ಫ್ಯಾಕ್ಟ್‌ಚೆಕ್ : ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ್ದು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಅಲ್ಲ

ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿನಿಯೊಬ್ಬಳನ್ನು  ತಬ್ಬಿಕೊಂಡಿರುವ ಫೋಟೊ ವೈರಲ್ ಆಗಿದ್ದು, ರಾಹುಲ್ ಜತೆ ಇರುವುದು 2020 ಫೆಬ್ರುವರಿಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿ ಬಂಧಿತರಾಗಿದ್ದ ಬೆಂಗಳೂರಿನ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ನೊರೊನ್ಹಾ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತೆ ಪ್ರೀತಿ ಗಾಂಧಿ ಇದೇ ರೀತಿಯಲ್ಲಿ ಟ್ವೀಟ್ ಮಾಡಿದ್ದು, ಭಾರತ್ ಜೋಡೋ ಯಾತ್ರೆಯು ಭಾರತವನ್ನು ಒಗ್ಗೂಡಿಸುವ ಮೆರವಣಿಗೆಯಲ್ಲ, ಬದಲಿಗೆ ಭಾರತವನ್ನು ವಿಭಜಿಸುವ ಪ್ರತಿಬಿಂಬ ಎಂದು ಹೇಳಿದ್ದಾರೆ. ಬಳಿಕ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಬಿಜೆಪಿಯ ದೆಹಲಿ ಐಟಿ ಸೆಲ್ ಮುಖ್ಯಸ್ಥ ಪುನೀತ್ ಅಗರ್ವಾಲ್ ಅವರು ರಾಹುಲ್ ಗಾಂಧಿ ಹುಡುಗಿಯೊಂದಿಗೆ ಇರುವ ಚಿತ್ರವನ್ನು ಟ್ವೀಟ್ ಮಾಡಿದ್ದು, ತಮ್ಮ ಪಕ್ಷದ ಇತರ ಸದಸ್ಯರ ಹೇಳಿಕೆಯನ್ನೆ ಪುನರುಚ್ಚರಿಸಿದ್ದಾರೆ.

ನಮ್ಮ ಏನ್‌ ಸುದ್ದಿ.ಕಾಂ ನ ವಾಟ್ಸಾಪ್‌ ಗೆ ಹಲವು ಸಂದೇಶಗಳು ಬಂದಿದ್ದು ಈ ವಿಡಿಯೋ ವಮ್ಮು ಫೋಟೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಸಿ ಸಂದೇಶಗಳು ಬಂದಿದ್ದವು. ಹಾಗಾಗಿ BJP ನಾಯಕರು ಮತ್ತು ಸಾಮಾಜಿಕ ಮಾಧ್ಯಮದ ಬಳಕೆದಾರರು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಭಾರತ್ ಜೋಡೋ ಯಾತ್ರೆಯ ಹ್ಯಾಶ್‌ಟ್ಯಾಗ್ ಬಳಸಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 21, 2022 ರಂದು ಸಾಮಾಜಿಕ ಮಾಧ್ಯದಲ್ಲಿ  ಮಾಡಿದ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರ ಅದೇ ಪೋಟೋವೊಂದು ಲಭ್ಯವಾಗಿದೆ. ಟ್ವಿಟರ್ ಬಳಕೆದಾರರು ಅಭಿನಂದನಾ ಸಂದೇಶದಲ್ಲಿ, ರಾಹುಲ್ ಗಾಂಧಿಯೊಂದಿಗೆ ಕಾಣಿಸಿಕೊಂಡ ಯುವತಿಯ ಹೆಸರನ್ನು ಮಿವಾ ಆಂಡ್ರೆಲಿಯೊ ಎಂದು ಉಲ್ಲೇಖಿಸಿದ್ದಾರೆ.

ಸ್ವತಃ ಮಿವಾ ಆಂಡ್ರೆಲಿಯೊ ಅವರೇ ರಾಹುಲ್ ಗಾಂಧಿಯೊಂದಿಗಿರುವ ವೈರಲ್ ಫೋಟೋವನ್ನು Instagram ಹ್ಯಾಂಡಲ್‌ನಲ್ಲಿ  ಸೆಪ್ಟೆಂಬರ್ 21, 2022 ರಂದು ಹಂಚಿಕೊಂಡಿದ್ದು, ಅದನ್ನು ಇಲ್ಲಿ ನೋಡಹುದು.

“H A P P I E S T ‼️M O M E N T ‼️ I N MA L I F E ‼️…. Ma own Ragaಎಂಬ ಶೀರ್ಷಿಕೆಯೊಂದಿಗೆ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಗಾಂಧಿಯನ್ನು ಭೇಟಿಯಾದ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದಾರೆ.

ಇಷ್ಟೆ ಅಲ್ಲದೆ ಯೂತ್ ಕಾಂಗ್ರೆಸ್‌ ಕಾರ್ಯಕರ್ತ ಮೊಯಿದಿನ್ ಕುರೇಶಿ ಅವರು ಕೂಡಾ ರಾಹುಲ್ ಗಾಂಧಿ ಅವರು ‘ಮಿವಾ ಆಂಡ್ರೆಲಿಯೊ’ ಅವರೊಂದಿಗೆ ನಡೆಯುವ ವಿಡಿಯೊವನ್ನು ಅವರಿಗೆ ಟ್ಯಾಗ್ ಮಾಡಿ ಇನ್ಸ್‌ಟಾಗ್ರಾಮ್‌‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 

View this post on Instagram

 

A post shared by Moideen Qurayshy (@moidheen.qurayshy)

ಅಲ್ಲದೆ ಅವರ ಚಿತ್ರವನ್ನು ‘ಭಾರತ್ ಜೋಡೋ’ ಅಧೀಕೃತ ಟ್ವಿಟರ್‌ ಹ್ಯಾಂಡಲ್‌ ಕೂಡಾ ಒಂದು ದಿನದ ಹಿಂದೆ ಪೋಸ್ಟ್‌ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯೊಂದಿಗೆ ಹೆಜ್ಜೆ ಹಾಕುತ್ತಿರುವ ಯುವತಿ ಸಿಎಎ ವಿರೋಧಿ ಹೋರಾಟಗಾರ್ತಿ ಅಮೂಲ್ಯ ಲಿಯೋನ್‌‌ ಅಲ್ಲ, ಆಕೆ ಕೇರಳದ ವಿದ್ಯಾರ್ಥಿ ಸಂಘಟನೆಯಾದ ಕೆಎಸ್‌ಯು ನಾಯಕಿಯಾದ ‘ಮಿವಾ ಆಂಡ್ರೆಲಿಯೊ’. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಪತ್ನಿಗೆ ವಂಚಿಸಿ, ಗೆಳತಿಯೊಂದಿಗೆ ಸಿಕ್ಕಿ ಬಿದ್ದ ವ್ಯಕ್ತಿ ಆಗ್ರಾದ AAP ಜಿಲ್ಲಾಧ್ಯಕ್ಷನಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights