ಫ್ಯಾಕ್ಟ್‌ಚೆಕ್: ಬಾಲಕ ಕೊಹ್ಲಿಗೆ ಪ್ರಶಸ್ತಿ ನೀಡುತ್ತಿರುವ ವ್ಯಕ್ತಿ ರಿಷಿ ಸುನಕ್ ಅಲ್ಲ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವ ಬಾಲ್ಯದ ಚಿತ್ರವೊಂದು ವೈರಲ್ ಆಗಿದ್ದು,  ಯುನೈಟೆಡ್ ಕಿಂಗ್‌ಡಮ್‌ನ ಹೊಸ ಪ್ರಧಾನಿಯಾಗಿ ನೇಮಕಗೊಂಡಿರುವ ರಿಷಿ ಸುನಕ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

2 ಜನರು ಮತ್ತು ನಿಂತಿರುವ ಜನರು ನ ಚಿತ್ರವಾಗಿರಬಹುದು

2022 ರ ಟಿ 20 ವಿಶ್ವಕಪ್‌ನಲ್ಲಿ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ, ಕೊಹ್ಲಿ ಅಜೇಯ 82 ರನ್‌ಗಳ ಮೂಲಕ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

“ನಿಮಗೆ ತಿಳಿದಿದೆಯೇ? ಪ್ರಸ್ತುತ ಯುಕೆ ಪಿಎಂ ರಿಷಿ ಸುನಕ್ ಒಮ್ಮೆ ವಿರಾಟ್ ಕೊಹ್ಲಿ ಅವರಿಗೆ ಬಾಲ್ಯದಲ್ಲಿ ಪ್ರಶಸ್ತಿಯನ್ನು ನೀಡಿದ್ದರು ಮತ್ತು ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನೂ ನೀಡಿದ್ದರು. ಆದರೆ ಕೊಹ್ಲಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದರು. ಆದರೆ ಈಗ ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಇವರೂ ಒಬ್ಬರು”. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ, ಇಬ್ಬರು ಈಗ ಸಾಧನೆಯ ಶಿಖರವನ್ನೇರಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ ವೈರಲ್ ಫೋಟೊದಲ್ಲಿ ಬಾಲ್ಯದಲ್ಲಿರುವ ವಿರಾಟ್‌ ಕೋಹ್ಲಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವ ವ್ಯಕ್ತಿ ಇಂಗ್ಲೆಂಡ್‌ನಲ್ಲಿ ನೂತವಾಗಿ ನೇಮಕಗೊಂಡ ಪ್ರಧಾನಿ ರಿಷಿ ಸುನಕ್‌ ಅಲ್ಲ. ಪ್ರಶಸ್ತಿ ನೀಡುತ್ತಿರುವ ವ್ಯಕ್ತಿ ಭಾರತದ  ಮಾಜಿ ಕ್ರಿಕೆಟ್‌ ಆಟಗಾರ ಆಶಿಶ್ ನೆಹ್ರ ಎಂಬುದು ಸ್ಪಷ್ಟವಾಗಿದೆ.

ಮತ್ತಷ್ಟು ಸರ್ಚ್ ಮಾಡಿದಾಗ, 2017 ರ NDTV ಯ ವರದಿಯಲ್ಲಿ  ಅದೇ ಚಿತ್ರವನ್ನು ಕಂಡುಕೊಂಡಿದ್ದೇವೆ. ಲೇಖನದ ಪ್ರಕಾರ, ಚಿತ್ರದಲ್ಲಿನ ವ್ಯಕ್ತಿ ಭಾರತೀಯ ಕ್ರಿಕೆಟಿಗ ಆಶಿಶ್ ನೆಹ್ರಾ ಹೊರತು ರಿಷಿ ಸುನಕ್ ಅಲ್ಲ ಎಂದು ಹೇಳಲಾಗಿದೆ. ಚಿತ್ರದ ಶೀರ್ಷಿಕೆಯಲ್ಲಿ ವಿರಾಟ್ ಕೊಹ್ಲಿ 2003 ರಲ್ಲಿ ಆಶಿಶ್ ನೆಹ್ರಾ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆಗ ಕೊಹ್ಲಿ 13ವರ್ಷದ ಹುಡುಗ ಆಗಿದ್ದರು ಎಂದು ಹೇಳಿದ್ದಾರೆ.

Ashish Nehra And Virat Kohli's Old Pic Makes Twitter Nostalgic

 

ಚಿತ್ರದಲ್ಲಿ ಕಾಣುತ್ತಿರುವವರು ಕೊಹ್ಲಿ ಮತ್ತು ನೆಹ್ರಾ ಎಂದು ಸ್ಪಷ್ಟಪಡಿಸಿರುವ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಪೋಸ್ಟ್ ಮಾಡಿದ ಟ್ವೀಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ಚಿತ್ರದಲ್ಲಿ ಆಶಿಶ್ ನೆಹ್ರಾ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್‌ ಕೊಹ್ಲಿ ತಮ್ಮ ಫೇಸ್‌ಬುಕ್ ನಲ್ಲಿ ಇದೇ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ನೋಡಬಹುದು.

ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.

ಅದೇ ಚಿತ್ರವನ್ನು ದಿ ಫ್ರೀ ಪ್ರೆಸ್ ಜರ್ನಲ್, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇಂಡಿಯಾ.ಕಾಮ್‌ನಂತಹ ಹಲವುಮಾಧ್ಯಮ ಸಂಸ್ಥೆಗಳು ಹಂಚಿಕೊಂಡಿವೆ, ಚಿತ್ರದಲ್ಲಿರುವ ವ್ಯಕ್ತಿ ಆಶಿಶ್ ನೆಹ್ರಾ ಎಂದು ಉಲ್ಲೇಖಿಸಲಾಗಿದೆ.

ನೆಹ್ರಾ  ಮಿಂಟ್‌ಗೆ ನೀಡಿದ ಸಂದರ್ಶನವನ್ನೂ ನಾವು ಕಂಡುಕೊಂಡಿದ್ದೇವೆ. 2016 ರ ಸಂದರ್ಶನದಲ್ಲಿ, ನೆಹ್ರಾ ಅವರು 2003 ರ ವಿಶ್ವಕಪ್ ನಂತರ ರಾಜ್ ಕುಮಾರ್ ಶರ್ಮಾ (ವಿರಾಟ್ ಕೊಹ್ಲಿ ಅವರ ಕೋಚ್) ಅವರನ್ನು ಅಕಾಡೆಮಿಗೆ ಆಹ್ವಾನಿಸಿದಾಗ ತೆಗೆದ ಚಿತ್ರ ಎಂದು ಹೇಳಿದರು.

ಹೊಸ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ನಡುವೆ ಭಾರತೀಯ ನೆಟಿಜನ್‌ಗಳು ವಿಚಿತ್ರವಾದ ಹೋಲಿಕೆಯನ್ನು ಕಂಡುಕೊಂಡಿದ್ದಾರೆ. ಕೆಲವು ಟ್ವಿಟ್ಟರ್ ಬಳಕೆದಾರರು ಆಶಿಶ್ ನೆಹ್ರಾ ಅವರನ್ನು ಅಭಿನಂದಿಸುತ್ತಿದ್ದಾರೆ, ಆದರೆ ಕೆಲವರು ಸುನಕ್ ಈಗ ದೇಶವನ್ನು ಮತ್ತು ಕ್ರಿಕೆಟ್ ತಂಡವನ್ನು ನಡೆಸುವ ಕಷ್ಟಕರ ಕೆಲಸವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

https://twitter.com/SubbaRaoTN/status/1584930204606431233?ref_src=twsrc%5Etfw%7Ctwcamp%5Etweetembed%7Ctwterm%5E1584930204606431233%7Ctwgr%5E89dadd4079c8a5934752d899b102a8e802569a65%7Ctwcon%5Es1_&ref_url=https%3A%2F%2Fwww.businesstoday.in%2Flatest%2Ftrends%2Fstory%2Fcongratulations-on-becoming-uk-pm-twitter-wishes-ashish-nehra-as-rishi-sunak-takes-top-job-350787-2022-10-26

https://twitter.com/IsAllReallyWell/status/1585115079762391040?ref_src=twsrc%5Etfw%7Ctwcamp%5Etweetembed%7Ctwterm%5E1585115079762391040%7Ctwgr%5E89dadd4079c8a5934752d899b102a8e802569a65%7Ctwcon%5Es1_&ref_url=https%3A%2F%2Fwww.businesstoday.in%2Flatest%2Ftrends%2Fstory%2Fcongratulations-on-becoming-uk-pm-twitter-wishes-ashish-nehra-as-rishi-sunak-takes-top-job-350787-2022-10-26

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋ, 13 ವರ್ಷದ ವಿರಾಟ್‌ ಕೊಹ್ಲಿಗೆ ಆಶಿಶ್ ನೆಹ್ರಾ ಪ್ರಶಸ್ತಿ ನೀಡುತ್ತಿರುವ ಚಿತ್ರ. ಆದರೆ ಇದನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ರಿಷಿ ಸುನಕ್ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಿಂಗಾಗಿದ್ದಾರಾ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights