ಫ್ಯಾಕ್ಟ್‌ಚೆಕ್: ಅಮೀರ್ ಖಾನ್‍ನಿಂದ ವಿಚ್ಛೇದನ ಪಡೆದ ನಂತರ ಮಾಜಿ ಪತ್ನಿ ಕಿರಣ್ ರಾವ್ ಒಬ್ಬಂಟಿಯಾದರೆ?

ಬಾಲಿವುಡ್ ನಿರ್ಮಾಪಕ ಮತ್ತು ನಟ ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ಅಮೀರ್ ಖಾನ್ ಅವರಿಂದ ವಿಚ್ಛೇದನ ಪಡೆದು ದೂರವಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಇತ್ತೀಚಿನ ಫೋಟೋ ಎಂದು ಹೇಳಿಕೊಂಡು ಪೋಸ್ಟ್‌ ಮಾಡಲಾಗಿದೆ. ಬೀದಿಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಫೋಟೋವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 22 ಸೆಪ್ಟೆಂಬರ್ 2019 ರಂದು ಬಾಲಿವುಡ್ ತಡ್ಕಾ ಅವರ ಲೇಖನದಲ್ಲಿ ಅದೇ ಫೋಟೋ ಕಾಣಿಸಿಕೊಂಡಿರುವುದು ಕಂಡುಬಂದಿದೆ. ಲೇಖನದ ಶೀರ್ಷಿಕೆ ಹೀಗಿದೆ, “ಅಮೀರ್ ಖಾನ್ ಅವರ ಪತ್ನಿ ಕುರ್ತಾವನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅದು ಮೇಕ್ಅಪ್ ಇಲ್ಲದೆ ಅವರನ್ನು ಗುರುತಿಸುವುದು ಕಷ್ಟಕರವಾಗಿತ್ತು.”

ಆ ಸಮಯದಲ್ಲಿ ಕಿರಣ್ ರಾವ್ ಅವರ ಇತರ ಚಿತ್ರಗಳನ್ನು ಸಹ ಈ ಲೇಖನದಲ್ಲಿ ನೋಡಬಹುದು. ವರದಿಯ ಪ್ರಕಾರ, ಈ ಫೋಟೋಗಳನ್ನು ಅವರು ಮುಂಬೈನ ಬಾಂದ್ರಾದ ಬೀದಿಗಳಲ್ಲಿ ವಾಕಿಂಗ್ ಮಾಡುವಾಗ ಸೆರೆಹಿಡಿಯಲಾಗಿದೆ. ಅದೇ ಲೇಖನವನ್ನು ಪಂಜಾಬ್ ಕೇಸರಿ ಅವರು 22 ಸೆಪ್ಟೆಂಬರ್ 2019 ರಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಆದರೂ, ಅಮೀರ್ ಖಾನ್ ಮತ್ತು ಕಿರಣ್ ರಾವ್ ಜುಲೈ 2021 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಕಿರಣ್ ರಾವ್ ಅವರು ವಿಚ್ಛೇದನದ ಘೋಷಣೆಗೂ ಮೊದಲೇ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ವೈರಲ್ ಫೋಟೋವನ್ನು ಸೆರೆಹಿಡಿಯಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಿರಣ್ ರಾವ್ ಬಾಂದ್ರಾದಲ್ಲಿಗಿ ಒಬ್ಬರೆ ನಡೆದುಕೊಂಡು ಹೋಗುತ್ತಿರುವ ಹಳೆಯ ಚಿತ್ರವನ್ನು ಅಮೀರ್ ಖಾನ್‌ನಿಂದ ವಿಚ್ಛೇದನದ ಪಡೆದ ನಂತರ ಸೆರೆಹಿಡಿದಿರುವ ಇತ್ತೀಚಿನ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತೆಲಂಗಾಣದಲ್ಲಿ ಕೋಳಿ ಮತ್ತು ಮದ್ಯ ಹಂಚಿದ್ದು BJP ನಾಯಕರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights