ಫ್ಯಾಕ್ಟ್‌ಚೆಕ್: ಈ ಐಷರಾಮಿ ವಾಹನವನ್ನು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಗಾಗಿ ಸಿದ್ದಪಡಿಸಲಾಗಿದೆಯೆ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಮಹತ್ವಾಕಾಂಕ್ಷೆಯ “ಭಾರತ್ ಜೋಡೋ ಯಾತ್ರೆ”ಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಾರಂಭಿಸಿ ಇಂದಿಗೆ 5 ದಿನಗಳಾಗಿವೆ. ದೇಶವ್ಯಾಪಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಗೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ.

https://twitter.com/brijeshchaodhry/status/1567943199448248320

ಯಾತ್ರೆಯಲ್ಲಿ ಪಾಲ್ಗೊಂಡಿರುವ 230 ಅತಿಥಿಗಳ ವಾಸ್ತವ್ಯಕ್ಕಾಗಿ 60 ಕಂಟೇನರ್ ಗಳು, ಹಾಗೂ ವಿಶೇಷ ಕಂಟೇನರ್ ಗಳು ಗಮನ ಸೆಳೆಯುತ್ತವೆ. ಆದರೆ ಈ ಸಮಯದಲ್ಲಿ ಕಂಟೈನರ್‌ಗಳ ಒಳಭಾಗವು ಹೇಗಿರುತ್ತದೆ ಎಂಬುದರ ಕುರಿತು ಅನೇಕರು ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇಂಡಿಯಾ ಟಿವಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಒಂದನ್ನು ಬಳಸಿಕೊಂಡಿದ್ದು, ಇದು ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿ ಬಳಸಿದ್ದ ಕಾರವಾನ್ ಎಂದು ಹೇಳಿಕೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗಾಗಿ ಸಿದ್ದವಾಗಿರುವ ಐಷಾರಾಮಿ ಕಾರಾವಾನ್ ಎಂದು ಹೇಳಲಾಗಿದ್ದು ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳ್ಲಿ ವೈರಲ್ ಆಗಿರುವ ಐಷಾರಾಮಿ ಒಳಾಂಗಣ ಮತ್ತು ಕಾರಾವಾನ್ ಚಿತ್ರಗಳು ಭಾರತ್ ಜೋಡೋ ಯಾತ್ರೆಯಲ್ಲಿ ಬಳಸಲಾದ ಕಂಟೈನರ್‌ದಲ್ಲ ಎಂದು ಇಂಡಿಯಾ ಟುಡೇ ಫ್ಯಾಕ್‌ಚೆಕ್ ವರದಿಯನ್ನು ಪ್ರಕಟಿಸಿದೆ. ವರದಿಯ ಪ್ರಕಾರ, ಫೋಟೋಗಳು 2013 ರಲ್ಲಿ ಪರಿಚಯಿಸಲಾದ ಪ್ರೀಮಿಯಂ ಮೋಟರ್‌ಹೋಮ್‌ನ ಒಳಭಾಗದ ಫೋಟೋಗಳು ಎಂದು  Indiatimes report  ಹೇಳಿದೆ. ಅದೇ ಫೋಟೋಗಳು ಮತ್ತು ಈ ಮೋಟರ್‌ಹೋಮ್‌ನ ಒಳಭಾಗದಲ್ಲಿರುವ ಹಲವಾರು ಇತರ ಫೋಟೋಗಳನ್ನು 2013 ರಲ್ಲಿ ಹಲವು ಫೇಸ್‌ಬುಕ್ ಫೇಜ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಮತ್ತೊಂದು ಫೋಟೋ ಕಾರವಾನ್‌ನದ್ದಾಗಿದ್ದು, Luxe Camper ವೆಬ್‌ಸೈಟ್‌ನಲ್ಲಿ 2019 ರ ಲೇಖನದಲ್ಲಿ ಪ್ರಕಟವಾಗಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದರ ಹೆಚ್ಚಿನ ಫೋಟೋಗಳು ಮಹಾರಾಷ್ಟ್ರ ಮೂಲದ ಕಾರವಾನ್ ಮಾರಾ ಸಂಸ್ಥೆ ಮೋಟೋಹೋಮ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿವೆ.

ಸಾಮಾಜಿಕ ಮಾಧ್ಯಮಗಳು ಮತ್ತು ಕೆಲ ಸುದ್ದಿ ಮಾಧ್ಯಮಗಳ್ಳಲ್ಲಿ ಭಿತ್ತರವಾಗುತ್ತಿರುವ ಕ್ಯಾರಾವಾನ್ ಮತ್ತು ಐಷಾರಾಮಿ ಸೌಕರ್ಯಗಳ ಬಗ್ಗೆ ಕಾಂಗ್ರೆಸ್‌ನ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್‌ ಮಾತನಾಡಿದ್ದು ರಾಹುಲ್ ಗಾಂಧಿ ಮತ್ತು ಪಕ್ಷದ ಕಾರ್ಯಕರ್ತರು ವಿಶ್ರಾಂತಿಗಾಗಿ ಬಳಸುವ ಕಂಟೈನರ್ ಸಾಮಾನ್ಯ ಕಂಟೈನರ್ ಆಗಿದ್ದು, ಇವುಗಳನ್ನು ಮುಂಬೈ ನಿಂದ ಬಾಡಿಗೆ ಪಡೆಯಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ಯಾತ್ರೆಯಲ್ಲಿ ಬಳಸಲಾಗುತ್ತಿರುವ ಕಂಟೈನರ್‌ಗಳು ಹವಾನಿಯಂತ್ರಣಗಳು ಮತ್ತು ಆಧುನಿಕ ಸೌಕರ್ಯಗಳನ್ನು ಹೊಂದಿವೆ. ಅವುಗಳಲ್ಲಿ ಒಂದನ್ನು ಮಿನಿ ಕಾನ್ಫರೆನ್ಸ್ ಹಾಲ್​ನ್ನಾಗಿ ಪರಿವರ್ತಿಸಲಾಗಿದೆ. ಪಾದಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರ ಬಳಿಯೇ ಈ ಕಂಟೈನರ್ ಇದೆ. ನಂ.1 ಎಂದು ಲೇಬಲ್ ಮಾಡಲಾದ, ಗಾಂಧಿ ಕುಟುಂಬಕ್ಕೆ ಕಂಟೈನರ್ ಒಂದು ಹಾಸಿಗೆ, ಒಂದು ಶೌಚಾಲಯ ಮತ್ತು ಮಂಚವನ್ನು ಹೊಂದಿದೆ. ಇದು ಹಳದಿ ಬಣದಿಂದ ಕೂಡಿದೆ. ಅವರ ಭದ್ರತಾ ತಂಡವು ಕಂಟೈನರ್ ಸಂಖ್ಯೆ 2ರಲ್ಲಿ ಇರುತ್ತಾರೆ. ಅವರ ಬಟ್ಟೆ, ಅವರ ಅಲಂಕಾರ ಸಾಮಾಗ್ರಿಗಳನ್ನು ಕಂಟೈನರ್ ಸಂಖ್ಯೆ 4 ರಲ್ಲಿ ಇರಿಸಲಾಗಿದೆ.

ಕಾಂಗ್ರೆಸ್ ಕಾರ್ಯದರ್ಶಿ ವಂಶಿ ಚಂದ್ ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಕಂಟೈನರ್ ಸಂಖ್ಯೆ 3ರಲ್ಲಿ ಇರುತ್ತಾರೆ. ಅದೇ ರೀತಿ, ನೀಲಿ ವಲಯದ ಕಂಟೈನರ್‌ಗಳು 2 ಹಾಸಿಗೆಗಳು ಮತ್ತು ವಾಶ್‌ರೂಮ್ ಅನ್ನು ಹೊಂದಿವೆ. ಅಂತಹ ಒಂದು ಕಂಟೈನರ್‌ನಲ್ಲಿ (ಸಂಖ್ಯೆ 15) ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್​ಗೆ ನೀಡಲಾಗಿದೆ. 2 ಕೆಳಗಿನ ಬರ್ತ್‌ಗಳು ಮತ್ತು 2 ಮೇಲಿನ ಬರ್ತ್‌ಗಳನ್ನು ಹೊಂದಿರುವ ಮಹಿಳಾ ಸದಸ್ಯರಿಗೆ ಗುಲಾಬಿ ಬಣ್ಣದ ಕಂಟೈನರ್‌ಗಳೂ ಇವೆ. ಇದಲ್ಲದೆ, ಇದರ ಜೊತೆಗೆ ಸ್ನಾನಗೃಹಗಳು ಮತ್ತು ಶೇಖರಣಾ ಸ್ಥಳಗಳೊಂದಿಗೆ ಸಜ್ಜುಗೊಂಡಿವೆ. ಮತ್ತೊಂದೆಡೆ, ಕೆಂಪು ಮತ್ತು ಆರ್ಗನ್ ಝೋನ್ ಕಂಟೈನರ್‌ಗಳಲ್ಲಿ 4 ಜನರು ವಾಸಿಸುತ್ತಾರೆ ಆದರೆ ಶೌಚಾಲಯಗಳಿಲ್ಲ.

ಕೆಲವು ಕಂಟೈನರ್‌ಗಳನ್ನು ಸಾಮಾನ್ಯ ವಾಶ್‌ರೂಮ್‌ಗಳಾಗಿ ಪರಿವರ್ತಿಸಲಾಗಿದೆ ಮತ್ತು ಅವುಗಳನ್ನು ಟಿ ಅಕ್ಷರದಿಂದ ಗುರುತಿಸಲಾಗಿದೆ. ಭಾಗವಹಿಸುವವರು ಇತರ ಕೆಲಸ ಸಿಬ್ಬಂದಿಗಳನ್ನು ಸಹ ಹೊಂದಿರುತ್ತಾರೆ, ಅವರ ಕೆಲಸವು ಪ್ರತಿ ದಿನ ಬೆಳಿಗ್ಗೆ ಪಾದಯಾತ್ರೆ ಪ್ರಾರಂಭಗೊಂಡ ನಂತರ ಲಿನಿನ್ ಮತ್ತು ಹಾಸಿಗೆಯನ್ನು ಬದಲಾಯಿಸುವುದು. ಕಾಂಗ್ರೆಸ್ ನಾಯಕರು ಸಾಮಾನ್ಯ ಪ್ರದೇಶದಲ್ಲಿ ಊಟ ಮಾಡುತ್ತಾರೆ. ಶಿಬಿರದಲ್ಲಿ ಮದ್ಯ ಮತ್ತು ತಂಬಾಕು ಸೇವನೆ ಮಾಡದಂತೆ ಸೂಚನೆ ನೀಡಲಾಗಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಕಂಟೈನರ್ ಒಳಗೆ ಊಟ ಮಾಡದಂತೆಯೂ ತಿಳಿಸಲಾಗಿದೆ.

ಭಾರತ್ ಜೋಡೋ ಯಾತ್ರೆಯನ್ನು ಕವರ್ ಮಾಡುತ್ತಿರುವ ಇಂಡಿಯಾ ಟುಡೇ ವರದಿಗಾರರಾದ ಮೌಸಮಿ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷವು ಪ್ರಚಾರಕ್ಕಾಗಿ ಬಳಸಿದ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿದ್ದು ವೈರಲ್ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಕಂಡುಬರುವ ಯಾವುದೇ ಕಾರವಾನ್ ಅಭಿಯಾನದ ಭಾಗವಾಗಿಲ್ಲ ಎಂದು ಖಚಿತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಲ್ಲಿ ವೈರಲ್ ಆಗಿರುವಂತೆ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬಳಸಲಾಗುತ್ತಿರು ಐಷಾರಾಮಿ ಕಾರಾವಾನ್ ಎಂದು ತಪ್ಪಾಗಿ ಹಂಚಿಕೋಳ್ಳಲಾಗಿದ್ದು, ವಾಸ್ತವವಾಗಿ ಭಾರತ್ ಜೋಡೋ ಯಾತ್ರೆಗೆ ಕಾರಾವಾನ್‌ ಬಳಸಲಾಗಿಲ್ಲ, ಬದಲಿಗೆ ಮುಂಬೈನಿಂದ ಬಾಡಿಗೆಗೆ ತಂದಿರುವ ಕಂಟೈನರ್‌ಗಳನ್ನು ಬಳಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಈ ಮೇಘ ಸ್ಪೋಟ ಬೆಂಗಳೂರಿನಲ್ಲಿ ಸಂಭವಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights