ಫ್ಯಾಕ್ಟ್‌ಚೆಕ್: ಪುನೀತ್ ಕೆರೆಹಳ್ಳಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ನಿಜವೆ?

ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ ಸಂಘ ಪರಿವಾರದ ಮತ್ತು ಬಜರಂಗದಳದ ಮುಖಂಡ ಪುನೀತ್ ಕೆರೆಹಳ್ಳಿ ಮತ್ತು  ಆತನ ಸಹಚರರಾದ ಸಿ.ಆರ್.ಮಧು ಮತ್ತು ರುಬೆಲ್ ಮೊಂಡಲ್ ಎಂಬುವವರನ್ನ ಬಂಧಿಸಲಾಗಿದೆ ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ‘ಬಿ ಟಿವಿ ನ್ಯೂಸ್’ ಸ್ಕ್ರೀನ್‌ಶಾಟ್ ಮತ್ತು ಎಫ್‌ಐಆರ್‌ಗೆ ಸಂಬಂಧಿಸಿದ ಒಂದೆರಡು ಫೋಟೋಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಹೇಳಿರುವಂತೆ Btv ನ್ಯೂಸ್‌ ಕನ್ನಡ ಸುದ್ದಿ ವಾಹಿನಿಯೂ ಪುನೀತ್ ಕೆರೆಹಳ್ಳಿಯನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ಮಾಡಿರುವುದು ನಿಜವೆ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

‘ಬಿ ಟಿವಿ ನ್ಯೂಸ್’ ಪ್ರಸಾರ ಮಾಡಿದ್ದ ಪೋಸ್ಟ್ ನ ಸ್ಕ್ರೀನ್‌ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ,  ಇದೇ ರೀತಿಯ ಮತ್ತೊಂದು ಫೋಟೋವನ್ನು  ಕಾಣಬಹುದು. ಆದರೆ, ‘ಬಿ ಟಿವಿ ನ್ಯೂಸ್’ ಪೋಸ್ಟ್ ಮಾಡಿರುವ ಫೋಟೋದಲ್ಲಿ ಪುನೀತ್ ಕೆರೆಹಳ್ಳಿ ಅವರ ಫೋಟೋ ಇಲ್ಲ.  ‘ಬಿ ಟಿವಿ ನ್ಯೂಸ್’ನ ಮೂಲ ಫೋಟೋದಲ್ಲಿ ರಫಿಕುಲ್ ಇಸ್ಲಾಂ ಅವರ ಹೆಸರು ಮತ್ತು ಫೋಟೋವನ್ನು ತೆಗೆದು ಪುನೀತ್ ಕೆರೆಹಳ್ಳಿ ಎಂದು ಬದಲಾಯಿಸಲಾಗಿದೆ.

ಸುದ್ದಿ ವರದಿಗಳ ಪ್ರಕಾರ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು (ಸಿ.ಆರ್. ಮಧು, ರಫಿಕುಲ್ ಇಸ್ಲಾಂ ಮತ್ತು ರುಬೆಲ್ ಮೊಂಡಲ್) ಕಳೆದ ತಿಂಗಳು ಬೆಂಗಳೂರಿನಲ್ಲಿ ಬಂಧಿಸಲಾಯಿತು. ಆ ಕೆಲವು ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿಯ ಪ್ರಸ್ತಾಪವಿಲ್ಲ.


ಪೋಸ್ಟ್‌ನಲ್ಲಿರುವ ಇತರ ಫೋಟೋಗಳಲ್ಲಿ, ಪೋಸ್ಟ್ ಮಾಡಲಾದ ಎಫ್‌ಐಆರ್ ಪ್ರತಿಯು 2013 ರ ಘಟನೆಗೆ ಸಂಬಂಧಿಸಿದೆ ಎಂದು ನೋಡಬಹುದು,  ಘಟನೆಯ ಇತ್ತೀಚಿನದಲ್ಲ ಮತ್ತು ಇತ್ತೀಚೆಗೆ ಪುನೀತ್ ಕೆರೆಹಳ್ಳಿಯ ಮೇಲೆ ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ಯಾವ ಪ್ರಕರಣಗಳೂ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಈ ಹಿಂದೆ 2013ರಲ್ಲಿ ಕೆಲವು ಕೃತ್ಯದಲ್ಲಿ ಭಾಗಿಯಾಗಿದ್ದೆ. ಅದು ತುಂಬಾ ಹಿಂದೆ ನಡೆದಿರುವ ವಿಚಾರಗಳು. ಈಗ ನಾನು ಹಿಂದೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ನನ್ನ ಏಳಿಗೆ ಸಹಿಸದ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ಸುದ್ದಿಯು ನಕಲಿ ಎಂದು ತಿಳಿಸಿದ್ದಾರೆ.  ಪುನೀತ್ ಕೆರೆಹಳ್ಳಿಯವರು ಇತ್ತೀಚೆಗೆ ಮಾಡಿದ ಕೆಲವು ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಪುನೀತ್ ಕೆರೆಹಳ್ಳಿ ಮತ್ತು ಭರತ್ ಶೆಟ್ಟಿ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದನ್ನು ಇಲ್ಲಿ ಕೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚಿನ ವೇಶ್ಯಾವಾಟಿಕೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿದೆ ಎಂದು ಎಡಿಟ್ ಮಾಡಿದ ‘ಬಿ ಟಿವಿ ನ್ಯೂಸ್’ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲಾಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಪುನೀತ್ ಕೆರೆಹಳ್ಳಿ ನಾನು ಸಂಘ ಪರಿವಾರದ ಕಾರ್ಯಕರ್ತನಾಗಿ ಕೆಲಸ ಮಾಡುವ ಮೊದಲು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದೆ. ಆದರೆ ಈಗ ಹರಿದಾಡುತ್ತಿರುವ ಸುದ್ದಿಗೂ ನನಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಎಂಬ ಕನ್ನಡದ ವೆಬ್ ಪೋರ್ಟಲ್ ಈ ಕುರಿತು ಸುದ್ದಿಯನ್ನು ಮಾಡಿದೆ. ಅದನ್ನು ಇಲ್ಲಿ ನೋಡಬಹುದು.

‘B Tv ನ್ಯೂಸ್’ ಮಾಡಿದ ವರದಿ ಸ್ಕ್ರೀನ್‌ಶಾಟ್ ಎಡಿಟ್ ಮಾಡಲಾಗಿದೆ. ಮೂಲ ‘ಬಿ ಟಿವಿ ನ್ಯೂಸ್’ ಫೋಟೋದಲ್ಲಿ ರಫಿಕುಲ್ ಇಸ್ಲಾಂ ಅವರ ಹೆಸರು ಮತ್ತು ಫೋಟೋವನ್ನು ಪುನೀತ್ ಕೆರೆಹಳ್ಳಿ ಎಂದು ಬದಲಾಯಿಸಲಾಗಿದೆ. ಪೋಸ್ಟ್ ಮಾಡಲಾದ ಎಫ್‌ಐಆರ್ ಪ್ರತಿಯು 2013 ರ ಘಟನೆಗೆ ಸಂಬಂಧಿಸಿದೆ, ಹಿಂದೆ ವೇಶ್ಯಾವಾಟಿಕೆಯಲ್ಲಿ ಪಿಂಪ್ ಆಗಿ ಕೆಲಸ ಮಾಡಿದ್ದ ಕಾರಣಕ್ಕೆ ಬಂಧಿಸಲಾಗಿತ್ತು ಆದರೆ ಈ ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಸ್ವತಃ ಪುನೀತ್, ಕೆರೆಹಳ್ಳಿ ಭರತ್ ಶೇಟ್ಟಿ ಎಂಬುವವರೊಂದಿಗೆ ದೂರವಾಣಿಯಲ್ಲಿ ಮಾನಾಡಿರುವ ಆಡಿಯೋ  ವೈರಲ್ ಆಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಗವಾನ್ ಶ್ರೀಧರ ಸ್ವಾಮಿಗಳಿಂದ ಆಶೀರ್ವಾದ ಪಡೆಯುತ್ತಿರುವ ವ್ಯಕ್ತಿ ಅಂಬೇಡ್ಕರ್ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights