Categories
Breaking News District National Political State

ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ : ಡಿಕೆ ಶಿವಕುಮಾರ ಟೆಂಪಲ್ ರನ್ – ಶಕ್ತಿ ದೇವತೆಗೆ ಪೂಜೆ

ಕಾಂಗ್ರೆಸ್ ಪಕ್ಷದಲ್ಲಿ ಒಂದು ಕಡೆ ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿದೆ. ಮತ್ತೊಂದೆಡೆ ಕೆಪಿಸಿಸಿ ಸ್ಥಾನ ಪಡೆಯಬೇಕೆಂದು ಮಾಜಿ ಸಚಿವ ಡಿಕೆ ಶಿವಕುಮಾರ ಟೆಂಪಲ್ ರನ್ ನಡೆಸಿದ್ದಾರೆ. ಮಧ್ಯಪ್ರದೇಶದ ಬಾಗಲಮುಖಿ ಸನ್ನಿಧಾನದಲ್ಲಿ ಡಿಕೆಶಿ ಹೊಮ ಹವನ ಮಾಡಿದ್ರೆ ಯಾದಗಿರಿಯಲ್ಲಿಯೂ ಕೂಡ ಗಡೇ ದುರ್ಗಾದೇವಿ ದೇವಾಲಯದಲ್ಲಿ ಡಿಕೆಶಿ ಸೂಚನೆಯಂತೆ ಕೆಪಿಸಿಸಿ ಸ್ಥಾನಕ್ಕಾಗಿ ಪೂಜೆ ಮಾಡಲಾಗಿದೆ.

ಮಾಜಿ ಸಚಿವ ಡಿಕೆಶಿವಕುಮಾರ ಅವರನ್ನು ಕೆಪಿಸಿಸಿ ಸ್ಥಾನ ಸಿಗುವದು ಬಹುತೇಕ ಖಚೀತ ಎನ್ನಲಾಗುತಿತ್ತು.ಆದರೆ ,ಆಯ್ಕೆ ವಿಚಾರ ಇನ್ನೂ ವಿಳಂಬವಾಗುತ್ತಿದೆ.
ಕೆಪಿಸಿಸಿ ಪಟ್ಟಕ್ಕಾಗಿ ಈಗ ಭಾರಿ ಪೈಪೋಟಿ ನಡೆಯುತ್ತಿದೆ.

ಕೆಪಿಸಿಸಿ ಸ್ಥಾನವು ಬೇಗ ಸಿಗದ ಕಾರಣ ಡಿಕೆಶಿವಕುಮಾರ ಅವರು ಈಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.ಮಧ್ಯಪ್ರದೇಶದ ಬಾಗಲಮುಖಿ ದೇವರ ಸನ್ನಿಧಿಯಲ್ಲಿ ಹೊಮ‌ ಹವನ ಮಾಡಿ ,ಕೆಪಿಸಿಸಿ ಪಟ್ಟ ಸಿಗಬೇಕು,ಶತ್ರು ಸಂಹಾರ,ಸಂಕಷ್ಟ ‌ನಿವಾರಣೆಯಾಗಬೇಕೆಂದು ಬಾಗಲಮುಖಿಯ ದೇವಿಯ ಮೋರೆ ಹೋಗಿದ್ದಾರೆ. ಒಂದು ಕಡೆ ಬಾಗಲಮುಖಿ ದೇವಿಯ ಕೃಪೆಗೆ ಪಾತ್ರರಾದ್ರೆ ಮತ್ತೊಂದೆಡೆ ಡಿಕೆಶಿವಕುಮಾರಗೆ ಕೆಪಿಸಿಸಿ ಸ್ಥಾನ ಸಿಗಬೇಕೆಂದು ಯಾದಗಿರಿ ಜಿಲ್ಲೆ
ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ಮಂದಿರದಲ್ಲಿ ಡಿಕೆಶಿ ಸೂಚನೆಯಂತೆ ವಿಶೇಷ ಪೂಜೆ ಮಾಡಲಾಗಿದೆ.

ಈ ಬಗ್ಗೆ ಅರ್ಚಕ ಮಹಾದೇವಪ್ಪ ಪೂಜಾರಿ ಅವರು ಮಾತನಾಡಿ,ಇದೆ ಭಾನುವಾರ ನಾನು ಬೆಂಗಳೂರುಗೆ ಹೊಗಿದ್ದೆ ಡಿಕೆಶಿವಕುಮಾರ ಅವರು ಕೆಪಿಸಿಸಿ ಸ್ಥಾನ ಸಿಗಲು ವಿಶೇಷ ಪೂಜೆ ಮಾಡಬೇಕೆಂದು ಸೂಚನೆ ನೀಡಿದರು‌ ಹೀಗಾಗಿ ದೇವಿಯ ಮೂರ್ತಿ ಮುಂದೆ ಪತ್ರ ಬರೆದು ಡಿಕೆಶಿವಕುಮಾರ ಗೆ ಕೆಪಿಸಿಸಿ ಸ್ಥಾನ ಸಿಗಬೇಕೆಂದು ಪೂಜೆ ಮಾಡಲಾಗಿದೆ.ಅದೆ ರೀತಿ ಇದೆ 28 ರಿಂದ ಎರಡು ದಿನಗಳ ಕಾಲ ದೇವಿಯ ಜಾತ್ರೆ ನಡೆಯಲಿದೆ. ಜಾತ್ರೆಗೆ 29 ರಂದು ಡಿಕೆಶಿವಕುಮಾರ ಆಗಮಿಸಿ ವಿಶೇಷ ಪೂಜೆ ಮಾಡಿ ಹರಕೆ ಈಡೇರಿಸಲಿದ್ದಾರೆಂದರು.

ಡಿಕೆಶಿವಕುಮಾರ ಅವರು ಖುದ್ದು ಗಡೇ ದುರ್ಗಾದೇವಿ ದೇಗುಲದ ಅರ್ಚಕ ಮಹಾದೇವಪ್ಪ ಪೂಜಾರಿ ಅವರಿಗೆ ಕೆಪಿಸಿಸಿ ಪಟ್ಟ ಸಿಗಬೇಕೆಂದು ದೇವಿಯ ಪಾದದ ಭಾಗದಲ್ಲಿ ಪತ್ರ ಬರೆದು ಪೂಜೆ ಮಾಡಬೇಕೆಂದು ಸೂಚನೆ ನೀಡಿದ ಹಿನ್ನೆಲೆ, ಇಂದು ಬೆಳಿಗ್ಗೆ ಮಹಾದೇವಪ್ಪ ಪೂಜಾರಿ ಅವರು ಡಿಕೆಶಿಗಾಗಿ ವಿಶೇಷ ಪೂಜೆ ಮಾಡಿದ್ದಾರೆ.ಡಿಕೆಶಿ ಅವರು ಸಾಕಷ್ಟು ಬಾರಿ ಸಂಕಷ್ಟ ಬಂದಾಗ ಗಡೇ ದುರ್ಗಾದೇವಿ ದೇವಿಯ ಮೋರೆ ಹೋಗುತ್ತಾರೆ. ದೇವಿಯ ಕೃಪೆಯಿಂದ ಡಿಕೆಶಿ ಸಂಕಷ್ಟದಿಂದ ಪಾರಾಗಿದ್ದಾರೆಂದು ಪೂಜಾರಿ ಅವರ ಮಾತಾಗಿದೆ.

ಇದೆ 28 ರಿಂದ ಗಡೇ ದುರ್ಗಾದೇವಿ ಜಾತ್ರೆ ಇದ್ದು,ಖುದ್ದು ಡಿಕೆಶಿ ಅವರು ಜಾತ್ರೆಗೆ 29 ರಂದು ಆಗಮಿಸಿ ವಿಶೇಷ ಪೂಜೆ ನೆರವೇರಿಸಿ ಹರಕೆ ತಿರಿಸಲಿದ್ದಾರೆ.ಕಳೆದ ವರ್ಷ ನಡೆದ ಜಾತ್ರೆಗೆ ಬರುತ್ತೆನೆಂದು ಡಿಕೆಶಿ ಹೇಳಿ ನಂತರ ರಾಜಕೀಯ ‌ಬೆಳವಣಿಯ ಅನಿವಾರ್ಯ ಕಾರಣದಿಂದ ಬಂದಿಲ್ಲ.ಇದರಿಂದ ಡಿಕೆಶಿವಕುಮಾರ ಗೆ ಸಂಕಷ್ಟ ಎದುರಾಗಿತ್ತು‌ ಎನ್ನಲಾಗುತಿತ್ತು.ನಂತರ ದೇವಿಯ ಕೃಪೆಯಿಂದ ಸಂಕಷ್ಟ ದಿಂದ ಪಾರು ಮಾಡಿದ್ದಾಳಂತೆ.ಈಗ ಬಾಗಲಮುಖಿ ಹಾಗೂ ಗಡೇ ದುರ್ಗಾದೇವಿ ಕೃಪೆಯಿಂದ ಕೆಪಿಸಿಸಿ ಪಟ್ಟದ ಸ್ಥಾನ ಡಿಕೆಗೆ ಒಲಿಯುತ್ತಾ ಕಾದು ನೋಡಬೇಕಿದೆ.

Categories
Breaking News District Political State

ಕೆಪಿಸಿಸಿ ಅಧ್ಯಕ್ಷಕ್ಕಾಗಿ ನಾನ್ಯಾರಿಗೂ ಭೇಟಿ ಮಾಡಿ ಮನವಿ ಮಾಡಿಲ್ಲ – ಎಂ.ಬಿ.ಪಾಟೀಲ್

ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ಹೆಚ್ಚಾದ್ರೆ ಇತ್ತ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕಿಚ್ಚು ಎಲ್ಲರ ಕುತೂಹಲವನ್ನ ಕೆರಳಿಸಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕುರಿತಂತೆ ಹೈಕಮಾಂಡ್ ಇಂದು ಅಥವಾ ನಾಳೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಕೆಪಿಸಿಸಿ ಅಧ್ಯಕ್ಷ ಮಾಡಬೇಕೆಂದು ನಾನ್ಯಾರಿಗೂ ಭೇಟಿ ಮಾಡಿ ಮನವಿ ಮಾಡಿಲ್ಲ. ಆದರೆ ಯಾರೂ ಸೂಕ್ತ ಎನ್ನುವ ಪಟ್ಟಿಯಲ್ಲಿ ನನ್ನ ಹೆಸರೂ ಸೂಚಿಸಿದ್ದಾರೆ. ಅದನ್ನೆಲ್ಲ ಹೈಕಮಾಂಡ್ ಇಂದು ಅಥವಾ ನಾಳೆ ಅಂತಿಮಗೊಳಿಸಬಹುದು ಎಂದರು.

ಇನ್ನು ಕೆಪಿಸಿಸಿಗೆ ಕಾರ್ಯಾಧ್ಯಕ್ಷ ನೇಮಕ ಮಾಡುವುದರಿಂದ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ಅಧ್ಯಕ್ಷರೊಬ್ಬರೇ ಎಲ್ಲ ಕಡೆಯೂ ಓಡಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಕಾರ್ಯಾಧ್ಯಕ್ಷ ನೇಮಕ ಮಾಡುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.

Categories
Breaking News Political State

KPCC : ನಾಯಕರಲ್ಲಿ ಒಗ್ಗಟ್ಟು ಮೂಡದಿದ್ದರೇ ಕಾಂಗ್ರೆಸ್ ಬಲವರ್ಧನೆ ಕಷ್ಟ – ಸಿದ್ದು…

ಎರಡು ದಿನಗಳ ಕಾಳ ಹೈಕಮಾಂಡ್ ಮಟ್ಟದಲ್ಲಿ ರಾಜ್ಯ ಕಾಂಗ್ರೆಸ್ ಕುರಿತು ಮಹತ್ವದ ಚರ್ಚೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು, ಪರಿಸ್ಥಿತಿ ಸುಧಾರಿಸದಿದ್ದರೇ ರಾಜ್ಯದಲ್ಲಿ ಪಕ್ಷದ ಬಲವರ್ಧನೆ ಕಷ್ಟಸಾಧ್ಯ ಎಂದು ತಿಳಿಹೇಳಿದ್ದಾರೆ.


ರಾಜ್ಯ ಕಾಂಗ್ರೆಸಿನಲ್ಲು ಮೂಲ ವಲಸಿಗ ೆಂಬ ಕಚ್ಚಾಟ ಅವ್ಯಾಹತವಾಗಿ ಮುಂದುವರಿದಿದೆ. ದಶಕವೇ ಕಳೆದಿದ್ದರೂ ಇನ್ನೂ ತಮ್ಮನ್ನು ಹೊರಗಿನವರಂತೆಯೇ ಕಾಣಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ವರಿಷ್ಠರ ಮುಂದೆ ಬೇಸರ ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷತೆ ಕುರಿತಾಗಿ ಮಂಗಳವಾರ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಚರ್ಚೆ ನಡೆಸಿದ್ದ ಸಿದ್ದರಾಮಯ್ಯ ಬುಧವಾರವೂ ದಿಲ್ಲಿ ವಾಸ ಮುಂದುವರಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಗಡವೂ ಸುದೀರ್ಘ ಸಮಾಲೋಚನೆ ಮಾಡಿದರು. ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಲಿಂಗಾಯತರ ಮುಖಂಡರನ್ನು ನೇಮಿಸುವಂತೆ ಅವರು ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ೀ ಸಲಹೆಯಿಂದಾಗಿ ರೇಸಿನಲ್ಲಿ ಮುಂಚೂಣಿಯಲ್ಲಿದ್ದ ಡಿಕೆ ಶಿವಕುಮಾರ್ ಅವರಿಗೆ ಹಿನ್ನಡೆ ಆಗಬಹುದು ಎಂದು ಹೇಳಲಾಗಿದೆಯಾದರೂ ಈಗಲೂ ಅವರೇ ಹೈಕಾಮಾಂಡಿನ ಮೊದಲ ಆಯ್ಕೆಯಾಗಿದ್ದಾರೆ ಎಂದೂ ಮೂಲಗಳು ಹೇಳುತ್ತಿವೆ.

Categories
Breaking News District National Political State

ಕೆಪಿಸಿಸಿ ಕಿರೀಟ ಯುದ್ಧ : ಮಂಕಾಯ್ತಾ ಡಿಕೆ ಶಿವಕುಮಾರ್ ಕನಸು…?

ಕೆಪಿಸಿಸಿ ಅಧ್ಯಕ್ಷ ಪಟ್ಟ ಡಿಕೆ ಶಿವಕುಮಾರ್ ಗೋ ಅಥವಾ ಎಂಬಿ ಪಾಟೀಲ್ ಗೋ..? ಇ ಬಗ್ಗೆ ಸಾಕಷ್ಟು ಚರ್ಚೆ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿದೆ. ಈ ವಿಚಾರವಾಗಿ ಹೈಕಮಾಂಡ ಜೊತೆ ಚರ್ಚೆಗಿಳಿದ ಸಿದ್ದು ಸೂಚಿಸಿದ ಹೆಸರು ಯಾವುದು..? ದೆಹಲಿಯಲ್ಲಿ ಮಂಗಳವಾರ ಸಿದ್ದು ಮಾಡಿದ್ದೇನು..? ದೆಹಲಿಯಲ್ಲಿ ಸಿದ್ದರಾಮಯ್ಯ ಅಧಿನಾಯಕಿಗೆ ಹೇಳಿದ್ದೇನು…? ಏನಿದ್ದು ಕೆಪಿಸಿಸಿ ಕಿರೀಟ್ ಯುದ್ಧ.. ಸಿದ್ದರಾಮಯ್ಯ ದೆಹಲಿ ಆಡಿದ ಗೇಮ್ ಯಾವುದು..? ಅನ್ನೋ ಪ್ರಶ್ನೆಗೆ ಉತ್ತರ ಸಾಕಷ್ಟು ಕುತೂಹಲ ಕೆರಳಿಸಿದೆ.

ಕರ್ನಾಟಕದ ಕಾಂಗ್ರೆಸ್ ರಾಜಕಾರಣದ ಬಗ್ಗೆ ಮಾತನಾಡುತ್ತಾ ಹೋದ್ರೆ ಕೆಪಿಸಿಸಿ ಪಟ್ಟದ ಗುಂಗು ಸದ್ಯ ಗುಲ್ಲೆದ್ದಿದೆ. ಮಂಗಳವಾರ ದೆಹಲಿಯಲ್ಲಿ ಬೀಡುಬಿಟ್ಟ ಸಿದ್ದು ಮಾಡಿದ ತಂತ್ರಗಾರಿಕೆಗೆ ಮೂಲ ಕಾಂಗ್ರೆಸ್ಸಿಗರ ದಿಕ್ಕು ಬದಲಾದಂತೆ ಕಾಣ್ಣುತ್ತಿದೆ.

ಹೌದು.. 2019 ಡಿ9 ರಂದು 15 ಕ್ಷೇತ್ರಗಳ ಉಚನುಮಾವಣೆಯಲ್ಲಿ ಕಾಂಗ್ರೆಸ್ 2ಸ್ಥಾನ ಪಡೆದುಕೊಂಡು ಹೀನಾಯ ಸೋಲು ಅನುಭವಿಸಿದ ಹೊಣೆ ಹೊತ್ತು ದಿನೇಶ್ ಗುಂಡೂರುರಾವ್ ಹಾಗೂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದರು. ಇದೇ ಸ್ಥಾನಕ್ಕೆ ಸದ್ಯ ಕಾಂಗ್ರೆಸ್ ನಾಯಕರಲ್ಲಿ ಲಾಬಿ ನಡೆದಿದೆ.

ಈ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಹೊಸ ಗೇಮ್ ಆಡಿದ್ದಾರೆ ಎನ್ನಲಾಗುತ್ತಿದೆ. ಈ ಗೇಮ್ ನಲ್ಲಿ  ಡಿಕೆ ಕನಸನ್ನು ಮಂಕಾಗಿದೆ.

ಹೌದು… ಕೆಪಿಸಿಸಿ ಕಿರೀಟದ ಯುದ್ಧದ ದಿಕ್ಕು ಬದಲಿಸಿದ್ರಾ ಸಿದ್ದು.. ರಾಜೀನಾಮೆಯ ಬಳಿಕೆ ಸಿದ್ದರಾಮಯ್ಯ ಕಥೆ ಮುಗಿತೂ ಅಂತ ಕೆಲ ನಾಯಕರು ಬೀಗುತ್ತಿದ್ದರು. ಆದರೆ ಡಿ 16 ರ ಸಂಜೆ ದೆಹಲಿಯಿಂದ ಬಂದ ಒಂದು ಫೋನ್ ಕಾಲ್ ನಿಂದ ಸಿದ್ದರಾಮಯ್ಯ ಅಸಲಿ ಆಟ ಶುರು ಮಾಡಿದ್ದಾರೆ. ಕೆ.ಹೆಚ್ ಮುನಿಯಪ್ಪ ಹಾಗೂ ಡಿಕೆ ಶಿವಕುಮಾರ್ ಜೊತೆ ಎಂಬಿ ಪಾಟೀಲ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು.

ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂ.ಬಿ ಪಾಟೀಲ್‌ಗೆ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಮಂಗಳವಾರ ಸೋನಿಯಾ ಭೇಟಿ ಮಾಡಿದ್ದ ಸಿದ್ದರಾಮಯ್ಯ ಪಕ್ಷ ಸಂಘಟನೆ ಹಾಗೂ ಹೊಂದಾಣಿಗೆ ದೃಷ್ಟಿಯಲ್ಲಿ ಡಿ.ಕೆ ಶಿವಕುಮಾರ್‌ ಬದಲಾಗಿ ಎಂ.ಬಿ ಪಾಟೀಲ್‌ ಅವರ ಆಯ್ಕೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸೋನಿಯಾ ಗಾಂಧಿ ಅವರ ಜೊತೆಗೆ ಸುಮಾರು 45 ನಿಮಿಷಗಳ ಕಾಲ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಅದಕ್ಕೂ ಮೊದಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ಅಹ್ಮದ್ ಪಟೇಲ್ ಜೊತೆಗೂ ಸುದೀರ್ಘವಾಗಿ ಸಿದ್ದರಾಮಯ್ಯ ಅವರು ಮಾತನಾಡಿದ್ದರು.

ಮಾತುಕತೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನವನ್ನು ಮುಂದುವರಿಸಿಕೊಂಡು ಹೋಗುವಂತೆ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಬದಲಾಗಿ ತನ್ನ ಆಪ್ತರಾದ ಎಂಬಿ ಪಾಟೀಲ್‌ ಅಥವಾ ಕೃಷ್ಣ ಭೈರೇಗೌಡ ಅವರಿಗೆ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ ಹಾಗೂ ಎಂಬಿಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು ಹಿರಿಯ ಮುಖಂಡರು ಡಿಕೆಶಿ ಪರವಾಗಿ ಒಲವು ವ್ಯಕ್ತಪಡಿಸಿದ್ದರೆ ಸಿದ್ದರಾಮಯ್ಯ ಬಣ ಎಂಬಿಪಿಗೆ ಪಟ್ಟಕಟ್ಟುವ ಉತ್ಸಾಹದಲ್ಲಿದೆ.

ಒಂದು ವೇಳೆ ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷದ ಹಿಡಿತ ಸಿದ್ದರಾಮಯ್ಯ ಕೈ ತಪ್ಪಿ ಹೋಗುತ್ತದೆ. ಈ ಕಾರಣಕ್ಕಾಗಿ ಎಂಬಿ ಪಾಟೀಲ್‌ ಅವರಿಗೆ ನೀಡಿದರೆ ಸಿದ್ದರಾಮಯ್ಯ ಹಿಡಿತದಲ್ಲೇ ಪಕ್ಷ ಮುಂದುವರಿಯಲಿದ್ದು ಲಿಂಗಾಯತ ಸಮುದಾಯವನ್ನು ಒಳಗೊಂಡಂತೆ ಆಗುತ್ತದೆ ಎಂಬುವುದು ಸಿದ್ದರಾಮಯ್ಯ ಬಣದ ವಾದ.

ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಮತ್ತೆ ಮನಸ್ತಾಪಗಳು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು. ಮುಂದಾಗುವ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

Categories
Breaking News District Political State

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿತ್ತು ಕಣ್ಣು : ಶಿವಾನಂದ ಎಸ್. ಪಾಟೀಲರಿಗೆ ಸ್ಥಾನ ನೀಡುವಂತೆ ಅಭಿಯಾನ…!

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅಭಿಮಾನಿಗಳು ಫೇಸ್ಬುಕ್, ವಾಟ್ಸಾಫ್ ಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಮಾಜಿ ಸಚಿವ ಶಿವಾನಂದ ಎಸ್. ಪಾಟೀಲ ಅವರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಅಭಿಯಾನ ಮಾಡಲಾಗುತ್ತಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕರಾಗಿರುವ ಶಿವಾನಂದ ಎಸ್. ಪಾಟೀಲ, ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕ ಶಿವಾನಂದ ಎಸ್. ಪಾಟೀಲ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯ ಹೇಳಿ ಬಂದಿದೆ. ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಶಿವಾನಂದ ಎಸ್. ಪಾಟೀಲ ಅಧ್ಯಕ್ಷ ಸ್ಥಾನ ನಿಭಾಯಿಸುವ ಶ್ರೇಷ್ಠ ಶಾಸಕ ಎಂದು ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ.

Categories
Breaking News District Political State

ಕೆಪಿಸಿಸಿ ಅಧ್ಯಕ್ಷ, ವಿಧಾನ ಸಭೆ ಪ್ರತಿಪಕ್ಷದ ನಾಯಕನ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ- ಎಂ. ಬಿ. ಪಾಟೀಲ್

ಸಿದ್ಧರಾಮಯ್ಯ ಮತ್ತು ದಿನೇಶ ಗುಂಡೂರಾವ ನೀಡಿರುವ ರಾಜೀನಾಮೆ ಸ್ವೀಕಾರ ಆಗಲಿಕ್ಕಿಲ್ಲ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುದಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ ಬಳಿಕ ಇಬ್ಬರೂ ಮುಖಂಡರು ನೈತಿಕ ಹೊಣೆ ಹೊತ್ತು ಸಿದ್ಧರಾಮಯ್ಯ, ದಿನೇಶ ಗುಂಡೂರಾವ್ ರಾಜೀನಾಮೆ ನೀಡಿದ್ದು ಒಳ್ಳೆಯ ಬೆಳವಣಿಗೆ. ಎಲ್ಲಿಯವರೆಗೆ ಹೈಕಮಾಂಡ ಇವರಿಬ್ಬರ ರಾಜೀನಾಮೆ ಅಂಗೀಕರಿಸುವುದಿಲ್ಲವೋ, ಅಲ್ಲಿಯ ವರೆಗೆ ಆ ಸ್ಥಾನಗಳು ಖಾಲಿ ಇಲ್ಲ ಎಂದು ತಿಳಿಸಿದರು. ಅವರಿಬ್ಬರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಹಿಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷದ ನಾಯಕನ ಸ್ಥಾನ ಸಧ್ಯಕ್ಕೆ ಖಾಲಿ ಇಲ್ಲ. ಹೀಗಾಗಿ ಆ ಸ್ಥಾನಗಳಿಗೆ ಆಕಾಂಕ್ಷಿ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷ ಬದಲಾವಣೆ ಬಯಸಿದಾಗ ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ. ನಾನು ಆಕಾಂಕ್ಷಿ ಎಂಬುದು ಚರ್ಚಿಸುವುದು ಸರಿಯಲ್ಲ. ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಿಸುವುದು ಸರಿಯಲ್ಲ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಪೌರತ್ವ ಕಾಯಿದೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಸಂಸತ್ತಿನಲ್ಲಿ ಮತ್ತಷ್ಟು ಸುದೀರ್ಘವಾಗಿ ಚರ್ಚೆಯಾಗಬೇಕಿತ್ತು. ಏಕಾಏಕಿ ಈ ರೀತಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಸಾರ್ವಜನಿಕವಾಗಿ ಚರ್ಚಿಸಿ ಈ ಬಗ್ಗೆ ನಿರ್ಧರಿಸಬೇಕಿತ್ತು ಎಂದು ಅವರು ತಿಳಿಸಿದರು.

ಡಿಸಿಎಂ ಹುದ್ದೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ ಎಲ್ಲರನ್ನೂ ಡಿಸಿಎಂ ಮಾಡಿ ಬಿಡಲಿ ಎಂ. ಬಿ. ಪಾಟೀಲ ವ್ಯಂಗ್ಯವಾಡಿದರು. ಉಪಮುಖ್ಯಮಂತ್ರಿ ಹುದ್ದೆಯೇ ಸಂವಿಧಾನಿಕವೋ, ಅಸಂವಿಧಾನಿಕವೋ ಎಂಬುದು ಚರ್ಚೆಯಲ್ಲಿದೆ. ಝೀರೋ ಟ್ರಾಫಿಕ್ ಆಯಾ ಡಿಸಿಎಂ, ಸಚಿವರ ವಿವೇಚನೆಗೆ ಬಿಟ್ಟಿದ್ದು. ನಾನಂತೂ ಗೃಹ ಸಚಿವನಾಗಿದ್ದಾಗ ಝೀರೋ ಟ್ರಾಫಿಕ್ ಬಳಸಲಿಲ್ಲ ಎಂದು ಅವರು ತಿಳಿಸಿದರು. ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಆಂದೋಲ ಸಿದ್ಧಲಿಂಗ ಸ್ವಾಮೀಜಿ ಹೇಳಿ ವಿಚಾರ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಎಂ. ಬಿ. ಪಾಟೀಲ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Categories
Breaking News Political State

State Congress : ದಿಢೀರ್ ದಿಲ್ಲಿಗೆ ಹಾರಿದ ಮಾಜಿ ಸಿಎಂ ಸಿದ್ದರಾಮಯ್ಯ? ಬದಲಾವಣೆ ಸನ್ನಿಹಿತ..

ದೋಸ್ತಿ ವಿಷಯವೂ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಅತೃಪ್ತಿ, ಗೊಂದಲದ ಹೊಗೆ ದಟ್ಟವಾಗಿದ್ದು ಅದನ್ನು ನಿವಾರಿಸಲು ಹೈಕಮಾಂಡ್ ಮುಂದಾಗಿದೆಯೇ? ಆ ನಿಟ್ಟಿನಲ್ಲಿ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದೆಯೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಬಹು ಚರ್ಚಿತವಾಗುತ್ತಿದೆ.

ಕಳೆದ ವಾರ ಮಲ್ಲಿಕಾರ್ಜುನ ಖರ್ಗೆ ದಿಲ್ಲಿ ಭೇಟಿ (ಹಿರಿಯ ಮುಖಂಡರ ಸಭೆಯ ನೆಪ) ನಂತರ ಈಗ ಸಿಎಲ್ಪಿ ಮುಖಂಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ದಿಢೀರೆಂದು ದಿಲ್ಲಿಗೆ ತೆರಳಿದ್ದಾರೆ ಎಂಬ ವರದಿಗಳು ಈ ಊಹಾಪೋಹಕ್ಕೆ ಪುಷ್ಟಿ ನೀಡಿವೆ.

ಸಿದ್ದರಾಮಯ್ಯ ಅವರ ರಹಸ್ಯ ದಿಲ್ಲಿ ಭೇಟಿ (?) ಹಿಂದೆ ರಾಜ್ಯ ಕಾಂಗ್ರೆಸ್‌ಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ವಿಸ್ತೃತ ಮಾತುಕತೆಯ ಉದ್ದೇಶ ಅಡಗಿದೆಯೇ ಎಂಬ ವಿಚಾರವೂ ಇದೆ. ಈ ಭೇಟಿ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಹ್ಮದ್ ಪಟೇಲ್ ಹಾಗೂ ಸಾಧ್ಯವಾದರೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬಹುದು ಎನ್ನಲಾಗಿದೆ.

ವಾರದ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ದಿಲ್ಲಿಗೆ ತೆರಳಿ ಕಾಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ಆಗುಹೋಗುಗಳ ಬಗ್ಗೆ ಹಾಗೂ ದೋಸ್ತಿ ಸರಕಾರದ ಸುಭದ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರುಹಿದ್ದರು.

ರಾಹುಲ್-ಗೌಡರ ಭೇಟಿ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಗಾಳಿ ಬೀಸುವ ವರದಿ, ವದಂತಿಗಳು ದಟ್ಟವಾಗಿವೆ. ಕೆಪಿಸಿಸಿ ಅಧ್ಯಕ್ಷತೆ, ಸಿಎಲ್ಪಿ ನಾಯಕತ್ವ ಹಾಗೂ ಸಮನ್ವಯ ಸಮಿತಿ ಮುಖ್ಯಸ್ಥರ ಬದಲಾವಣೆಯ ಮಾತು ಕೇಳಿಬರುತ್ತಿದೆ.

ರಾಜ್ಯ ಕಾಂಗ್ರೆಸ್ ನೊಗವನ್ನು ಸಿದ್ದರಾಮಯ್ಯ ಅವರ ಕೈಗಿತ್ತು ಅವರ ಸ್ಥಾನದಲ್ಲಿ ಸಮನ್ವಯ ಸಮಿತಿಗೆ ಖರ್ಗೆ ಅವರನ್ನು ತಂದು ಸಿಎಲ್ಪಿಗೆ ಶಿವಕುಮಾರ್ ಅವರನ್ನು ನಾಯಕರನ್ನಾಗಿ ಮಾಡುವ ಸಾಧ್ಯತೆ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.  ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ದಿಲ್ಲಿ ಭೇಟಿ ಈ ಅಂತೆಕಂತೆಗಳಿಗೆ ಸಾಧ್ಯಾಸಾಧ್ಯತೆಗಳ ರೆಕ್ಕೆಪುಕ್ಕ ಜೋಡಿಸಿವೆ ಎಂದೇ ಹೇಳಬಹುದಾಗಿದೆ.

Categories
Breaking News Political State

Congress : ಸಿಎಲ್‌ಪಿ ಸಭೆಗೆ ಹಾಜರಾದ ರಮೇಶ್ ಬೆಂಬಲಿಗರು, ಏಕಾಂಗಿಯಾದ ರಮೇಶ್‌…

ಬುಧವಾರ ರಾತ್ರಿ ಕರೆದಿದ್ದ ಸಿಎಲ್ಪಿ ಸಭೆಗೆ ಭಿನ್ನರಾಗ ಹಾಡುತ್ತಿರುವ ಬಹುತೇಕ ಶಾಸಕರು ಹಾಜರಾಗಿದ್ದು ರಮೇಶ್ ಜಾರಕಿಹೊಳಿ ಏಕಾಂಗಿಯಾಗಿದ್ದಾರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಕರೆದಿದ್ದ ಈ ಸಭೆಗೆ ರಮೇಶ್ ಜಾರಕಿಹೊಳಿ ಅನುಯಾಯಿಗಳೆಲ್ಲರೂ ಹಾಜರಾಗಿದ್ದು ಈ ಪ್ರಶ್ನೆಗೆ ಇಂಬು ನೀಡಿದೆ. ಸಭೆಗೆ ರೋಶನ್ ಬೇಗ್ ಸಹ ಗೈರಾಗಿದ್ದರಾದರೂ ಅವರು ರಮೇಶ್ ಕ್ಯಾಂಪಿನ ಜೊತೆ ಗುರುತಿಸಿಕೊಮಡವರಲ್ಲ.

ರಾಮಲಿಂಗಾರೆಡ್ಡಿ ಯವರು ವಿದೇಶದಲ್ಲಿದ್ದಾರೆ. ಸುಬ್ಟಾರೆಡ್ಡಿ, ರಾಜಶೇಖರ ಪಾಟೀಲ್ ಚುನಾವಣೆ ಯಿಂದ ಬಂದಿಲ್ಲ. ರಮೇಶ್‌ ಜಾರಕಿಹೊಳಿ ಹಾಗೂ ಬೇಗ್‌ ಯಾಕೆ ಬಂದಿಲ್ಲ ಎಂಬುದು ಗೊತ್ತಿಲ್ಲ. ಅವರು ಗೈರು ಹಾಜರಾಗುವ ಬಗ್ಗೆ ಅನುಮತಿ ಕೇಳಿಲ್ಲ. ಆದರೂ ಅವರೂ ಎಲ್ಲೂ ಹೋಗಿಲ್ಲ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ.

ಸಭೆಗೆ ಮುನ್ನ ಬೆಂಬಲಿಗ ಶಾಸಕರು ರಮೇಶ್ ಅವ್ರ ಜೊತೆ ಸಾಕಷ್ಟು ಕಾಲ ಮಾತುಕತೆ ನಡೆಸಿದ್ದರು. ಅಲ್ಲದೇ ಇಬ್ರು ಪಕ್ಷೇತರ ಶಾಸಕರು ಸಹ ರಮೇಶ್ ಜೊತೆ ಮಾತುಕತೆ ನಡೆಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗಿತ್ತು. ಆದರೆ ಸಂಜೆ ವೇಳೆಗೆ ಎಲ್ಲರೂ ಸಿಎಲ್ಪಿ ಸಭೆಗೆ ಹಾಜರಾಗಿ ರಮೇಶ್ ಅವರನ್ನು ಏಕಾಂಗಿಯಾಗಿಸಿದರು.

ಈ ಹಿಂದೆ ಸಹ ಶಾಸಕರನ್ನು ಸೆಳೆಯಲು ರಮೇಶ್ ಪ್ರಯತ್ನ ಮಾಡಿದ್ದರಾದರೂ ತಮ್ಮ ಯತ್ನದಲ್ಲಿ ಯಶಸ್ವಿಯಾಗಿರಲಿಲ್ಲ. ಖುದ್ದು ಸಿಎಂ ಕುಮಾರಸ್ವಾಮಿ ಅವರೇ ಸಂಧಾನದ ನೇತೃತ್ವ ವಹಿಸಿ ಮಂತ್ರಿಗಿರಿಯ ಆಫರ್‍ ನೀಡಿದ್ದರು.

Categories
Breaking News Featured Political State

Election 2019 : ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ವಿಲನ್ ಆದರೆ ಸಿದ್ದರಾಮಯ್ಯ?

| ಸುನೀಲ್ ಶಿರಸಿಂಗಿ |

ಕರ್ನಾಟಕ ಕಾಂಗ್ರೆಸ್‍ನ ದಂಡನಾಯಕನಾಗಿ, ಯಶಸ್ವಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿ, ಬಡ ಮಧ್ಯಮ ವರ್ಗದ ಆಶಾಕಿರಣವಾಗಿದ್ದ ಸಿದ್ಧರಾಮಯ್ಯ ಇಂದು ಅದೇ ಕಾಂಗ್ರೆಸ್ ಪಕ್ಷದ ವಿಲನ್ ಆಗಿ ಕಾಣುತ್ತಿದ್ದಾರೆ. ಎಕ್ಸಿಟ್ ಪೋಲ್ ಬಂದತಕ್ಷಣ ಭಿನ್ನಮತದ ಮಾತುಗಳನ್ನು ಆಡಲು ಶುರು ಮಾಡಿದ ರೋಷನ್‍ಬೇಗ್‍ರ ಪ್ರಧಾನ ಟಾರ್ಗೆಟ್ ಸಿದ್ದರಾಮಯ್ಯನವರೇ ಆಗಿದ್ದರು. ಬಹುಶಃ ಈ ವರಸೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಕಾಂಗ್ರೆಸ್ ವಲಯದಿಂದ ಹೊರಬಿದ್ದ ಅಸಮಾಧಾನದ ದನಿಗಳು ಹೀಗಿವೆ. ‘ನಾವು ಹೀಗೆ ಹೇಳಿದರೆ ಬೇರೆಯವರು ನಂಬದಿರಬಹುದು. ಆದರೆ, ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕನಾಗಿ ಮಿಂಚುತ್ತಿರುವ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ನೀಡಿದೆ. ಅವರ ಕನಸಾಗಿದ್ದ ಮುಖ್ಯಮಂತ್ರಿ ಪಟ್ಟವನ್ನು ಕಟ್ಟಿದೆ.. ಆದರೆ ಇದು ನಿಜ. ಕಳೆದೆರಡು ವರ್ಷಗಳಲ್ಲಿ ಅವರ ನಡೆಗಳನ್ನು ನೋಡುತ್ತಾ ಬಂದರೆ, ಅವರ ರಾಜಕೀಯ ಲೆಕ್ಕಾಚಾರದ ಒಳಸುಳಿಗಳನ್ನು ಬಿಡಿಸುತ್ತಾ ಬಂದರೆ ಕಾಣುವುದು ಅವರ ಸ್ವಾರ್ಥ ರಾಜಕೀಯ ಮತ್ತು ದುರಹಂಕಾರದ ನಡೆ ಬಿಟ್ಟು ಮತ್ತೇನು ಇಲ್ಲ.’

‘ಮುಖ್ಯಮಂತ್ರಿಯ ಪಟ್ಟ ತಪ್ಪಿದ್ದರಿಂದ ಹತಾಶಗೊಂಡಿದ್ದ ಅಹಿಂದ ನಾಯಕ ಸಿದ್ಧರಾಮಯ್ಯರನ್ನು, ಕಾಂಗ್ರೆಸ್ ಪಕ್ಷ ರತ್ನಗಂಬಳಿ ಹಾಸಿ ಸ್ವಾಗತಿಸಿತು. ನಂತರ ಪಕ್ಷದ ನಿಷ್ಠಾವಂತ ಮಲ್ಲಿಕಾರ್ಜುನ ಖರ್ಗೆಯವರ ಹಿರಿತನವನ್ನು ಕಡೆಗಣಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಅಧಿಕಾರ ಸಿಕ್ಕ ಕೆಲದಿನಗಳ ಮಟ್ಟಿಗೆ ಶಾಂತವಾಗಿದ್ದ ಸಿದ್ದು, ನಂತರ ತಮ್ಮ ಬತ್ತಳಿಕೆಯಿಂದ ಒಂದೊಂದೆ ಬಾಣಗಳನ್ನು ಬಿಡತೊಡಗಿದರು. ತಮ್ಮನ್ನು ಕಾಂಗ್ರೆಸ್ ಪಕ್ಷದಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಎಚ್.ವಿಶ್ವನಾಥ್‍ರನ್ನು ನಿರ್ಲಕ್ಷಿಸಿ ದೂರ ಮಾಡಿಕೊಂಡರು.’

ಈ ಅವಧಿಯಲ್ಲಿ ಕಾಂಗ್ರೆಸ್‍ನ ಜನಪ್ರಿಯತೆಯನ್ನು ಹೆಚ್ಚಿಸಿದ್ದು ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮತಪ್ರಮಾಣ ಹೆಚ್ಚಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲವೇ? ‘ಹೌದು ಇದೆ. ಅದರಲ್ಲಿ ಸಂಶಯವಿಲ್ಲ. ಜೊತೆಗೆ ಈ ಅವಧಿಯಲ್ಲಿ ಅವರು ಯಡಿಯೂರಪ್ಪನವರಿಗಿಂತ ದೊಡ್ಡ ಮಾಸ್ ಲೀಡರ್ ಆಗಿ ಬೆಳೆದರು. ಅವರನ್ನು ಯಾರೂ ನಿರ್ಲಕ್ಷಿಸಲಾಗದ ಪ್ರಮಾಣಕ್ಕೆ ಸಿದ್ದರಾಮಯ್ಯನವರ ಶಕ್ತಿ ಹೆಚ್ಚಿತು. ಅದೇ ಮುಳುವಾದದ್ದು. ಏಕೆಂದರೆ, ಒಂದು ಸಮತೋಲನ ಕಾಪಾಡಬೇಕಿದ್ದ ಕಾಂಗ್ರೆಸ್ ಪಕ್ಷ ಸಿದ್ದುರ ಅಲೆಯಲ್ಲಿ ತೇಲಿ ಹೋಯಿತು. ನಂತರ ಮಲ್ಲಿಕಾರ್ಜುನ ಖರ್ಗೆ ಹೆಗಲ ಮೇಲೆ ಬಂದೂಕ ಇಟ್ಟು ಮುಸ್ಲಿಂ ನಾಯಕ ಖಮರುಲ್ ಇಸ್ಲಾಂ ಮತ್ತು ಹಳೆ ಮೈಸೂರು ಭಾಗದ ಹಿರಿಯ ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಮೇಲೆ ಗುಂಡು ಹಾರಿಸಿದರು. ಅಂದರೆ ಒಂದು ಹಂತದಲ್ಲಿ ರಾಜಕೀಯವಾಗಿ ಗೆದ್ದರು. ಆದರೆ ನಾಯಕನಾಗಿ, ಮುತ್ಸದ್ದಿಯಾಗಿ ಸೋಲುತ್ತಾ ಸಾಗಿದ್ದರು.’

‘2018ರ ವಿಧಾನ ಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸ್ಪಷ್ಟ ಸಾಧ್ಯತೆಗಳಿದ್ದವು. ಆದರೆ ಅವರ ಕೆಲವು ತಪ್ಪು ನಡೆ ಮತ್ತು ಅತೀ ಆತ್ಮವಿಶ್ವಾಸದಿಂದ ಆ ಅವಕಾಶವನ್ನು ಹಾಳುಮಾಡಿದರು. ಮೊದಲಿಗೆ ತಮ್ಮ ಸ್ವಂತ ಕ್ಷೇತ್ರವಾದ ವರುಣಾದಲ್ಲಿ ರಾಜಕೀಯದ ಆಸಕ್ತಿಯೇ ಇಲ್ಲದಿದ್ದ ತಮ್ಮ ಮಗನನ್ನು ಸ್ಥಾಪಿಸಲು ಹೊರಟಿದ್ದರು. ತಾವು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹಾರಿದ್ದು ಒಂದೆಡೆಯಾದರೆ, ಬಾದಾಮಿಯಲ್ಲಿ ಸ್ಪರ್ಧಿಸಿದ್ದು ಪಕ್ಷಕ್ಕೆ ದೊಡ್ಡ ಹೊಡೆತ ಕೊಟ್ಟಿತು. ಜೊತೆಗೆ ರಾಜ್ಯದಲ್ಲಿ ಪ್ರಬಲ ಕೋಮುಗಳ ಧೃವೀಕರಣದ ಸ್ಪಷ್ಟ ಸೂಚನೆಗಳಿದ್ದರು, ಅದಕ್ಕೆ ಪ್ರತಿ ತಂತ್ರ ಹೆಣೆಯುವುದನ್ನು ಬಿಟ್ಟು ದೊಡ್ಡಗೌಡರನ್ನು ಏಕವಚನದಲ್ಲಿ ನಿಂದಿಸುತ್ತಾ ಸಾಗಿದ್ದು ಪಕ್ಷಕ್ಕೆ ಇನ್ನಷ್ಡು ಹೊಡೆತ ಕೊಟ್ಟಿತು’.

‘ಪಕ್ಷ ಬಹುಮತ ಪಡೆಯದೆ JDS ಜೊತೆ ಅಧಿಕಾರ ಹಂಚಿಕೊಳ್ಳಬೇಕಾಗಿ ಬಂದಿದ್ದರಿಂದ ಇನ್ನಾದರು ಸಿದ್ದು ನಡೆಗಳಿಗೆ ಬ್ರೇಕ್ ಬೀಳುತ್ತೆ ಅಂತ ಅಂದುಕೊಂಡಿದ್ದ ಅವರ ಅಭಿಮಾನಿಗಳಿಗೆ ಭಾರಿ ನಿರಾಶೆ ಕಾದಿತ್ತು. ದೋಸ್ತಿ ಸರಕಾರದಲ್ಲಿ ಬಂಡಾಯವೆದ್ದ ಕಾಂಗ್ರೆಸ್ ಪಕ್ಷದ ಶಾಸಕರ ಬೆನ್ನಿಗೆ ಸಿದ್ದು ಕೈ ಇದ್ದದ್ದು ಹೈಕಮಾಂಡ್ ಗಮನಿಸಲೇ ಇಲ್ಲ.’ ಇಲ್ಲಿಂದಾಚೆಗೆ ಹೇಳುವ ಮಾತುಗಳು ಆಶ್ಚರ್ಯಕರವಾಗಿದೆ. ‘ಇಷ್ಟಾದರು ಸುಮ್ಮನಾಗದ ಸಿದ್ಧರಾಮಯ್ಯ ರಾಜ್ಯ ಕಾಂಗ್ರೆಸ್ ಪಕ್ಷದ ಪಕ್ಷಾತೀತ ನಾಯಕನಾಗಲು ಹೊರಟರು. ಅದರ ಭಾಗವಾಗಿ ಅವರ ಮುಂದಿನ ಗುರಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ.

ಅದಕ್ಕಾಗಿ ಬತ್ತಳಿಕೆಯಿಂದ ಹೊರಬಿದ್ದ ಬಾಣವೇ ಉಮೇಶ್ ಜಾಧವ್. ಧರ್ಮಸಿಂಗ್ ಸಾವಿನ ನಂತರ ಅನಾಥವಾಗಿದ್ದ ಜಾಧವರನ್ನು ಬಳಸಿ ಮಲ್ಲಿಕಾರ್ಜುನ ಖರ್ಗೆ ಬಗ್ಗುಬಡೆಯುವ ಪ್ಲಾನ್ ಮಾಡಿದರು. ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ಧರಾಮಯ್ಯ ದ್ರೋಹ ಬಗೆದರು. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖರ್ಗೆ ಅವರು ಸಿದ್ಧರಾಮಯ್ಯರ ಜೊತೆಗೆ ನಿಂತಿದ್ದರು. ಖರ್ಗೆ ಅವರ ವಿರುದ್ಧ ಉಮೇಶ್ ಜಾಧವ ಅವರನ್ನು ಕಳಿಸುವ ಆಟ ಆಡಲು ಪ್ರಯತ್ನಿಸಿದರು. ಅದು ಕೈಮೀರಿ ಹೋದ ನಂತರ ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಿಜೆಪಿ ಸೇರಲಿಕ್ಕೆ ಜಾರಕಿಹೊಳಿ ಜೊತೆ ಮುಂಬೈಗೆ ಹೋದ ಜಾಧವ್ ನಂತರ ಕಾಂಗ್ರೆಸ್ಸಿಗರ ಕೈಗೆ ಸಿಗಲಿಲ್ಲ.’

‘ಮಂಡ್ಯದಲ್ಲಿ ಗೌಡರ ಕುಟುಂಬವನ್ನು ಹತೋಟಿಯಲ್ಲಿ ಇಡುವುದಕ್ಕಾಗಿ ಚಿತ್ರನಟ ಅಂಬರೀಶ ಅವರ ಪತ್ನಿ ಸುಮಲತಾ ಅವರನ್ನು ಕಣಕ್ಕೆ ಇಳಿಯುವಂತೆ ನೋಡಿಕೊಂಡರು. ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಸಿದ್ಧರಾಮಯ್ಯ ಅವರ ಬಣದ ಕಾಂಗ್ರೆಸ್ಸಿಗರು ಅವರ ಜೊತೆಗಿದ್ದರು ಎಂಬುದು ಗುಟ್ಟಿನ ಸಂಗತಿಯೇನಲ್ಲ. ಸುಮಲತಾ ಅವರಿಗೆ ದೊರೆತ ಕಾಂಗ್ರೆಸ್ ಬೆಂಬಲದ ಕಾರಣದಿಂದ ಮೈಸೂರು ಮತ್ತಿತರ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‍ಗೆ ಜೆಡಿಎಸ್ ತನ್ನ ಸಂಪೂರ್ಣ ಸಹಕಾರ ನೀಡಲು ಸಾಧ್ಯವಾಗಲಿಲ್ಲ. ಕಲಬುರ್ಗಿಯ ಖರ್ಗೆಯವರ ಹಿನ್ನಡೆ ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿತು. ಜೆಡಿಎಸ್ ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತೆ ಮಾಡಿದ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಅದಕ್ಕಾಗಿ ಬೆಲೆ ತೆರಬೇಕಾಯಿತು.’

ಮೇಲಿನ ಮಾತುಗಳೆಲ್ಲವೂ ಸತ್ಯ ಎಂದು ಹೇಳಲಾಗದೇ ಇದ್ದರೂ, ಸಂಪೂರ್ಣ ಅಲ್ಲಗಳೆಯುವುದೂ ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯನವರ ನಡೆಗಳಿವೆ. ಮೋದಿ ಎದುರು ಸಮರ್ಥವಾದ ಸೈದ್ಧಾಂತಿಕ ನಾಯಕತ್ವ ನೀಡುವರೆಂಬ ನಿರೀಕ್ಷೆ ಹುಟ್ಟಿಸಿದ್ದ ಸಿದ್ದರಾಮಯ್ಯನವರು ಹೀಗೆ ಮಾಡಿದ್ದು ಹೌದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

Categories
Breaking News National Political State

Election 2019 : JDS & Congres – ಹಾಲಿ ಸಂಸದರ ಪರ ಸಿದ್ದು ಬ್ಯಾಟಿಂಗ್….

ಜೆಡಿಎಸ್ ಜೊತೆ ದೋಸ್ತಿ ಏನಿದ್ದರೂ ಹಾಲಿ ಇರುವ ಸಂಸದರ ಕ್ಷೇತ್ರಗಳನ್ನು  ಹೊರತುಪಡಿಸಿ ಆಗಬೇಕು ಹಾಗೂ ಹಾಲಿ ಸಂಸದರಿಗೇ ಮತ್ತೆ ಟಿಕೆಟ್ ನಿಡಬೇಕು ಎಂಬ ಒತ್ತಾಯವನ್ನು ರಾಜ್ಯ ಕಾಂಗ್ರೆಸಿಗರು ಹೈಕಮಾಂಡ್‌ ಮುಂದಿಟ್ಟಿದ್ದಾರೆ.

ದಿಲ್ಲಿಯಲ್ಲಿ ಸೋಮವಾರ ಸುಮಾರು ಐದು ಗಂಟೆ ನಡೆದ ಪರಿಶೀಲನಾ ಸಮಿತಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳು ಹಾಗೂ ದೋಸ್ತಿ ಸೀಟುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು ಎನ್ನಲಾಗಿದೆ.

ಈ ವಿಷಯದಲ್ಲಿ ಸಿದ್ದರಾಮಯ್ಯ ಅವರ ನಿಲುವಿಗೆ ಸಭೆಯಲ್ಲಿ ಹಾಜರಿದ್ದ ಉಪಮುಖ್ಯಮಂತ್ರಿ ಪರಮೇಶ್ವರ ಹಾಗೂ ಇನ್ನಿತರ ಕೆಪಿಸಿಸಿ ಮುಖಂಡರು ದನಿಗೂಡಿಸಿದ್ದಾರೆ.

ಇದೇ ವೇಳೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಬಾರದು ಎಂದು ಈ ಮುಖಂಡರು ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಹಾಲಿ ಕಾಂಗ್ರೆಸ್ ಸಂಸದರಿರುವ ಕೋಲಾರ, ತುಮಕೂರು ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಕೈ ನಾಯಕರು ಈ ನಿಲುವು ತಳೆದಿದ್ದಾರೆ.

ಇದರ ಜೊತೆಗೇ ಜೆಡಿಎಸ್‌ಗೆ ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡಲು ಖುದ್ದು ಸಿದ್ದು ಬಲವಾದ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಗೆ ಮುನ್ನ ಮಾತನಾಡಿದ ಮಾಜಿ ಸಿಎಂ ಮಂಡ್ಯದಲ್ಲಿ ಸುಮಲತಾ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಮೊದಲು ಹೇಳಿದ್ದೇ ನಾನು. ಹೀಗಾಗಿ ಅವರ ಸ್ಪರ್ಧೆಯ ನಿರ್ಧಾರದ ಹಿಂದೆ ತಮ್ಮ ಕೈವಾಡವಿದೆ ಎಂಬ ವರದಿಗಳಿಗೆ ಸ್ಪಷ್ಟನೆ ನೀಡಿದರು.