ಫ್ಯಾಕ್ಟ್‌ಚೆಕ್: ಸಾವರ್ಕರ್‌ರನ್ನು ಮೊಹಮ್ಮದ್ ಅಲಿ ಜಿನ್ನಾ ಸ್ವಾಗತಿಸಿದ್ದು ನಿಜವೇ?

ಸಾವರ್ಕರ್ ವಿಚಾರ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸುತ್ತಿದೆ. ಸ್ವಾತಂತ್ರ್ಯ ಸೇನಾನಿಯೊ, ಅಲ್ಲವೊ ಎನ್ನುವ ಚರ್ಚೆ ನಡುವೆ ಫ್ಲೆಕ್ಸ್​ ವಿಚಾರ ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿತ್ತು. ಗಣೇಶೋತ್ಸವದಲ್ಲಿ ಸಾವರ್ಕರ್ ಅವರ ಫೋಟೊ ಇರಿಸುವ ಕುರಿತು ಸಂಘಪರಿವಾರ ಈಗಾಗಲೇ ಪ್ರಚಾರ ಮಾಡುತ್ತಿದೆ. ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಬಿ.ಕೆ.ಹರಿಪ್ರಸಾದ್  ಸಾವರ್ಕರ್ ಒಬ್ಬ ನಾಸ್ತಿಕ, ಅವರ ಫೋಟೋನ್ನು ಗಣೇಶೋತ್ಸವದಲ್ಲಿ ಪ್ರದರ್ಶಿಸುತ್ತಿರುವು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದರು.

ಈ ಎಲ್ಲ ಬೆಳವಣಿಗೆಯ ನಡುವೆ ಸಾವರ್ಕರ್ ಅವರು ಮಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಇದ್ದಾರೆ ಎಂದು ಹೇಳುವ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. “ಮೊಹಮ್ಮದ್ ಅಲಿ ಜಿನ್ನಾ ಅವರ ಆತ್ಮೀಯ ಸ್ನೇಹಿತ ಮತ್ತು ದೇಶ ವಿಭಜನೆಯ ವಾಸ್ತುಶಿಲ್ಪಿ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಸ್ವಾಗತಿಸುವ ಫೋಟೋ” ಎಂಬ ಹೇಳಿಕೆಯೊಂದಿಗೆ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸಾಮರ್ಕರ್ ಅವರನ್ನು ಜಿನ್ನಾರವರು ಕಾರಿನಿಂದ ಸ್ವಾಗತಿಸುತ್ತಿರುವ ಫೋಟೋ  ವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಅವರ ಕೆಲವು ಫೋಟೋಗಳು ಲಭ್ಯವಾಗಿವೆ. ಸಂಬಂಧಿತ ಕೀವರ್ಡ್ ಗಳನ್ನು ಬಳಸಿ ಮತ್ತಷ್ಟು ಸರ್ಚ್ ಮಾಡಿದಾಗ, “ಸರ್ ಸ್ಟಾಫರ್ಡ್ ಕ್ರಿಪ್ಸ್ ಅವರನ್ನು ಭೇಟಿಯಾಗಲು ಬಂದಿದ್ದ ಸಾವರ್ಕರ್ ಅವರನ್ನು ಮಹಾಸಭಾ ನಿಯೋಗದ ಮುಖ್ಯಸ್ಥರನ್ನು ಸ್ವಾಗತಿಸುತ್ತಿದ್ದಾರೆ (ದೆಹಲಿ ಮಾರ್ಚ್ 1942)” ಎಂಬ ಫೋಟೋ ಶೀರ್ಷಿಕೆಯೊಂದಿಗೆ ಹಲವು ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿರುವುದು ಕಂಡುಬಂದಿದೆ.

ಇದರಿಂದ ಸುಳಿವು ಪಡೆದು, ನಾವು ನಂತರ ಕ್ರಿಪ್ಸ್ ಮಿಷನ್ ಬಗ್ಗೆ ಸರ್ಚ್ ಮಾಡಿದಾಗ ಕ್ರಿಪ್ಸ್ ಅವರ ಭೇಟಿಯ ಸಮಯದಲ್ಲಿ ದೆಹಲಿಯಲ್ಲಿ ಮಾರ್ಚ್ 1942 ರಲ್ಲಿ ಹಲವು ಭಾರತದ ನಾಯಕರು ಕ್ರಿಪ್ಸ್ ಅವರನ್ನು ಭೇಟಿ ಮಾಡಿದ ಆರ್ಕೈವಲ್ ದೃಶ್ಯಗಳನ್ನು ಪರಿಶೀಲಿಸಲಾಗಿದೆ.

ಕ್ರಿಪ್ಸ್ ಅವರು ದೆಹಲಿಯಲ್ಲಿ ಭಾರತದ ನಾಯಕರನ್ನು ಭೇಟಿಯಾದಾಗ 1942 ರ ಕ್ರಿಪ್ಸ್ ಮಿಷನ್‌ನಲ್ಲಿ ಸೆರೆಹಿಡಿದ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ ಮತ್ತು 1.34 ನಿಮಿಷಗಳ ಅವಧಿಯಲ್ಲಿ ಹಿಂದೂ ಮಹಾಸಭಾ ಅಧ್ಯಕ್ಷ ವಿನಾಯಕ್ ಸಾವರ್ಕರ್ ಅವರನ್ನು ಕಾಣಬಹುದು. ಕಪ್ಪು ಬಿಳುಪಿನ ಆರ್ಕೈವ್ ವೀಡಿಯೋವನ್ನು ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯ ಯೂಟ್ಯೂಬ್‌ನಲ್ಲಿ ಅಕ್ಟೋಬರ್ 2013 ರಲ್ಲಿ “ಕ್ರಿಪ್ಸ್ ಮಿಷನ್, 1942” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದೆ.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕ್ರಿಪ್ಸ್ ಧರಿಸಿರುವ ಉಡುಪು ಮತ್ತು ಸಾವರ್ಕರ್ ಅವರನ್ನು ಭೇಟಿಯಾದ ವೈರಲ್ ಫೋಟೋದಲ್ಲಿರುವ ವ್ಯಕ್ತಿಯನ್ನು ಹೋಲಿಸಿ ನೋಡಿದಾಗ  ಸಾವರ್ಕರ್ ಭೇಟಿಯಾದ ಕ್ರಿಪ್ಸ್ ಫೋಟೋ ‘ಸಾವರ್ಕರ್ ಅಂಡ್ ಹಿಸ್ ಟೈಮ್ಸ್ (1950)’ ಪುಸ್ತಕದಲ್ಲಿ ಪ್ರಕಟವಾಗಿರುವುದು ಒಂದೆ ಆಗಿದೆ. ಮಾರ್ಚ್ 1942 ರಲ್ಲಿ ಕ್ರಿಪ್ಸ್ ಅವರನ್ನು ಭೇಟಿಯಾದ ಸಾವರ್ಕರ್ ಅವರ ಅದೇ ವೈರಲ್ ಫೋಟೋವನ್ನು ಧನಂಜಯ್ ಕೀರ್ ಬರೆದ ‘ಸಾವರ್ಕರ್ ಅಂಡ್ ಹಿಸ್ ಟೈಮ್ಸ್ (1950)’ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

Book page image

Archive.org ನಲ್ಲಿ ‘ಸಾವರ್ಕರ್ ಅಂಡ್ ಹಿಸ್ ಟೈಮ್ಸ್ (1950)’ ಪುಸ್ತಕವನ್ನು ವೀಕ್ಷಿಸಿದಾಗ, ಪುಟ ಸಂಖ್ಯೆ 260 ರಿಂದ 261 ರ ನಡುವೆ  ಅದೇ ಫೋಟೋ ಲಭ್ಯವಾಗಿದ್ದು, ಸಾವರ್ಕರ್ ಕ್ರಿಪ್ಸ್ ಅವರನ್ನು ಭೇಟಿಯಾದ ಫೋಟೋವನ್ನು, ‘ಸಾವರ್ಕರ್ ಮತ್ತು ಕ್ರಿಪ್ಸ್’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.

ಹಿಂದೂ ಮಹಾಸಭಾ ನಿಯೋಗದ ಸಭೆಯ ಭಾಗವಾಗಿ ಸಾವರ್ಕರ್ ಅವರ ಮತ್ತೊಂದು ಫೋಟೋದ ಕೆಳಗೆ ಕಾಂಗ್ರೆಸ್ ನಿಯೋಗವು, “ಕ್ರಿಪ್ಸ್ ಮಿಷನ್ ಸಮಯದಲ್ಲಿ, ಮಹಾಸಭಾ ನಿಯೋಗವು ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.

ಸಾವರ್ಕರ್, ಕ್ರಿಪ್ಸ್ ಜೊತೆ ಕೈಕುಲುಕುತ್ತಿರುವ ವೈರಲ್ ಫೋಟೋ ಮತ್ತು 1950 ರ ಪುಸ್ತಕದಲ್ಲಿ ಪ್ರಕಟವಾದ ಫೋಟೋವನ್ನು ಹೋಲಿಸಿ ನೋಡಿದಾಗ ಎರಡೂ ಫೋಟೋ ಒಂದೇ ಆಗಿದೆ. ಅದೇ ವೈರಲ್ ಫೋಟೋ ಇತ್ತೀಚೆಗೆ ಮಾರ್ಚ್ 2022 ರಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ (NAI) ನ ಪ್ರದರ್ಶನ ಮಾಡಿದೆ.

ಮಾರ್ಚ್ 11, 2022 ರ ದಿ ಹಿಂದೂ ಲೇಖನದಲ್ಲಿ, ‘ಇನ್‌ಸ್ಟ್ರುಮೆಂಟ್ಸ್ ಆಫ್ ಅಕ್ಸೆಶನ್ ಅಂಡ್ ಮರ್ಜರ್: ದಿ ಜರ್ನಿ ಆಫ್ ಇಂಟಿಗ್ರೇಷನ್’ ಶೀರ್ಷಿಕೆಯ ಪ್ರದರ್ಶನದಲ್ಲಿ, ನ್ಯಾಷನಲ್ ಆರ್ಕೈವ್ಸ್ ಉಪ ನಿರ್ದೇಶಕ ಸೈಯದ್ ಫರೀದ್ ಅಹ್ಮದ್ ಅಪರೂಪದ ಫೋಟೋಗಳು ಮತ್ತು ದಾಖಲೆಗಳು ಎಂದು ಹೇಳುವ ವೈರಲ್ ಫೋಟೋವನ್ನು ಉಲ್ಲೇಖಿಸುವ ಲೇಖನ ಲಭ್ಯವಾಗಿದೆ. “1942 ರಲ್ಲಿ ಕ್ರಿಪ್ಸ್ ಮಿಷನ್ನ ಭಾಗವಾಗಿ ಸರ್ ಸ್ಟಾಫರ್ಡ್ ಕ್ರಿಪ್ಸ್ ಅವರನ್ನು ಭೇಟಿಯಾದ ಹಿಂದೂ ಮಹಾಸಭಾದ ಅಧ್ಯಕ್ಷ ವಿ.ಡಿ. ಸಾವರ್ಕರ್ ಅವರ ಛಾಯಾಚಿತ್ರ” ಸೇರಿದಂತೆ ಇತರೆ ಫೋಟೋಗಳನ್ನು ಪ್ರದರ್ಶಿಸಲಾಯಿತು.

ಜಿನ್ನಾ, ಸಾವರ್ಕರ್ ಒಂದೇ ನಾಣ್ಯದ ಎರಡು ಮುಖಗಳು -ಡಾ. L. ಹನುಮಂತಯ್ಯ

ವಾಸ್ತವವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋ ಜಿನ್ನಾ, ಸಾವರ್ಕರ್ ಅವರನ್ನು ಸ್ವಾಗತಿಸುತ್ತಿರುವ ಫೋಟೋ ಎಂಬುದು ಸುಳ್ಳು. 1942 ರಲ್ಲಿ    ಕ್ರಿಪ್ಸ್ ಆಯೋಗವು ಭಾರತಕ್ಕೆ ಬೇಟಿ ನೀಡಿತ್ತು.ಈ ನಿಯೋಗದ ಅಧ್ಯಕ್ಷತೆಯನ್ನು“ ಸರ್ , ಸ್ಟ್ಯಾಫೋರ್ಡ್ ಕ್ರಿಪ್ಸ್” ಅವರು ವಹಿಸಿದ್ದರು, ನಿಯೋಗವನ್ನು ಭೇಟಿಯಾಗಲು ಬಂದಿದ್ದ ಆಗಿನ ಹಿಂದೂ ಮಹಾಸಭಾದ ನೇತೃತ್ವ ವಹಿಸಿದ್ದ ಸಾವರ್ಕರ್ ಅವರನ್ನು ಕ್ರಿಪ್ಸ್‌ ಸ್ವಾಗತಿಸುತ್ತಿರುವ ಫೋಟೋ ಆಗಿದೆ.

ಹಾಗಿದ್ದರೆ ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಎಂದಿಗೂ ಭೇಟಿಯೇ ಆಗಿಲ್ಲವೇ? ಎನ್ನುವ ಪ್ರಶ್ನೆಯು ಸಹಜವಾಗಿಯೇ ಮೂಡುತ್ತದೆ ಆದರೆ ಧರ್ಮದ ಆಧಾರದಲ್ಲಿ ಹಿಂದೂ ಮತ್ತು ಮುಸ್ಲಿಂ ರಾಷ್ಟ್ರಗಳು ಪ್ರತ್ಯೇಕಗೊಳ್ಳಬೇಕು ಎಂಬುದೇ ಜಿನ್ನಾ ಮತ್ತು ಸಾವರ್ಕರ್ ಅವರ ಆಶಯ ಆಗಿತ್ತು. ಜಿನ್ನಾ ಪಾಕಿಸ್ತಾನವನ್ನು ಪ್ರತಿಪಾದಿಸಿದರೇ, ಸಾವರ್ಕರ್​ ಹಿಂದೂಸ್ತಾನದ ಪ್ರತಿಪಾದನೆ ಮಾಡಿದ್ದರು.

ಸ್ವತಂತ್ರ ಪೂರ್ವ ಭಾರತದಲ್ಲಿ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ರಾಜ್ಯ ಒಕ್ಕೂಟಗಳು ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ ಮತ್ತು ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಸಿಂಧ್ ಪ್ರಾಂತ್ಯ ಮತ್ತು ವಾಯುವ್ಯ ಫ್ರಾಂಟಿಯರ್ ಪ್ರಾಂತ್ಯ (NWFP) ಸೇರಿದಂತೆ ಸ್ವತಂತ್ರ ಪೂರ್ವ ಭಾರತದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರಗಳನ್ನು ಒಟ್ಟಿಗೆ ನಡೆಸಿದ್ದವು.

ಕೃಪೆ: ಬೂಮ್ ಲೈವ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಖ್ಯಾತ ಪತ್ರಕರ್ತ ರವೀಶ್ ಕುಮಾರ್ NDTVಗೆ ರಾಜೀನಾಮೆ ನೀಡಿದ್ದಾರೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights