ಫ್ಯಾಕ್ಟ್‌ಚೆಕ್: Congress ನಾಯಕರಾದ ರಾಮಲಿಂಗಾ ರೆಡ್ಡಿ ಬೈಬಲ್ ಗೆ ಪೂಜೆ ಮಾಡಿದ್ದಾರೆ ಎಂಬುದು ನಿಜವಲ್ಲ!

ಕಾಂಗ್ರೆಸ್ ಮುಖಂಡರು ಮತ್ತು ಬಿಟಿಎಂ ಲೇಔಟ್ ಕ್ಷೇತ್ರದ ಹಾಲಿ ಶಾಸಕರಾದ ರಾಮಲಿಂಗಾ ರೆಡ್ಡಿ ಮತ್ತು ಜಯನಗರ ಕ್ಷೇತ್ರದ ಶಾಸಕರಾದ ಅವರ ಮಗಳು ಸೌಮ್ಯ ರೆಡ್ಡಿಯವರು ಬೈಬಲ್‌ಗೆ ಪೂಜೆ ಸಲ್ಲಿಸಿದ್ದಾರೆ ಎಂದು  @BJP Karnataka ತನ್ನ ಅಧಿಕೃತ ಟ್ವಿಟರ್ ಅಕೌಂಟ್‌ ಹ್ಯಾಂಡಲ್‌ನಿಂದ ಶೇರ್ ಮಾಡಿದೆ. ಅಲ್ಲದೆ ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಪ್ರತಿಪಾದಿಸಿದೆ.

ವೈರಲ್ ಪೋಸ್ಟ್‌ನ ಆರ್ಕೈವ್ ಮಾಡಿದ್ದ ಲಿಂಕ್ ಇಲ್ಲಿ ನೋಡಬಹುದು.

ರಾಮಲಿಂಗಾ ರೆಡ್ಡಿ ಮತ್ತು ಅವರ ಮಗಳು ಸೌಮ್ಯಾರೆಡ್ಡಿ ಅವರು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಶ್ಚಿಯನ್ನರ ಪವಿತ್ರ ಗ್ರಂಥವಾದ ಬೈಬಲ್‌ ಇಟ್ಟಿದ್ದಾರೆ ಎಂದು ಪ್ರತಿಪಾದಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಎಲ್ಲ ಧರ್ಮವನ್ನು ಸಮಾನವಾಗಿ ಕಾಣುವುದು ಹಿಂದೂ ಧರ್ಮದ ವಿರೋದಿಯೇ?

BJP ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಕಾಣುತ್ತಿರುವ ದೃಶ್ಯದಲ್ಲಿ ಗಣಪತಿ, ಯೇಸು ಮತ್ತು ಮುಸಲ್ಮಾನರ ಆರಾಧನೆಯ ಸಂಕೇತಗಳು ಕಾಣುತ್ತಿದ್ದು, ಆ ಫೋಟೋದ ಮುಂದೆ ಒಂದು ದಪ್ಪ ಪುಸ್ತಕ ಕಾಣುತ್ತಿದೆ. ಇವುಗಳಿಗೆ ಶಾಸಕರಾದ ಸೌಮ್ಯಾ ರೆಡ್ಡಿಯವರು ಪೂಜೆ ಮಾಡುತ್ತಾರೆ, ಪೂಜೆ ಮಾಡಿದ ನಂತರ ತಮ್ಮ ತಂದೆ ರಾಮಲಿಂಗಾ ರೆಡ್ಡಿಯವರಿಗೆ ಮಂಗಳಾರತಿಯನ್ನು ನೀಡುತ್ತಿರುವ ದೃಶ್ಯಗಳನ್ನು ಪೋಟೋದಲ್ಲಿ ನೋಡಬಹುದು. ಅಷ್ಟಕ್ಕು ಈ ಪೂಜಾಕಾರ್ಯ ನಡೆದಿರುವುದು ರಾಮಲಿಂಗಾ ರೆಡ್ಡಿಯವರ ಮನೆಯಲ್ಲಿ ಅಲ್ಲ, ಸೌಮ್ಯಾ ರೆಡ್ಡಿಯವರ ಕಛೇರಿಯಲ್ಲಿ.

ಫೋಟೋದ ಮುಂದೆ ಇಡಲಾಗಿರುವ ಒಂದು ದಪ್ಪದಾದ ಪುಸ್ತಕ ಅದು ಬೈಬಲ್ ಗ್ರಂಥ ಅಲ್ಲ, ಅದು ಭಾರತದ ಸಂವಿಧಾನ ಪುಸ್ತಕ ಎಂದು ತಿಳಿದುಬಂದಿದೆ. ಭಾರತ ಸಂವಿಧಾನದ ರಚನಾ ಸಭೆಯ ಚರ್ಚೆಗಳು ಸಂಪುಟ -1 ಎಂಬ ಪುಸ್ತಕವನ್ನು ದೇವರ ಫೋಟೋ ಮುಂದೆ ಇರಿಸಿ ಪೂಜೆ ಮಾಡಲಾಗಿದೆ.

 

ಸಂವಿಧಾನ ಗ್ರಂಥ
ಸಂವಿಧಾನ ಗ್ರಂಥ

ರಾಮಲಿಂಗಾ ರೆಡ್ಡಿ ಮಾಡಿದ್ರೆ ಹಿಂದೂ ವಿರೋದಿ, ಮೋದಿ ಮಾಡಿದ್ರೆ?

BJP ತನ್ನ ಟ್ವಿಟ್‌ರ್ ನಲ್ಲಿ ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯಾ ರೆಡ್ಡಿ ಫೋಟೋವನ್ನ ಪೋಸ್ಟ್‌ ಮಾಡಿ ಹಿಂದೂ ವಿರೋದಿ ಕಾಂಗ್ರೆಸ್ ಎಂದು ಬರೆದು ಶೇರ್ ಮಾಡಿದ ಬೆನ್ನಲ್ಲೆ, ಹಲವರು ರಿಟ್ವಿಟ್ ಮಾಡಿ ತಿರುಗೇಟು ನೀಡಿದ್ದು ಓಟಿಗಾಗಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಬೇಡಿ ಎಂದು ರಿಟ್ವಿಟ್ ಮಾಡಿದ್ದಾರೆ.

ಸುದರ್ಶನ್ ಎಂಬುವವರು ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ @vinodkbjp ಇದೇನ್ ಟ್ರೊಲ್ ಪೇಜ್ ಅಹ್ ? ಸಂವಿಧಾನ ಪುಸ್ತಕಕ್ಕೂ – ಬೈಬಲ್’ಗೂ ಶಾಸಕರ ಕಛೇರಿಗೂ – ಮನೆಗೂ ವ್ಯತ್ಯಾಸ ತಿಳಿಯದೇ ಸುಳ್ಳು ಪ್ರಚಾರ ಮಾಡುವ ಕೀಳು ಮಟ್ಟಕ್ಕೆ ಬಿಜೆಪಿ ಇಳಿದಿದೆಯೇ ? ಜನಪರ ಕಾರ್ಯಗಳು ಮಾಡದೇ ಓಟಿಗಾಗಿ ಸಮಾಜವನ್ನು ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದೀರಿ ಎಂಬುದು ಸ್ಪಷ್ಟ. ಎಂದು ಹೇಳೀದ್ದಾರೆ.

https://twitter.com/ckchetanck/status/1512682612258926592

ಕ್ರಿಶ್ಚಿಯನ್ ಪೋಪ್‌ರನ್ನು ಆಲಂಗಿಸುತ್ತಿರುವ ಪ್ರಧಾನಿ ಮೋದಿ ಸಹ ಹಿಂದೂ ವಿರೋಧಿಯೇ ಎಂದು ಚೇತನ್ ಕೃಷ್ಣಾ ಅವರು ರಿ-ಟ್ವೀಟ್ ಮಾಡಿದ್ದಾರೆ.

 

 

https://twitter.com/ckchetanck/status/1512690960282849280

ಬಿಜೆಪಿ ಮಾಡಿರುವ ಆರೋಪಗಳು ಸುಳ್ಳು ಮತ್ತು ಅಸಹ್ಯ ರಾಜಕಾರಣದ ಭಾಗವಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ  ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯಾ ರೆಡ್ಡಿಯವರು ತಮ್ಮ ಕಚೇರಿಯಲ್ಲಿ ಮಾಡಲಾಗಿರುವ ಪೂಜೆಯಲ್ಲಿ ಬೈಬಲ್ ಪುಸ್ತಕ ಇಲ್ಲ ಬದಲಾಗಿ ಸಂವಿಧಾನದ ಪುಸ್ತಕವಿದೆ. ಇನ್ನು ಸರ್ವಧರ್ಮವನ್ನು ಪೂಜಿಸುವುದು ಹಿಂದೂ ವಿರೋಧಿಯಲ್ಲ. ಹಾಗಾಗಿ ಬಿಜೆಪಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: PFI ರ್ಯಾಲಿಯ ಹಳೆಯ ವಿಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ತಿರುಚಿದ ಬಲಪಂಥೀಯರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights