ಫ್ಯಾಕ್ಟ್ಚೆಕ್: ಅಕ್ರಮವಾಗಿ ನಿರ್ಮಿಸಿದ್ದ ದರ್ಗಾಗಳನ್ನು ಯೋಗಿ ಆದಿತ್ಯನಾಥ್ ನೆಲಸಮ ಮಾಡಿದ್ದು ನಿಜವೆ?
ಇತ್ತೀಚೆಗೆ ನಡೆದ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಬುಲ್ಡೋಜರ್ ಥೀಮ್ ಅನ್ನು ಹೊಂದಿತ್ತು. ಬುಲ್ಡೋಜರ್ ಥೀಮ್ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿತು ಎಂದರೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬುಲ್ಡೋಜರ್ ಬಾಬಾ ಎಂದೇ ಖ್ಯಾತಿ ಪಡೆಯುವಷ್ಟು ಬುಲ್ಡೋಜರ್ ಹೆಸರು ಫೇಮಸ್ ಆಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಮಲದ ಚಿಹ್ನೆಯಂತೆ ಬುಲ್ಡೋಜರ್ ಎಂಬ ಪದವು ಪ್ರಸಿದ್ಧವಾಗಿದೆ. ಸಿಎಂ ಆದಿತ್ಯನಾಥ್ ಅವರ ಬೆಂಬಲಿಗರು ಹೇಳುವಂತೆ ಮುಂದಿನ ದಿನಗಳಲ್ಲಿ ಮಾಫಿಯಾಗಳ ಅಡ್ಡಗಳ ಮೇಲೆ ನಮ್ಮ ಸರ್ಕಾರ ‘ಬುಲ್ಡೋಜರ್’ ಪ್ರಯೋಗ ನಡೆಸುತ್ತದೆ ಎಂಬ ಎಚ್ಚರಿಕೆ ನೀಡಿದ್ದರು.

ಬುಲ್ಡೋಜರ್ ಹೆಸರಿನಲ್ಲಿ ಪ್ರಖ್ಯಾತಿ ಪಡೆದ ಯೋಗಿ ಆದಿತ್ಯನಾಥ್ ತಮ್ಮ ಕೆಲಸವನ್ನು ಬುಲ್ಡೋಜರ್ ರೀತಿಯಲ್ಲೆ ಮಾಡುತ್ತಿದ್ದಾರೆ ಅದಕ್ಕೆ ಒಂದು ಉದಾಹರಣೆ ಇಲ್ಲಿದೆ. ಯೋಗಿ ಸರಕಾರವು ಇತ್ತೀಚೆಗೆ ಗೋವರ್ಧನ ಪರಿಕ್ರಮ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ದರ್ಗಾವನ್ನು ಕೆಡವಿದೆ. ಈ ಕಾರ್ಯಾಚರಣೆ ವೇಳೆ ಜೆಸಿಬಿ ಬುಲ್ಡೋಜರ್ನಿಂದ ಕಟ್ಟಡವನ್ನು ನೆಲಸಮಗೊಳಿಸುವ ಚಿತ್ರದೊಂದಿಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಯೋಗಿ ಆದಿತ್ಯನಾಥ್ ಚುನಾವಣೆಯಲ್ಲಿ ಗೆಲುವು ಪಡೆದ ಕೂಡಲೆ ಈ ರೀತಿ ಎಲ್ಲವನ್ನು ಬುಲ್ಡೋಜ್ ಮಾಡುತ್ತಿದ್ದಾರೆ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಯೋಗಿ ಸರ್ಕಾರವು ಗೋವರ್ಧನ್ ಪರಿಕ್ರಮ ಪ್ರದೇಶದಲ್ಲಿ ರಸ್ತೆಗಳಿಗೆ ತೊಂದರೆಯಾಗುವಂತೆ ಅತಿಕ್ರಮವಾಗಿ ನಿರ್ಮಿಸಿದ್ದ ಯಾವುದೇ ದರ್ಗಾ ಅಥವಾ ಮಸಿದಿಗಳನ್ನು ನೆಲಸಮಗೊಳಿಸಿದ ಇತ್ತೀಚಿನ ವರದಿಗಳು ನಮಗೆ ಕಂಡುಬಂದಿಲ್ಲ. ಯೋಗಿ ಸರ್ಕಾರ ಇತ್ತೀಚೆಗೆ ಅಂತಹ ಯಾವುದೇ ಕ್ರಮ ಕೈಗೊಂಡಿದ್ದರೆ, ಮಾಧ್ಯಮಗಳು ಅದನ್ನು ವರದಿ ಮಾಡುತ್ತಿದ್ದವು. ಆದರೆ ಅಂತಹ ವರದಿಗಳು ನಮಗೆ ಲಭ್ಯವಾಗಿಲ್ಲ.

ವೈರಲ್ ಪೋಸ್ಟ್ನಲ್ಲಿ ಹೇಳಿರುವಂತೆ ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಅಕ್ರಮ ಕಟ್ಟಡದ ತೆರವು ಕಾರ್ಯಾಚರಣೆ ನಡೆದಿರುವ ವರದಿಗಳಿಲ್ಲ, ವೈರಲ್ ಆಗುತ್ತಿರುವ ಫೋಟೋಗಳು ಸುಮಾರು 2018 ನವೆಂಬರ್ ನಿಂದಲೂ ಸಾಮಾಜಿಕ ಜಾಲಾತಾಣಗಳಲ್ಲಿ ಲಭ್ಯವಾಗಿದೆ. ಹಾಗೂ 2020ರಲ್ಲೂ ಇದೇ ಫೋಟೋಗಳು ವೈರಲ್ ಆಗಿದೆ. ಈ ಹಳೆಯ ಫೋಟೋಗಳನ್ನು ಬಳಸಿಕೊಂಡು ಅಕ್ರಮ ದರ್ಗಾಗಳನ್ನು ಯೋಗಿ ಆದಿತ್ಯನಾಥ್ ಹೇಗೆ ನೆಲಸಮ ಮಾಡುತ್ತಿದ್ದಾರೆ ನೋಡಿ ಎಂಬ ಹೇಳಿಕೆಯೊಂದಿಗೆ ಸಂಬಂಧವಿಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಗೂಗಲ್ ಸರ್ಚ್ ನಡೆಸಿದಾಗ ಉತ್ತರ ಪ್ರದೇಶ ಸರ್ಕಾರವು ಗೋವರ್ಧನ್ ಪರಿಕ್ರಮದ (here, here & here)) ಸೌಂದರ್ಯೀಕರಣದ ಕೆಲಸವನ್ನು ಕೈಗೆತ್ತಿಕೊಂಡಿರುವ ಕೆಲವು ಹಳೆಯ ವರದಿಗಳು ಲಭ್ಯವಾಗಿವೆ. ಆದರೆ ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಹೇಳಿರುವಂತೆ ಯೋಗಿ ಆದಿತ್ಯನಾಥ್ ಅವರು ಅಕ್ರಮ ಕಟ್ಟಡಗಳ (ದರ್ಗಾ) ನೆಲಸಮ ಮಾಡಿದೆ ಎಂಬುದಕ್ಕೆ ಯಾವುದೇ ಆಧಾರಗಳಾಗಲಿ ವರದಿಗಳಾಗಲಿ ಲಭ್ಯವಾಗಿಲ್ಲ ಎಂಬುದು ಗಮನಾರ್ಹ
ಒಟ್ಟಾರೆಯಾಗು ಹೇಳುವುದಾದರೆ ವೈರಲ್ ಪೋಸ್ಟ್ನಲ್ಲಿ ಹೇಳಿರುವಂತೆ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸರ್ಕಾರವನ್ನು ರಚಿಸಿದ ನಂತರ ಅಕ್ರಮವಾಗಿ ನಿರ್ಮಿಸಿರುವ ದರ್ಗಾಗಳನ್ನು ನೆಲಸಮಗೊಳಿಸಿದ್ದಾರೆ ಎಂಬುದು ಸುಳ್ಳು. ಇನ್ನು ಅಕ್ರಮವಾಗಿ ದರ್ಗಾಗಳನ್ನು ಕಟ್ಟಲಾಗಿದೆ ಎಂಬುದಕ್ಕೆ ಯಾವುದೇ ಆಧಾರಗಳು ಇಲ್ಲ. ಹಳೆಯ ಫೋಟೋಗಳನ್ನು ಬಳಸಿಕೊಂಡು ತಪ್ಪು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ರಾಜಸ್ಥಾನದ ಕರೌಲಿಯಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂ ಸಮುದಾಯವರಿಗೆ ಬೆದರಿಕೆ ಹಾಕಿದ್ದು ನಿಜವೆ?

