ಫ್ಯಾಕ್ಟ್‌ಚೆಕ್: ಹೊಂಡಕ್ಕೆ ಬಿದ್ದ ವ್ಯಕ್ತಿ ಮೇಲೇಳಲೆ ಇಲ್ಲ! ಏನಾಯ್ತು ಗೊತ್ತಾ?

ವ್ಯಕ್ತಿಯೊಬ್ಬ ಬೇಲಿಯನ್ನಯ ಹಾರಿ ಗುಂಡಿಯೊಳಗೆ ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಗುಂಡಿಗೆ ಬಿದ್ದು ಸಂಪೂರ್ಣವಾಗಿ ನಾಪತ್ತೆಯಾಗಿದ್ದಾನೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಿಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಅನೇಕ ರೀತಿಯ ವೀಡಿಯೊಗಳು ಕಂಡುಬಂದಿವೆ. ಟ್ವಿಟರ್ ಬಳಕೆದಾರರು ತಮ್ಮ ಪ್ರೊಫೈಲ್‌ನಲ್ಲಿ ವೀಡಿಯೊದ ಮೂಲ ಆವೃತ್ತಿಯನ್ನು ಪೋಸ್ಟ್ ಮಾಡಿದ್ದಾರೆ. ಮೂಲ ವೀಡಿಯೊದಲ್ಲಿ, ವ್ಯಕ್ತಿಯು ಹೊಂಡಕ್ಕೆ ಬೀಳುವುದನ್ನು ನೋಡಬಹುದು, ಆದರೆ ಅವನು ಸಂಪೂರ್ಣವಾಗಿ ಕಣ್ಮರೆಯಾಗಲಿಲ್ಲ. ಅವನು ತಕ್ಷಣ ಗುಂಡಿಯಿಂದ ಎದ್ದು ಹೊರಬರುತ್ತಾನೆ. ವಿಡಿಯೊದ ಮೂಲ ಆವೃತ್ತಿಯನ್ನು Instagram ನಲ್ಲಿ ಪೋಸ್ಟ್ ಮಾಡಿರುವುದನ್ನು ಸಹ ಕಾಣಬಹುದು.

ಇಂಡೋನೇಷ್ಯಾದಲ್ಲಿ 2024 ರ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಲಾಗುತ್ತದೆ ಎನ್ನುವ ವದಂತಿಗಳು ಹಬ್ಬಿದ್ದ ಸಂದರ್ಭದಲ್ಲಿ ಅದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು ಆ ಸಂದರ್ಭದಲ್ಲಿ ಸೆರೆಹಿಡಿದ ವಿಡಿಯೊ ಎಂದು ವರದಿಯಾಗಿದೆ. ಈ ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ಒಂದು ಬದಿಯಿಂದ ಮತ್ತೊಂದು ಬದಿಗೆ ಬೇಲಿ ನಗೆಯುತ್ತಾನೆ, ಈ ಸಂದರ್ಭದಲ್ಲಿ ಚೆರಂಡಿಯ ಮೇಲೆ ಮುಚ್ಚಲಾಗಿದ್ದ ತಗಡಿನ ಶೀಟ್‌ ಸಹಿತ ಗುಂಡಿಯೊಳಗೆ ಬೀಳುತ್ತಾನೆ. ತಕ್ಷಣ ಸಾವರಿಸಿಕೊಂಡು ಹೊರಗೆ ಬರುತ್ತಾನೆ. ಆದರೆ ವೈರಲ್  ವಿಡಿಯೋದಲ್ಲಿ ಎಡಿಟ್ ಮಾಡಿ ಸುಳ್ಳು ಹೇಳಿಕೆಯೊಂದಿಗೆ ಪೋಸ್ಟ್‌ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಬೇಲಿಯನ್ನು ಹಾರಿ ಗುಂಡಿಗೆ ಬಿದ್ದು ಸಂಪೂರ್ಣವಾಗಿ ಮುಳುಗಿ ಹೋದಂತೆ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: Congress ನಾಯಕರಾದ ರಾಮಲಿಂಗಾ ರೆಡ್ಡಿ ಬೈಬಲ್ ಗೆ ಪೂಜೆ ಮಾಡಿದ್ದಾರೆ ಎಂಬುದು ನಿಜವಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights