ಫ್ಯಾಕ್ಟ್‌ಚೆಕ್: ನೃತ್ಯ ಮಾಡುತ್ತಿರುವ ಮಹಿಳೆ ರಾಜಸ್ಥಾನದ ಶ್ರೀಗಂಗಾನಗರದ ಜಿಲ್ಲಾಧಿಕಾರಿಯಲ್ಲ!

ಮಹಿಳೆಯೊಬ್ಬರು ತಲೆಯ ಮೇಲೆ ಮಡಕೆಯನ್ನು ಇಟ್ಟುಕೊಂಡು ರಾಜಸ್ಥಾನಿ ಸಾಂಪ್ರದಾಯಿಕ ನೃತ್ಯ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ನೃತ್ಯ ಮಾಡುತ್ತಿರುವ ಮಹಿಳೆಯನ್ನು ಶ್ರೀಗಂಗಾನಗರ ಜಿಲ್ಲೆಯ ಜಿಲ್ಲಾಧಿಕಾರಿ ರುಕ್ಮಣಿ ರಿಯಾರ್ (ಐಎಎಸ್) ಎಂದು ಹೇಳಿಕೊಳ್ಳುತ್ತಿದ್ದಾರೆ. ” ನೃತ್ಯ ಮಾಡುತ್ತಿರುವ ಇವರು ಸಾಮಾನ್ಯ ಮಹಿಳೆ ಅಲ್ಲ, ರುಕ್ಮಣಿ ರಿಯಾರ್, ಗಂಗಾನಗರ ಜಿಲ್ಲೆಯ (ರಾಜಸ್ಥಾನ)  ಜಿಲ್ಲಾಧಿಕಾರಿ ಎಂದರೆ ನೀವು ನಂಬುವುದಿಲ್ಲ. ಐಎಎಸ್ ಆಗಿದ್ದರೂ ಅವರ ಸಂಸ್ಕೃತಿಗೆ ಎಷ್ಟು ಮನ್ನಣೆ ನೀಡುತ್ತಿದ್ದಾರೆ ನೋಡಿ. ಐಎಎಸ್ ಅಧಿಕಾರಿ ಆಗಿದ್ದರೂ ಅವರ ಕಲೆ ಸಂಸ್ಕೃತಿಗೆ ಹೇಗೆ ಬೆಲೆ ಕೊಡುತ್ತಿದ್ದಾರೆ ಎಂದು ಹೇಳಲಾಗಿದೆ.

ಹಾಗಿದ್ದರೆ ವಿಡಿಯೋದಲ್ಲಿ ಸಾಂಸ್ಕೃತಿಕ ನೃತ್ಯ ಮಾಡುತ್ತಿರುವ ಮಹಿಳೆ ನಿಜವಾಗಿಯೂ ಶ್ರೀಗಂಗಾನಗರ ಜಿಲ್ಲಾಧಿಕಾರಿ ರುಕ್ಮಣಿ ರಿಯಾರ್ ಆಗಿದ್ದಾರಾ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಸರ್ಚ್ ಮಾಡಿದಾಗ, ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ವಿಡಿಯೋಗಳು ಲಭ್ಯವಾಗಿವೆ. ವೈರಲ್ ಆಗುತ್ತಿರುವ ವಿಡಿಯೋ ಇತ್ತೀಚಿನದಲ್ಲ ಇದು ಹಳೆಯ ವೀಡಿಯೊ ಎಂದು ತಿಳಿದು ಬಂದಿದೆ.

ಗೂಗಲ್‌ನಲ್ಲಿ ಲಭ್ಯವಾಗಿರುವ ಪೋಸ್ಟ್‌ನಲ್ಲಿ ಎಲ್ಲಿಯೂ ನೃತ್ಯ ಮಾಡುತ್ತಿರುವ ಮಹಿಳೆನ್ನು ಶ್ರೀಗಂಗಾನಗರ ಜಿಲ್ಲಾಧಿಕಾರಿ ರುಕ್ಮಣಿ ರಿಯಾರ್ ಎಂದು ಉಲ್ಲೇಖಿಸಿಲ್ಲ. ಬದಲಿಗೆ ಇದೊಂದು ರಾಜಸ್ಥಾನಿ ನೃತ್ಯ ಎಂದಷ್ಟೆ ಪೋಸ್ಟ್‌ನಲ್ಲಿ ಹೇಳಲಾಗಿದೆ. ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇತ್ತೀಚೆಗೆ ರುಕ್ಮಣಿ ರಿಯಾರ್ ಅವರು (ಐಎಎಸ್)  ಶ್ರೀಗಂಗಾನಗರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಹಳೆಯದು ಮತ್ತು ಅಲ್ಲಿ ರಾಜಸ್ಥಾನಿ ನೃತ್ಯ ಮಾಡುತ್ತಿರುವ  ಮಹಿಳೆಯು ಶ್ರೀಗಂಗಾನಗರ ಜಿಲ್ಲೆಯ ಜಿಲ್ಲಾಧಿಕಾರಿ ರುಕ್ಮಣಿ ರಿಯಾರ್‌ನ ಅಲ್ಲ ಎಂದು ದೃಡಪಟ್ಟಿದೆ. ಇಬ್ಬರ ಮುಖದ ಲಕ್ಷಣಗಳು ಹೋಲಿಕೆಯಾಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವನ್ನು ಪೋಸ್ಟ್‌ಅನ್ನು ಕೆಲವರು ತಪ್ಪಾಗಿ ಹಂಚಿಕೊಂಡಿದ್ದಾರೆ.

ಅಲ್ಲದೆ, ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ಮಾತನಾಡಿರುವ ರುಕ್ಮಣಿ ರಿಯಾರ್, ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ರಾಜಸ್ಥಾನದ ಶ್ರೀಗಂಗಾನಗರ್ ಜಿಲ್ಲಾಧಿಕಾರಿ, ರುಕ್ಮಿಣಿ ರಿಯಾರ್
ರಾಜಸ್ಥಾನದ ಶ್ರೀಗಂಗಾನಗರ್ ಜಿಲ್ಲಾಧಿಕಾರಿ, ರುಕ್ಮಿಣಿ ರಿಯಾರ್

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾದ ಪೋಸ್ಟ್‌ನ ವಿಡಿಯೊದಲ್ಲಿ ಸಾಂಪ್ರದಾಯಿಕ ನೃತ್ಯ ಮಾಡುತ್ತಿರುವ ಮಹಿಳೆ ಶ್ರೀಗಂಗಾನಗರ ಜಿಲ್ಲಾಧಿಕಾರಿ ರುಕ್ಮಣಿ ರಿಯಾರ್ (ಐಎಎಸ್) ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೆಹಲಿಯ ನರೈನಾದಲ್ಲಿ ನಡೆದ ಹತ್ಯೆಯನ್ನು ಮುಸ್ಲಿಮರು ಮಾಡಿದ್ದಾರೆ ಎಂಬುದು ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights