ಫ್ಯಾಕ್ಟ್‌ಚೆಕ್: ಬ್ಯಾನ್ ಆಗಿರುವ PFI ಕಚೇರಿಯಲ್ಲಿ 2000 ಕೋಟಿ ಹಣವನ್ನು NIA ವಶಪಡಿಸಿಕೊಂಡಿದ್ದು ನಿಜವೇ?

ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪದಡಿ ದೇಶದಾದ್ಯಂತ 11 ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು 100ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದುಕೊಂಡಿದ್ದರು.

ನಂತರ ನಡೆದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ UAPA ಅಡಿಯಲ್ಲಿ PFI ಸಂಘಟನೆಯನ್ನು 5ವರ್ಷಗಳ ಕಾಲ ದೇಶಾದ್ಯಂತ ಬ್ಯಾನ್ ಮಾಡಿದೆ. ಈ ಎಲ್ಲಾ ಬೆಳವಣಿಗೆಗಗಳ ಬೆನ್ನಲ್ಲೆ, ಕೇರಳದ PFI ಕಚೇರಿಯ ಮೇಲೆ ದಾಳಿ ನಡೆಸಿರುವ NIA 2000 ಕೋಟಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ 500ರೂ ಮತ್ತು 2000ರೂಗಳ ಕಂತೆ ಕಂತೆ ನೊಟುಗಳನ್ನು ಯಂತ್ರಗಳ ಮೂಲಕ ಎಣಿಸುತ್ತಿರುವ ಅಧಿಕಾರಿಗಳನ್ನು ವಿಡಿಯೋದಲ್ಲಿ ನೋಡಬಹುದು. ಹಾಗಿದ್ದರೆ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಕೇರಳಾದ PFI ಕಚೇರಿಯ ಮೇಲೆ ದಾಳಿ ನಡೆಸಿರುವ N IA 2000 ಕೋಟಿ ಮೊತ್ತವನ್ನು ವಶಪಡಿಸಿಕೊಂಡಿದೆ ಎಂಬ ಸುದ್ದಿಯ ಸತ್ಯಾಸತ್ಯೆತೆಗಳನ್ನು ಪರಿಶೀಲಿಸಲು ದಾಳಿಯ ಬಗ್ಗೆ ನಿಖರ ಮಾಹಿತಿಗಾಗಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 10, 2022 ರಂದು ಇಂಡಿಯಾ ಟುಡೇ ಟ್ವಿಟರ್ ಪೋಸ್ಟ್ ಮಾಡಿದ ವಿಡಿಯೋ ಲಭ್ಯವಾಗಿದೆ.

ಈ ಟ್ವೀಟ್‌ನ ಪ್ರಕಾರ, ವೈರಲ್ ವೀಡಿಯೊದಲ್ಲಿ ED ಯವರು ಕೋಲ್ಕತ್ತಾದ ಅಮೀರ್ ಖಾನ್ ಎಂಬ ಗೇಮಿಂಗ್ ಅಪ್ಲಿಕೇಶನ್ ಆಪರೇಟರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದ್ದು ಎಂದು ವಾರದಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತಷ್ಟು ಹುಡುಕಾಟ ನಡೆಸಿದಾಗ NDTV ಮತ್ತು CNN News18 ನಂತಹ ಔಟ್‌ಲೆಟ್‌ಗಳಿಂದ ವರದಿಯಾದ ಸುದ್ದಿಗಳು ಲಭ್ಯವಾಗಿದೆ.

ಈ ವರದಿಗಳ ಪ್ರಕಾರ ಸೆಪ್ಟೆಂಬರ್ 10 ರಂದು ಕೋಲ್ಕತ್ತಾದ ಗಾರ್ಡನ್ ರೀಚ್‌ನಲ್ಲಿರುವ ಉದ್ಯಮಿ ಅಮೀರ್ ಖಾನ್ ಎಂಬುವವರ ಮನೆಯ ಮೇಲೆ ದಳಿ ನಡೆಸಿದ NIA 17 ಕೋಟಿ ರೂ. ಅಕ್ರಮ ಹಣ ವಶಪಡಿಸಿಕೊಂಡಿದೆ. ಇಡಿ ಸಂಸ್ಥೆಯ ಹೇಳಿಕೆಯ ಪ್ರಕಾರ, ವಶಪಡಿಸಿಕೊಂಡ ಹಣವು ಖಾನ್ ಅವರು ಇ-ನಗ್ಗಟ್‌ಗಳ ಬಳಕೆದಾರರನ್ನು ವಂಚಿಸಿ ಅಕ್ರಮವಾಗಿ ಹಣವನ್ನು ಸಂಪಾದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ವಿಡಿಯೋವನ್ನು ಬಳಸಿಕೊಂಡು ಸೂರತ್‌ನ ಉದ್ಯಮಿಯೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾದ ಹಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿತ್ತು. ಫ್ಯಾಕ್ಟ್‌ಲಿ ವರದಿ

ಈಗ ಇದೇ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದ ಬಳಕೆದಾರರು ಬ್ಯಾನ್‌ ಆಗಿರುವ PFIನ ಕೇರಳದ ಕಚೇರಿಯಲ್ಲಿ 2 ಸಾವಿರ ಕೋಟಿ ಅಕ್ರಮ ಹಣ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗಿದೆ. ವಾಸ್ತವಾಗಿ ಈ ದಾಳಿ ನಡೆದಿರುವುದು ಪಶ್ಚಿಮ ಬಂಗಾಳದ ಅಮೀರ್ ಎಂಬ ಮೊಬೈಲ್ ಗೇಮಿಂಗ್ ನಲ್ಲಿ ಜನರಿಗೆ ವಂಚಿನಿ ಸಂಪಾದಿಸಿದ ಹಣ ಎಂದು ಕೇಂದ್ರ ತನಿಖಾ ಸಂಸ್ಥೆ ಟ್ವೀಟ್ ಮಾಡಿದೆ.

ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ತನಿಖೆಗೆ ಸಂಬಂಧಿಸಿದಂತೆ EDಯು PMLA, 2002 (10.09.2022 ರಂದು) ಕೋಲ್ಕತ್ತಾದ 06 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ. 17.32 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ, ಪಶ್ಚಿಮ ಬಂಗಾಳದ, ಅಮೀರ್ ಎಂಬುವವರ ಮನೆ ಮತ್ತು ಇತರೆ 6 ಸ್ಥಳಗಳಲ್ಲಿ ದಾಳಿ ನಡೆಸಿ 17 ಕೋಟಿ ನಗದನ್ನು ವಶಪಡಿಸಿಕೊಂಡ ಘಟನೆಯ ವಿಡಿಯೋವನ್ನು ಬಳಸಿಕೊಂಡು ಕೇರಳದ PFI ಕಚೇರಿಯ ಮೇಲೆ ದಾಳಿ ನಡೆಸಿ 2ಸಾವಿರ ಕೋಟಿ ವಶಪಡಿಸಿಕೊಂಡಿದೆ ಎಂದು ಸುಳ್ಳನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದಸರಾ ಆಚರಣೆಯಲ್ಲಿ ಕೇಜ್ರಿವಾಲ್ ಬಿಲ್ಲನ್ನು ಉಲ್ಟಾ ಹಿಡಿದು ಪೋಸ್ ನೀಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights