ಫ್ಯಾಕ್ಟ್‌ಚೆಕ್: ಯುವತಿಯೊಬ್ಬಳು ಮೆಟ್ರೋ ಸ್ಟೇಷನ್‌ನಲ್ಲಿ ಮೊಬೈಲ್ ಕದ್ದು ಓಡಿದ್ದು ನಿಜವೆ?

ಮೆಟ್ರೊ ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳು ಮೊಬೈಲ್ ಕದ್ದು ಓಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ರೈಲು ಹೊರಡುವ ಕೆಲವೇ ಸೆಕೆಂಡುಗಳ ಮೊದಲು ಮಹಿಳೆಯೊಬ್ಬರು ಮೆಟ್ರೋದಲ್ಲಿ ಬಾಗಿಲಿನ ಮುಂದೆ ನಿಂತಿದ್ದ ವ್ಯಕ್ತಿಯ ಮೊಬೈಲ್ ಅನ್ನು ಕಸಿದುಕೊಂಡು ಏನು ಆಗಿಯೇ ಇಲ್ಲವೆಂಬಂತೆ ಹೋಗುತ್ತಾಳೆ, ನಂತರ ರೈಲಿನ ಬಾಗಿಲುಗಳು ಮುಚ್ಚಿಕೊಳ್ಳುತ್ತವೆ, ಮೊಬೈಲ್ ಕಳೆದುಕೊಂಡ ಹುಡುಗ ನಿಸ್ಸಹಾಯಕನಾಗಿ ನೋಡುತ್ತಿರುತ್ತಾನೆ. ಈ ವಿಡಿಯೋನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಮೆಟ್ರೋದಲ್ಲಿ ಪ್ರಯಾಣಿಸುವಾಗ ಇಂತಹ ಹುಡುಗಿಯರ ಬಗ್ಗೆ ಎಚ್ಚರದಿಂದಿರಿ ಎಂದು ಗಾಜಿಯಾಬಾದ್  BJPಯ (IT ಸೆಲ್‌ನ) ಸಾಮಾಜಿಕ ಮಾಧ್ಯಮ ಮುಖ್ಯಸ್ಥ, ಆನಂದ್ ಕಲ್ರಾ ತಮ್ಮ ಟ್ವಿಟರ್ ನಿಂದ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಅನೇಕರು ತಮ್ಮ ಟ್ವಿಟರ್ ಖಾತೆಗಳ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ  ವಿಡಿಯೋವನ್ನು ಮೊದಲೇ ಏಕೆ ರೆಕಾರ್ಡ್ ಮಾಡಲಾಗುತ್ತಿದೆ, ಮೊಬೈಲ್ ಕಳ್ಳತನದ ಬಗ್ಗೆ ಇವರಿಗೆ ಮೊದಲೇ ತಿಳಿದಿತ್ತೆ ಎನ್ನುವ ಕಮೆಂಟ್‌ಗಳನ್ನು ಕೆಲವರು ಮಾಡಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್-ಚೆಕ್ ತಂಡವು ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿ ಅದು ಸುಳ್ಳು ಎಂದು ಕಂಡುಹಿಡಿದಿದೆ. ಮೆಟ್ರೊ ನಿಲ್ದಾಣಲ್ಲಿ ಮಹಿಳೆಯೊಬ್ಬರು ಪುರುಷನ ಮೊಬೈಲ್ ಫೋನ್ ಅನ್ನು ಕದಿಯುತ್ತಿರುವುದನ್ನು ತೋರಿಸುವ ವಿಡಿಯೋ ಸ್ಕ್ರಿಪ್ಟೆಡ್‌ (ನಾಟಕೀಯ) ಆಗಿದ್ದು, ಇದನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.

ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, 0:16 ಸೆಕೆಂಡುಗಳ ಟೈಮ್‌ಸ್ಟ್ಯಾಂಪ್‌ನಲ್ಲಿ  ಡಿಸ್‌ಕ್ಲೈಮರ್ ಬರುವುದನ್ನು ಕಾಣಬಹುದು. ಇದರ ಪ್ರಕಾರ ಈ ವಿಡಿಯೋದಲ್ಲಿ ತೋರಿಸಲಾಗಿರುವ ಪಾತ್ರಗಳು ಕಾಲ್ಪನಿಕವಾಗಿದೆ ಮತ್ತು ವೀಡಿಯೊವನ್ನು ಮನರಂಜನೆಗಾಗಿ ಮಾಡಲಾಗಿದೆ ಎಂದು ಹೇಳುತ್ತದೆ. ವೀಡಿಯೊದಲ್ಲಿ ಕಂಡುಬರುವ ಪಾತ್ರಗಳು ಮತ್ತು ಘಟನೆಯು ಕೇವಲ ಮನರಂಜನೆಗಾಗಿ ಮಾತ್ರ ಎಂದು ಉಲ್ಲೇಖಿಸಲಾಗಿದೆ.

 

ಕರಣ್ ಮುಂಡಾ ಪಂಜಾಬಿ ವಿಯೋಗ್ ಚಾನೆಲ್ ಅನ್ನು ನಡೆಸುತ್ತಿರುವ ಕರಣ್ ಸುಖದೇವ್ ಅವರನ್ನು ದಿ ಲಾಜಿಕಲ್ ಇಂಡಿಯಾ ದ ಫ್ಯಾಕ್ಟ್‌ಚೆಕ್ ತಂಡವು ಸಂಪರ್ಕಿಸಿ ವೈರಲ್ ವಿಡಿಯೋದ ಬಗ್ಗೆ ವಿಚಾರಿಸಿದಾಗ, ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಶೈಕ್ಷಣಿಕ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಮಾಡಲಾಗಿದೆ. ಇದನ್ನು 52 ನೋಯ್ಡಾ ಮೆಟ್ರೋ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ವಿಡಿಯೋ ನಾಟಕೀಯ ವೀಡಿಯೋ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೆಟ್ರೋ ರೈಲು ನಿಲ್ದಾಣದಲ್ಲಿ ಯುವತಿಯೊಬ್ಬಳು ಮೊಬೈಲ್ ಕದ್ದು ಓಡುತ್ತಿರುವ ಘಟನೆ ನಿಜವಾದ ಘಟನೆಯಲ್ಲ, ಆದರೆ BJPಯ ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಇದನ್ನು ನೈಜ ಘಟನೆ ಎಂಬಂತೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಚೀತಾಗಳನ್ನು ಕರೆತಂದ ವಿಮಾನದಲ್ಲಿದುದ್ದು ಚೀತಾದ ಚಿತ್ರವಲ್ಲ, ವಿಮಾನ ಭಾರತದ್ದು ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights