ಫ್ಯಾಕ್ಟ್‌ಚೆಕ್: ಮೋದಿಯವರ ಫೋಟೊ ತೆಗೆಯುವ ವೇಳೆ ಫೋಟೊಗ್ರಾಫರ್ ನೆಲದ ಮೇಲೆ ಮಲಗಿರುವಂತೆ ಎಡಿಟ್ ಮಾಡಲಾಗಿದೆ

ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಸೆರೆಹಿಡಿಯುವ ಛಾಯಾಗ್ರಾಹಕರೊಬ್ಬರು ನೆಲದ ಮೇಲೆ ಮಲಗಿ ಫೋಟೋವನ್ನು ಸೆರೆಹಿಡಿಯುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

 

ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಸೆರೆಹಿಡಿಯುವಾಗ ನೆಲದ ಮೇಲೆ ಮಲಗಿರುವ ಫೋಟೋಗ್ರಾಫರ್ ಚಿತ್ರ ಎಂದು ಹಂಚಿಕೊಳ್ಳಲಾಗುತ್ತಿರುವ ಈ ಚಿತ್ರದ ಹಿಂದಿನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಗೂಗಲ್  ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 02 ಅಕ್ಟೋಬರ್ 2021 ರಂದು ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡ ಮೂಲ ಚಿತ್ರಕ್ಕೆ ಲಭ್ಯವಾಗಿದ್ದು. ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮೋದಿ ದೆಹಲಿಯ ಗಾಂಧಿ ಸ್ಮೃತಿಗೆ ಭೇಟಿ ನೀಡಿದಾಗ ಈ ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ.

ಈ ಘಟನೆಯ ಕುರಿತು ANI ಸುದ್ದಿ, ದಿ ಸಿಯಾಸತ್ ಡೈಲಿ ಪ್ರಕಟಿಸಿದ ಫೋಟೋಗಳಲ್ಲೂ ಸಹ ಯಾವುದೇ ಛಾಯಾಗ್ರಾಹಕ ನೆಲದ ಮೇಲೆ ಮಲಗಿರುವುದನ್ನು ತೋರಿಸಿಲ್ಲ. PM ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಈ ಕಾರ್ಯಕ್ರಮದ ಲೈವ್ ಸ್ಟ್ರೀಮ್ ವೀಡಿಯೊ ಕೂಡ ಅದನ್ನು ಖಚಿತಪಡಿಸುತ್ತದೆ.

ಛಾಯಾಗ್ರಾಹಕನ ಚಿತ್ರವನ್ನು ಕ್ರಾಪ್ ಮಾಡುವ ಮೂಲಕ ರಿವರ್ಸ್ ಇಮೇಜ್ ಪ್ರತ್ಯೇಕವಾಗಿ ಸರ್ಚ್ ಮಾಡಿದಾಗ,  ಇದೇ ಫೋಟೋವನ್ನು ಸ್ಟಾಕ್ ಫೋಟೋಗ್ರಫಿ ವೆಬ್‌ಸೈಟ್ ಅಲಾಮಿಯಲ್ಲಿ “ವಿಭಿನ್ನ ದೃಷ್ಟಿಕೋನದಿಂದ ದೊಡ್ಡ ಕಟ್ಟಡವನ್ನು ಛಾಯಾಚಿತ್ರ ಮಾಡುವಾಗ ಛಾಯಾಗ್ರಾಹಕ ನೆಲದ ಮೇಲೆ ಮಲಗಿದ್ದಾನೆ” ಎಂಬ ಶೀರ್ಷಿಕೆಯೊಂದಿಗೆ ಕಂಡುಬಂದಿದೆ. ಈ ಫೋಟೋವನ್ನು 15 ಮಾರ್ಚ್ 2017 ರಂದು ತೆಗೆದುಕೊಳ್ಳಲಾಗಿದೆ ಎಂದು ವಿವರಣೆ ಹೇಳಲಾಗಿದೆ. ಮಾರ್ಫ್ ಮಾಡಿದ ಚಿತ್ರವನ್ನು ರಚಿಸಲು ಈ ಸ್ಟಾಕ್ ಚಿತ್ರವನ್ನು ಮೋದಿಯವರ ಫೋಟೋಗೆ ಸೇರಿಸಲಾಗುತ್ತದೆ

ಒಟ್ಟಾರೆಯಾಗಿ ಹೇಳುವುದಾದರೆ, ಈ ಫೋಟೋವನ್ನು 02 ಅಕ್ಟೋಬರ್ 2021 ರಂದು ಪ್ರಧಾನಿ ಮೋದಿಯವರು ಗಾಂಧಿ ಸ್ಮೃತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ. ಮೋದಿ ಅವರ ಟ್ವಿಟರ್ ಖಾತೆ ಮತ್ತು ಇತರ ಸುದ್ದಿ ಸಂಸ್ಥೆಗಳಲ್ಲಿ ಹಂಚಿಕೊಂಡಿರುವ ಮೂಲ ಚಿತ್ರವು ಯಾವುದೇ ಛಾಯಾಗ್ರಾಹಕ ನೆಲದ ಮೇಲೆ ಮಲಗಿರುವುದನ್ನು ತೋರಿಸುವುದಿಲ್ಲ. ನೆಲದ ಮೇಲೆ ಮಲಗಿರುವ ಛಾಯಾಗ್ರಾಹಕನ ಚಿತ್ರವನ್ನು 2017 ರಲ್ಲಿ ಸ್ಟಾಕ್ ಫೋಟೋಗ್ರಫಿ ವೆಬ್‌ಸೈಟ್ ಅಲಮಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಸೆರೆಹಿಡಿಯಲು ಛಾಯಾಗ್ರಾಹಕ ನೆಲದ ಮೇಲೆ ಮಲಗಿರುವಂತೆ ಮಾರ್ಫ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಗಾಂಧಿಯ ಈ ಫೋಟೋಗಳ ಬಗ್ಗೆ ನಿಮಗೆಷ್ಟು ಗೊತ್ತು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights