್ನಲಾದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ . “2024ರ ವೇಳೆಗೆ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲಲಿದ್ದು, ಗುಜರಾತ್‌ನಲ್ಲಿ ಮಾತ್ರ ಆಡಳಿತ ನಡೆಸಲಿದೆ” ಎಂದು ಅವರು ಹೇಳಿದ್ದಾರೆ. “ಗುಜರಾತಿನಲ್ಲಿಯೂ ಅದರ ಕಾರ್ಯಕ್ಷಮತೆ ಕಳಪೆಯಾಗಿರುತ್ತದೆ” ಎಂದು ಫೇಸ್‌ಬುಕ್ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ. ( ಕೆಳಗಿನ ಲಿಂಕ್ ಗಮನಿಸಬಹುದು).

Facebook pages ‘Your Voice‘ [over 2 lakh followers], Charcha chopal -चौपाल चर्चा [over 19K followers] and ‘Article 19‘ [over 60 followers] shared this image. The three posts gained over 4,000 likes cumulatively.

ಹಾಗೆಯೇ, 50,000 ಕ್ಕೂ ಹೆಚ್ಚು ಫಾಲೋರ್ಯ್ಸ್ ಹೊಂದಿರುವ ‘ ‘Rahul gandhi future of India  🇮🇳’ ಗುಂಪು ಸೇರಿದಂತೆ ಹಲವಾರು ಇತರ ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಹೇಳಿಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರಶಾಂತ್ ಕಿಶೋರ್ ಅವರ ಹೇಳಿಕೆಯನ್ನು ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. ವೈರಲ್ ಪೋಸ್ಟ್‌ನಲ್ಲಿರುವ ಫೋಟೋವು ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ತೆಗೆದಿರುವುದಾಗಿದ್ದು ಅದನ್ನು ಎಡಿಟ್ ಮಾಡಿ ಪ್ರಶಾಂತ್ ಅವರ ಹೇಳಿಕೆ ಎಂಬಂತೆ ವೈರಲ್ ಮಾಡಲಾಗುತ್ತಿದೆ.

ಪ್ರಶಾಂತ್ ಕಿಶೋರ್ ಅವರ ವೈರಲ್ ಫೋಟೋವನ್ನು ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಭಾಗವಹಿಸಿದ ಸಂದರ್ಭದ ಆಧಾರಗಳನ್ನು ಕೀವರ್ಡ್ ಮೂಲಕ ಸರ್ಚ್ ಮಾಡಲಾಯಿತು.  2021 ರಲ್ಲಿ The Indian Express (IE) ಆಯೋಜಿಸಿದ್ದ ಐಡಿಯಾ ಎಕ್ಸ್‌ಚೇಂಜ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಾಂತ್ ಕಿಶೋರ್ ಮಾತನಾಡಿದ್ದ ಫೋಟೋವನ್ನೇ ಬಳಸಿಕೊಂಡು ಎಡಿಟ್ ಮಾಡಿ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆ ಹಲವು ಪತ್ರಕರ್ತರು ಕಿಶೋರ್‌ಗೆ ಪ್ರಶ್ನೆಗಳನ್ನು ಕೇಳಿದ್ದು ಅವುಗಳಿಗೆ ಉತ್ತರಿಸಿದ್ದಾರೆ. ಈ ಸಂದರ್ಭದ ವಿಡಿಯೊ ಫೂಟೇಜ್ ಗಳನ್ನು ಬಳಸಿಕೊಂಡು  2024 ಕ್ಕೆ BJP ಸೋಲುತ್ತದೆ ಎಂದು ಪ್ರಶಾಂತ್‌ ಕಿಶೋರ್‌ ಹೇಳಿರುವುದಾಗಿ ಹಬ್ಬಿಸಲಾಗಿದೆ.

ಆಲ್ಟ್‌ ನ್ಯೂಸ್‌ನೊಂದಿಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, “ಇದು ನನ್ನ ಹೇಳಿಕೆಯಲ್ಲ” ಎಂದು ಖಚಿತಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: Fact check: “ಬುರ್ಖಾ ಸುಡಲು ಹೋಗಿ ಬೆಂಕಿಗೆ ಆಹುತಿಯಾದ RSS ಮಹಿಳೆ” ಎಂಬ ಸುದ್ದಿ ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights