ಫ್ಯಾಕ್ಟ್‌ಚೆಕ್: ದೆಹಲಿಯ ನರೈನಾದಲ್ಲಿ ನಡೆದ ಹತ್ಯೆಯನ್ನು ಮುಸ್ಲಿಮರು ಮಾಡಿದ್ದಾರೆ ಎಂಬುದು ಸುಳ್ಳು!

ಇತ್ತೀಚೆಗೆ ಪಶ್ಚಿಮ ದೆಹಲಿಯ ನರೈನಾದಲ್ಲಿ ಶಿವ ಗುರ್ಜರ್ ಎಂಬ ಯುವಕನೊಬ್ಬನ ಹತ್ಯೆಯಾಗಿತ್ತು,  ಹತ್ಯೆಯ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸದ್ಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನುಬಂದಿಸಿದ್ದಾರೆ. ಆದರೆ ಶಿವ ಗುರ್ಜರ್ ಹತ್ಯೆಯ ಆರೋಪಿಗಳಿಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಬೆಂಬಲಿಗರು  ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಾಕುತಿದ್ದು,  ಮುಸ್ಲಿಂ ಯುವಕರ ಗುಂಪು ಹಿಂದೂ ವ್ಯಕ್ತಿಯನ್ನು( ಶಿವ ಗುರ್ಜರ್) ಹತ್ಯೆ ಮಾಡಿದ್ದಾರೆ, ಆರೋಪಿಗಳೆಲ್ಲರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಪ್ರತಿಪಾದಿಸಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಿಜೆಪಿ ಬೆಂಬಲಿತ ಸದಸ್ಯರು ತಮ್ಮ ಸೋಶಿಯಲ್ ಈಡಿಯಾದ ವೇದಿಕೆಗಳಲ್ಲಿ ಈ ಹೇಳಿಕೆಯೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. [@ippatel@nkgurjar4bjp@ElvishYadav@HinduITCell, and others (12345)]

#Justice_For_Shiva_Gurjar‘.’ ಎಂಬ ಹ್ಯಾಶ್‌ಟ್ಯಾಗ್ ಗಳ್ಳೊಂದಿಗೆ  ಟ್ವೀಟ್‌ರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಘಟನೆಯ ವೀಡಿಯೊವನ್ನು ಇದೇ ರೀತಿಯ ಪ್ರತಿಪಾದನೆಯೊಂದಿಗೆ Facebook ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಬಿಜೆಪಿಯ ಕಪಿಲ್ ಮಿಶ್ರಾ ಅವರು ಶಿವ ಗುರ್ಜರ್ ಅವರನ್ನು ‘ಜಿಹಾದಿ ಶೈಲಿಯಲ್ಲಿ’ ನಿರ್ದಯವಾಗಿ ಹತ್ಯೆ ಮಾಡಲಾಗಿದೆ ಎಂದು tweet  ಮಾಡಿದ್ದಾರೆ.

Sudarshan News ಶಿವ ಗುರ್ಜರ್ ಹತ್ಯೆಯನ್ನು ‘ಮುಸ್ಲಿಮರು ನಡೆಸಿದ ತಾಲಿಬಾನ್ ಶೈಲಿಯ ಮರಣದಂಡನೆ’ ಎಂದು ಕರೆದಿದೆ. ಹಾಗಿದ್ದರೆ ಈ ಎಲ್ಲಾ ಆರೋಪಗಳ ಹಿನ್ನಲೆಯಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗಿರುವ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಘಟನೆಗೆ ಸಂಬಂಧಿಸಿದಂತೆ ಗೂಗಲ್  ಕೀವರ್ಡ್ ಬಳಸಿ ಸರ್ಚ್ ಮಾಡಲಾಗಿದ್ದು,  India TodayHindustan Times ಮತ್ತು Times Now. ಸುದ್ದಿ ವರದಿಗಳು ಲಭ್ಯವಾಗಿದೆ. ಈ ವರದಿಗಳ ಪ್ರಕಾರ, ಮಾರ್ಚ್ 18 ರ ರಾತ್ರಿ, 29 ವರ್ಷದ ಶಿವ ಗುರ್ಜರ್ ಮತ್ತು ಅವರ ಸ್ನೇಹಿತರು ಪಶ್ಚಿಮ ದೆಹಲಿಯ ನರೈನಾದಲ್ಲಿರುವ PVR ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ಶಿವ ಗುರ್ಜರ್ ಯನ್ನ ಬೈಕ್ ಅನ್ನು ಪಾನ್ ಅಂಗಡಿಯ ಎದುರು ನಿಲ್ಲಿಸಲು ಮುಂದಾದಾಗ ಪಾನ್ ಅಂಗಡಿಯವನು ಬೈಕ್ ಪಾರ್ಕಿಂಗ್ ಬೇರೆಡೆ ಮಾಡುವಂತೆ ಹೇಳುತ್ತಾನೆ ಇದೇ ವಿಚಾರಕ್ಕೆ ಅಂಗಡಿಯವರಿಗೂ ಹಾಗೂ ಶಿವನ ನಡುವೆ ವಾಗ್ವಾದ ನಡೆಯುತ್ತದೆ. ಈ ವೇಳೆ ಆಕ್ರೋಶಗೊಂಡ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗರ ಗುಂಪು  ಶಿವನ ಎದೆಗೆ ಚಾಕುವಿನಿಂದ ಇರಿದಿದೆ, ಚಾಕುವಿನ ಹಿರಿತದಿಂದ ತೀರ್ವ ರಕ್ತಸ್ರಾವ ಉಂಟಾಗಿ ಶಿವ ಗುರ್ಜಾರ್ ಸ್ಥಳದಲ್ಲೆ ಮೃತಪಡುತ್ತಾನೆ.

ಪೊಲೀಸ್ ತನಿಖೆಯ ಪ್ರಕಾರ, ಅಂಗಡಿಯ ಕೆಲಸಗಾರ ಅಪ್ರಾಪ್ತ ವಯಸ್ಕನಾಗಿದ್ದು, ಹತ್ಯೆಗೊಳಗಾದ ಶಿವ ಮತ್ತು ಹಂತಕ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಕೋಮು ದೃಷ್ಟಿಕೋನವನ್ನು ತಳ್ಳಿಹಾಕಿರುವ ದೆಹಲಿ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ  ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಕೋಮುದ್ವೇಷದ ಹಿನ್ನಲೆಯನ್ನು ತಳ್ಳಿಹಾಕಿದ್ದಾರೆ.

ಆರೋಪಿಗಳನ್ನು ಧರ್ಮೇಂದ್ರ ರೈ, ಅವರ ಸಂಬಂಧಿ ಅಪ್ರಾಪ್ತ ವಯಸ್ಕ, ಅವರ ಇಬ್ಬರು ಮಕ್ಕಳಾದ ಸಚಿನ್ ರೈ ಮತ್ತು ರಾಮಾನುಜ್ ರೈ ಮತ್ತು ಅವರ ಉದ್ಯೋಗಿ ವಕೀಲ ಅಹ್ಮದ್ ಎಂದು ಗುರುತಿಸಲಾಗಿದೆ. ಪಶ್ಚಿಮ ದೆಹಲಿಯ ಡಿಸಿಪಿ ಘನಶ್ಯಾಮ್ ಬನ್ಸಾಲ್ ಆಲ್ಟ್ ನ್ಯೂಸ್‌ ಜೊತೆ  ಮಾತನಾಡಿ, ಧರ್ಮೇಂದ್ರ ರೈ ಅವರ ಸಂಬಂಧಿ (ಅಪ್ರಾಪ್ತ ಹುಡುಗ) ಶಿವನನ್ನು ಇರಿದ ಆರೋಪವಿದೆ ತಿಳಿಸಿದ್ದಾರೆ.

ಈ ಎಲ್ಲಾ ಹಿನ್ನಲೆಯ ಆಧಾರದಲ್ಲಿ ಹೇಳುವುದಾದರೆ ಪಶ್ಚಿಮ ದೆಹಲಿಯ ನರೈನಾದಲ್ಲಿ ನಡೆದ ಯುವಕನ ಭೀಕರ ಹತ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಕೋಮುವಾದದ ಆಯಾಮ ಇದೆ ಎಂದು ಸುಳ್ಳು ಪ್ರತಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ಅಪರಾಧಿಗಳ ಅಂಕಿಅಂಶಗಳು ಮತ್ತು ತೆರಿಗೆ-ಸಂಬಂಧಿತ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights