ಫ್ಯಾಕ್ಟ್‌ಚೆಕ್: ಕೋಣವೊಂದು ದಾಳಿ ಮಾಡುತ್ತಿರುವ ವಿಡಿಯೊ ಭಾರತದಲ್ಲ

ಕೋಣವೊಂದಕ್ಕೆ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈದ್-ಉಲ್-ಅಧಾ ಸಂದರ್ಭದಲ್ಲಿ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ಘಟನೆ ಭಾರತದಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಸೆರೆಹಿಡಿಯಲಾಗಿರುವ ದೃಶ್ಯಗಳ ಸತ್ಯಾಸತ್ಯತೆ ಕುರಿತು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವಿಡಿಯೊದ ಸ್ಕ್ರೀನ್‌ಶಾಟ್‌ ಅನ್ನು Google ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜುಲೈ 21, 2021 ರಂದು ಅದೇ ವೀಡಿಯೊವನ್ನು GeoTv ಯಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಮದವೇರಿದ ಕೋಣವನ್ನು ಹಿಡಿಯಲು ಹರಸಾಹಸ ಪಡುತ್ತಿರುವ ಪುರುಷರು ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಜುಲೈ 22, 2021 ರಂದು ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ಅಪ್‌ಲೋಡ್ ಮಾಡಿದ ಗಲ್ಫ್ ನ್ಯೂಸ್‌ನಲ್ಲಿನ ವರದಿಯು ಲಭ್ಯವಾಗಿದ್ದು. ವರದಿಯ ಪ್ರಕಾರ, “ ಕರಾಚಿಯಲ್ಲಿ ಕೋಣವೊಂದು ತಪ್ಪಿಸಿಕೊಂಡಿತ್ತು ಅದು ಮನಬಂದಂತೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಓಡಲಾರಂಭಿಸಿತ್ತು ಅದನ್ನು ಹಿಡಿಯಲು ಹಲವು ಸುತ್ತು ಗುಂಡು ಹಾರಿಸಲಾಗದೆ ಎಂದು ವರದಿಯಾಗಿದೆ.

ಮಾನವ ರೂಪದ ಮೃಗಗಳು ಪ್ರಾಣಿಯ ಮೇಲೆ ಹೇಗೆ ಅಮಾನವೀಯವಾಗಿ ಎರಗಿದ್ದಾರೆ, ಈ ಅಜ್ಞಾನಿಗಳಿಗೆ ಎಂತಹ ಶಿಕ್ಷೆ ನೀಡಬೇಕು ಹೇಳಿ ಎಂದು ಹಲವರು ವಿಡಿಯೊ ಟ್ವೀಟ್ ಮಾಡಿದ್ದಾರೆ. ಕರಾಚಿ ಯೂನಿವರ್ಸಿಟಿ ಹೌಸಿಂಗ್ ಸೊಸೈಟಿ ವ್ಯಾಪ್ತಿಯಲ್ಲಿ ಕೋಣದ ಮೇಲೆ ಗುಂಡು ಹಾರಿಸಿದ ಎಂಟು ಜನರನ್ನು ಜಿಲ್ಲಾ ಪೂರ್ವ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದು ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ ಆದರೆ ಇದನ್ನು ಭಾರತದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಇದೇ ವಿಡಿಯೋವನ್ನು ಕೆಲವರು ಎಡಿಟ್ ಮಾಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಎಮ್ಮೆಗಳು ಹೇಗೆ ಗುಮ್ಮುತ್ತಿದೆ ಎಂಬ ಶೀರ್ಷಿಕೆಯೊಂದಗೆ ಹಲವು ಬಾರಿ ಹಂಚಿಕೊಳ್ಳಲಾಗಿದೆ ಆದರೆ ಈ ವಿಡಿಯೋ ಭಾರತದ್ದಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊ ಪಾಕಿಸ್ತಾನದ ಕರಾಚಿಯಿಂದ ಬಂದಿದೆಯೇ ಹೊರತು ಭಾರತದಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ದೈತ್ಯಾಕಾರದ ಮಾನವನ ಅಸ್ಥಿಪಂಜರ ಪತ್ತೆ! ವಾಸ್ತವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights