ಫ್ಯಾಕ್ಟ್‌ಚೆಕ್: ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪಾರಿವಾಳ ಹಾಯ್‌ ಹೇಳಿದ್ದು ನಿಜವೇ ?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಾರಿವಾಳದತ್ತ ಹಾಯ್ ಎಂದು ಸಾಂಕೇತಿಕವಾಗಿ ಕೈ ಬೀಸಿದಾಗ  ಮತ್ತು ಪ್ರತಿಯಾಗಿ ಪಾರಿವಾಳವು ತನ್ನ ರೆಕ್ಕೆಯನ್ನು ಎತ್ತಿ ವಿಶ್ ಮಾಡುತ್ತಿರುವ ವೀಡಿಯೊ  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾರಿವಾಳವು ಪುಟಿನ್ ಅವರಿಗೆ ಹಿಂತಿರುಗಿ ನಮಸ್ಕರಿಸುತ್ತಿದೆ ಎನ್ನುವ ಹೇಳಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರೂ ಇದೇ ವಿಡಿಯೋವನ್ನು ಶೇರ್ ಮಾಡಿದ್ದಾರೆ.  ಪುಟಿನ್‌ ಕೈ ಬೀಸಿದ ಕಾರಣಕ್ಕೆ ಪಾರಿವಾಳವೊಂದು ನಿಜವಾಗಿಯೂ ಈ ರೀತಿ ರೆಕ್ಕೆ ಬಡಿಯುವ ಮೂಲಕ ನಮಸ್ಕಾರ ತಿಳಿಸಿದಿಯೇ ಅಥವಾ ಇದು ಕಾಕತಾಳೀಯವೇ ? ಇದರ ಸತ್ಯಾಸತ್ಯತೆ ಏನೆಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ಪೋಸ್ಟ್‌ಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ ಸರ್ಚ್ ಮಾಡಿದಾಗ, 2017 ರಲ್ಲಿ  Ruptly (ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ) ಯು ಹಂಚಿಕೊಂಡಿರುವ ಸುದ್ದಿ ವರದಿಯು ಲಭ್ಯವಾಗಿದೆ. ವರದಿಯ ಶೀರ್ಷಿಕೆಯು ‘ಪುಟಿನ್ ಆಧ್ಯಾತ್ಮಿಕ ಕೇಂದ್ರದಲ್ಲಿ ಪಾರಿವಾಳದಿಂದ  ಮೂಕ ವಿಸ್ಮಿತರಾದರು ಎಂದಿದೆ. ಆದರೂ ಈ ವೆಬ್‌ಸೈಟ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್‌ ಮಾಡಿಲ್ಲ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಇದಲ್ಲದೆ, ರಪ್ಟ್ಲಿ (ಯೂಟ್ಯೂಬ್ ವೀಡಿಯೊ) ಸುದ್ದಿ ವರದಿಯ ಥಂಬ್‌ನೇಲ್ ಪುಟಿನ್ ಮತ್ತು ಪಾರಿವಾಳದ ಚಿತ್ರವನ್ನು ಸಹ ಹೊಂದಿದೆ. ರಷ್ಯಾ-ಉಕ್ರೇನ್ ಯುದ್ದದ ಹಿನ್ನೆಲೆಯಲ್ಲಿ ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಚಾನೆಲ್‌ಗಳಾದ ಆರ್‌ಟಿ ಮತ್ತು ಸ್ಪುಟ್ನಿಕ್ ಅನ್ನು  ನಿರ್ಬಂಧಿಸಿರುವುದರಿಂದ ಯೂಟ್ಯೂಬ್‌ನ ಈ ವೀಡಿಯೊ ಕೂಡ ನಮ್ಮ ದೇಶದಲ್ಲಿ ಸದ್ಯ ಲಭ್ಯವಿಲ್ಲ.

ವಾಸ್ತವವಾಗಿ ಪುಟಿನ್‌ ಮಾಡಿದ ಸಂಕೇತಕ್ಕೆ ಪ್ರತಿಯಾಗಿ ಪಾರಿವಾಳ ರೆಕ್ಕೆ ಬೀಸುತ್ತಿರುವ  ದೃಶ್ಯಗಳು ನಿಜವಲ್ಲ. ಅದನ್ನು ಎಡಿಟ್ ಮಾಡಿ ಡಿಜಿಟಲ್ ರೂಪದಲ್ಲಿ ರಚಿಸಲಾಗಿದೆ. ಮೂಲ ದೃಶ್ಯಗಳ ಪ್ರಕಾರ, ಪುಟಿನ್ ಪಾರಿವಾಳದ ಕಡೆಗೆ ತನ್ನ ಕೈಯನ್ನು ಬೀಸುತ್ತಾರೆ, ಆದರೆ ಪಾರಿವಾಳವು ಪ್ರತಿಯಾಗಿ ರೆಕ್ಕೆಯನ್ನು ಹಾರಿಸುವುದಿಲ್ಲ, ಬದಲಿಗೆ ಪಾರಿವಾಳವು ದೂರ ಸರಿದು ಮುಂದೆ ಹೋಗುತ್ತದೆ. ಪುಟಿನ್ 2017 ರಲ್ಲಿ ಮಾಸ್ಕೋದ ರೋಗೋಜ್ಸ್ಕಿ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ರಪ್ಟ್ಲಿ ಮೂಲ ದೃಶ್ಯಗಳನ್ನು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾರೆ ರಷ್ಯಾ ಅಧ್ಯಕ್ಷ ಕೈ ಬೀಸಿ ಹಾಯ್ ಹೇಳಿದ್ದಕ್ಕೆ ಪಾರಿವಾಳವೊಂದು ಪ್ರತಿಯಾಗಿ ಕೈ ಬೀಸಿದೆ ಎಂಬುದೆಲ್ಲ ಸುಳ್ಳು.  ವೈರಲ್ ದೃಶ್ಯಗಳನ್ನು ಎಡಿಟ್ ಮಾಡಿ ಪಾರಿವಾಳ ತನ್ನ ರೆಕ್ಕೆ ಎತ್ತಿ ಬೀಸಿ  ಪ್ರತಿಕ್ರಿಯೆ ನೀಡುವಂತೆ ಡಿಜಿಟಲ್ ಎಡಿಟ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಂದೂ ಯುವಕನೊಬ್ಬ ಚೂರಿಯಿಂದ ಇರಿದ ವಿಡಿಯೋವನ್ನು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights