ಫ್ಯಾಕ್ಟ್‌ಚೆಕ್: ಟಿ-20 ವಿಶ್ವಕಪ್ ಪಂದ್ಯದಲ್ಲಿ ನೋಬಾಲ್ ನೀಡಿದ ಅಂಪೈರ್ ವಿರುದ್ಧ ಪಾಕ್ ನಾಯಕ ಅಜಂ ಕೋಪಗೊಂಡಿದ್ದಾರೆಯೇ?
ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ ವಿರಾಟ್ ಕೋಹ್ಲಿ ಭಾರತ 4 ವಿಕೆಟ್‌ಗಳ ರೋಚಕ ಜಯ ಗಳಿಸಲು ನೆರವಾದರು.
ಭಾರತಕ್ಕೆ ಮೂರು ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದ ಸಮಯದಲ್ಲಿ, ಪಾಕಿಸ್ತಾನದ ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್ ಕೊಹ್ಲಿಗೆ ಫುಲ್ ಟಾಸ್ ನೀಡಿದರು, ಆ ಬಾಲನ್ನು ಕೊಹ್ಲಿ ಲೈನ್ ಮತ್ತು ಡೀಪ್ ಸ್ಕ್ವೇರ್ ನಡುವೆ ಸಿಕ್ಸರ್ ಬಾರಿಸಿದರು. ಅದು ಹೈ ಪುಲ್ ಟಾಸ್ ಇದ್ದ ಕಾರಣ ಅಂಪೈರ್ ನೋಬಾಲ್ ಎಂದು ಘೋಷಿಸಿದರು. ಮುಂದಿನ ಎಸೆತ ಭಾರತಕ್ಕೆ ಫ್ರೀ ಹಿಟ್ ಪಡೆಯಲು ಸಹಾಯವಾಯಿತು. ಇದೇ ನೋ ಬಾಲ್ ಭಾರತದ ಗೆಲುವಿಗೆ ಕಾರಣವೂ ಆಯಿತು.
ಈ ಪಂದ್ಯವ ನೋ ಬಾಲ್ ಉಲ್ಲೇಖಿಸಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರು ಅಂಪೈರ್‌ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಅಂಪೈರ್ ನೀಡಿದ ತೀರ್ಪು ಭಾರತದ ಪರವಾಗಿ ಏಕಮುಖವಾಗಿತ್ತು ಎಂದು ಪಾಕಿಸ್ತಾನದ ನಾಯಕ ಅಂಪೈರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
“ಕೊಹ್ಲಿ ಸಿಕ್ಸರ್‌ಗೆ ಹೊಡೆದ ಚೆಂಡು ನೋ-ಬಾಲ್ ಅಲ್ಲ” ಎಂದು ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಹೇಳಿದ್ದಾರೆ ಎಂದು “ಬೆಸ್ಟ್ ಹಿಂದಿ ನ್ಯೂಸ್” ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಬಾಬರ್ ಅಜಮ್ ಅವರ ಫೋಟೋ ಜೊತೆ ಹಂಚಿಕೊಂಡಿದೆ. ಹಾಗಿದ್ದರೆ ಈ ರೀತಿ ಹೇಳಿಕೆಯನ್ನು ಬಾಬರ್ ಅಜಂ ನೀಡಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಪಾಕಿಸ್ತಾನದ ನಾಯಕ ಅಜಂ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆಯೇ ಎಂದು ಪರಿಶೀಲಿಸಲು ಮುಂದಾದಾಗ, ಪಾಕಿಸ್ತಾನದ ಕ್ರಿಕೆಟಿಗರಾದ ವಾಸಿಂ ಅಕ್ರಮ್, ವಕಾರ್ ಯೂನಿಸ್ ಮತ್ತು ಶೋಯೆಬ್ ಮಲಿಕ್ ಅವರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ವರದಿಯೊಂದು ಲಭ್ಯವಾಗಿದೆ.
ವರದಿಯ ಪ್ರಕಾರ ಅವರು ಇಂತಹ ನಿರ್ಣಾಯಕ ಕ್ಷಣದಲ್ಲಿ ಎಸೆತವನ್ನು ನೋ ಬಾಲ್ ಎಂದು ಕರೆಯುವ ಮೊದಲು ಆನ್-ಫೀಲ್ಡ್ ಅಂಪೈರ್‌ಗಳು ಮೂರನೇ ಅಂಪೈರ್‌ನೊಂದಿಗೆ ಏಕೆ ಸಮಾಲೋಚಿಸಲಿಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರರು ಪ್ರಶ್ನಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಬಾಬರ್ ಅಜಂ ಅಂತಹ ಆರೋಪಗಳನ್ನು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಮತ್ತು ಯಾವ ವರದಿಗಳಿಲ್ಲ.
https://twitter.com/Khan93368522/status/1584153101224665088?ref_src=twsrc%5Etfw%7Ctwcamp%5Etweetembed%7Ctwterm%5E1584153101224665088%7Ctwgr%5E72738a039d43a246f23ad4ea33fa39540df0a152%7Ctwcon%5Es1_&ref_url=https%3A%2F%2Fnaanugauri.com%2Ft20-world-cup-cricket-these-were-the-last-8-balls-that-brought-an-exciting-victory-to-the-indian-against-pak%2F
ಆದರೆ ಕೊನೆಯ ಓವರ್‌ನಲ್ಲಿ ನಡೆದ ಪಾಕಿಸ್ತಾನದ ತಪ್ಪುಗಳನ್ನು ಬಾಬರ್ ಅಜಂ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ, ಮೊಹಮ್ಮದ್ ನವಾಜ್ ಬದಲಿಗೆ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಅವರಂತಹ ಸ್ಟ್ರೈಕ್ ಬೌಲರ್‌ಗಳು ಕೊನೆಯ ಓವರ್ ಬೌಲ್ ಮಾಡಬೇಕೆಂದು ನೀವು ಭಾವಿಸುತ್ತೀರಾ ಎಂದು ಪಾಕಿಸ್ತಾನದ ನಾಯಕನನ್ನು ಕೇಳಲಾಯಿತು.
ಮೊಹಮ್ಮದ್ ನವಾಜ್ ಅವರು ರನ್ ನಿಯಂತ್ರಿಸಲು ಪ್ರಯತ್ನಿಸಿದ್ದರು. ಆದರೆ ಅದು ಫಲ ನೀಡಲಿಲ್ಲ ಎಂದು ಅಜಂ ಹೇಳಿದ್ದಾರೆ. ತಮ್ಮ ಸ್ಟ್ರೈಕ್ ಬೌಲ್‌ನಿಂದ ವಿಕೆಟ್‌ಗಳನ್ನು ಪಡೆಯಲು ಬಯಸಿದ್ದರು ಎಂದು ಬಾಬರ್ ವಿವರಿಸಿದರು. ಆದರೆ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಭಾರತದ ಪಂದ್ಯದ ಕೊನೆಯ ಓವರ್‌ನಲ್ಲಿ ನಡೆದ ನೋಬಾಲ್ ಬಗ್ಗೆ ತೀರ್ವ ಚರ್ಚೆಯಾಗುತ್ತಿರುವುದು ನಿಜವಾದರೂ, ಇದಕ್ಕೆ ಸಂಬಂಧಿಸಿದಂತೆ ಪಾಕ್ ತಂಡದ ನಾಯಕ ಅಂಪೈರ್‌ಗಳು ಭಾರತ ತಂಡದ ಪರವಾಗಿ ನೋ ಬಾಲ್ ತೀರ್ಪು ನೀಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ಪಕ್ಷದ ಹಸ್ತದ ಚಿನ್ಹೆ ಮುಸ್ಲಿಂ ಧರ್ಮದಿಂದ ಬಂದಿದೆಯೇ?