ಫ್ಯಾಕ್ಟ್‌ಚೆಕ್ : ನೋಟು ರದ್ದತಿಯಿಂದ ಜನ ನರಳುತ್ತಿದ್ದಾಗ ದೇಶದ ಜನರನ್ನ ವ್ಯಂಗ್ಯ ಮಾಡಿ ಮಾತನಾಡಿದ್ದರೆ ಮೋದಿ ?

2016 ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ  ರೂ. 500 ಮತ್ತು ರೂ 1,000 ಮುಖಬೆಲೆಯ ನೋಟು ರದ್ದತಿ ವಿಚಾರ ಇಡೀ ದೇಶದಲ್ಲಿ ಅಘೋಷಿತ ಕರ್ಫ್ಯೂ ವಿಧಿಸಿದಂತೆ ಭಾಸವಾಗಿತ್ತು.  ನೋಟು ಅಮಾನ್ಯೀಕರಣದ  ನಂತರ ರಾಷ್ಟ್ರವ್ಯಾಪಿ ನಗದು ಕೊರತೆ ಕಂಡು ಬಂದಿತ್ತು, ಬ್ಯಾಂಕ್‌ಗಳು ಮತ್ತು ATMಗಳ ಮುಂದೆ ಮುಗಿಯದ ಸರತಿ ಸಾಲುಗಳಲ್ಲಿ ನಿಂತ ಜನ ಹೈರಾಣಾಗಿದ್ದರು. ನಗದು ಪಡೆಯಲು ಸಾಲಿನಲ್ಲಿ ನಿಂತ ಜನರಲ್ಲಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಉಂಟು.

ನೋಟು ಅಮಾನ್ಯೀಕರಣದ ಆರನೇ ವರ್ಷದ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಮೋದಿಯವರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಜನರ ದುಃಖದಲ್ಲಿ ಪ್ರಧಾನಿ ಮೋದಿ ಖುಷಿ ಪಡುತ್ತಿರುವುದು ಕಂಡೀರಾ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಮಾಡಲಾಗಿದೆ. ವಿಡಿಯೊದಲ್ಲಿ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ನೋಡಬಹುದು. ಮೊದಲು ಮೋದಿ ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ್ದು ತದನಂತರ “ನಿಮ್ಮ ಮನೆಯಲ್ಲಿ ಮದುವೆ ಆದರೆ ಹಣವಿಲ್ಲ ಎಂದು ನಗುತ್ತಾ ಹೇಳುವುದು ಇದರಲ್ಲಿದೆ.

ಜನ ಸಂಕಷ್ಟದಲ್ಲಿದ್ದರೆ ಮೋದಿ ಸಂತೋಷ ಪಡುತ್ತಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. 39 ಸೆಕೆಂಡುಗಳ ಅವಧಿಯ ವಿಡಿಯೋದಲ್ಲಿ ಮೋದಿ ಮಾತನಾಡುತ್ತಿದ್ದು ಮೋದಿ ವಿಕೃತ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಟ್ವೀಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಜಿಕ ಮಾಧ್ಯಮಗಳಲ್ಲಿ ವೈರಲ್ ಆಗರುವ ಪೋಸ್ಟ್‌ನ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ ಮೋದಿ ಜನರನ್ನು ವ್ಯಂಗ್ಯ ಮಾಡಿದ್ದಾರೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಇಂಡಿಯಾ ಟುಡೇ ಫ್ಯಾಕ್‌ಚೆಕ್ ವರದಿಯೊಂದು ಲಭ್ಯವಾಗಿದ್ದು ಪ್ರಧಾನಿ ಮಾತಾಡಿರುವ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಿದೆ.

ABP ವಾಹಿನಿ ಪ್ರಸಾರ ಮಾಡಿದ ವಿಡಿಯೋ ತುಣುಕಿನಲ್ಲಿ ” ಪ್ರಧಾನಿ ನರೇಂದ್ರ ಮೋದಿ”  ಜಪಾನ್‌ನಲ್ಲಿ ಎಂದು ಹಿಂದಿ ಶೀರ್ಷಿಕೆಯಲ್ಲಿ ನಮೂದಿಸಲಾಗಿದೆ. ಇದನ್ನ ಆಧಾರವಾಗಿಟ್ಟುಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, ನೋಟ್‌ ಬ್ಯಾನ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಜಪಾನಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಲು ಹೋಗಿದ್ದಾಗಿ ತಿಳಿದು ಬಂದಿದೆ.

ವರದಿಯ ಪ್ರಕಾರ, ನವೆಂಬರ್ 12, 2016 ರಂದು ವಾರ್ಷಿಕ ಶೃಂಗಸಭೆಗಾಗಿ ಮೋದಿ ಜಪಾನ್‌ಗೆ ಭೇಟಿ ನೀಡಿ, ಅಲ್ಲಿ ಅವರು ಭಾರತೀಯ ಸಮುದಾಯವನ್ನು ಭೇಟಿ ಮಾಡಿದ್ದರು .ಕೋಬೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ವಿಡಿಯೋವನ್ನು ABP News YouTube ಚಾನೆಲ್‌ ಅಪ್‌ಲೋಡ್ ಮಾಡಿರುವ ಅದೇ ಕ್ಲಿಪ್‌ನ ದೀರ್ಘ ಆವೃತ್ತಿ ಇದೆ. 21 ನಿಮಿಷಗಳ ಅವಧಿಯ ವಿಡಿಯೊ ಶೀರ್ಷಿಕೆ, ” “PM Narendra Modi’s Speech: interaction with Indian Community in Japan” ಎಂದು ಇದೆ, ವೈರಲ್ ವಿಡಿಯೊದ ಮೊದಲ ಭಾಗವು ಮೂಲದಲ್ಲಿ 7.35-ನಿಮಿಷ ಮತ್ತು 8-ನಿಮಿಷದ ನಡುವೆ ಇರುವುದಾಗಿದೆ.

ವೈರಲ್ ವಿಡಿಯೊದ ಎರಡನೇ ಭಾಗವನ್ನು ಎಡಿಟ್ ಮಾಡಲಾಗಿದೆ. ಎಡಿಟ್ ಮಾಡದ ಆವೃತ್ತಿಯಲ್ಲಿ, ಪ್ರಧಾನಿ ಹಿಂದಿಯಲ್ಲಿ ಹೀಗೆ ಹೇಳುತ್ತಾರೆ, “ಯಾರೊಬ್ಬರ ಮಗಳ ಮದುವೆಗೆ ಹಣವಿಲ್ಲ, ಇನ್ನೊಬ್ಬರ ಬಳಿ ಅವರ ತಾಯಿಯ ಚಿಕಿತ್ಸೆಗೆ ಹಣವಿಲ್ಲ. ಆದರೆ ಹಲವಾರು ಸಮಸ್ಯೆಗಳಿದ್ದರೂ ಜನರು ಈ ಕ್ರಮವನ್ನು (ನೋಟು ರದ್ದತಿ) ಸ್ವಾಗತಿಸಿದ್ದಾರೆ. ನಾನು ಅವರಿಗೆ ನಮಸ್ಕರಿಸುತ್ತೇನೆ. ದೇಶದ ಸುಧಾರಣೆ, 2011 ರಲ್ಲಿ ಜಪಾನ್ ಮಾಡಿದಂತೆಯೇ ಅವರು ಮುಂದೆ ಬರುತ್ತಿದ್ದಾರೆ. ಈ ಭಾಗವು ವೀಡಿಯೊದಲ್ಲಿ 8.25 ನಿಮಿಷ ಮತ್ತು 9.37 ನಿಮಿಷಗಳ ನಡುವೆ ಇದೆ.

ಅದೇ ವಿಡಿಯೊವನ್ನು 12 ನವೆಂಬರ್ 2016 ರಂದು ಪ್ರಧಾನಿ ಕಚೇರಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ, ” PM Narendra Modi’s Speech: interaction with Indian Community in Japan” ಎಂದು ಶೀರ್ಷಿಕೆ ನೀಡಲಾಗಿದೆ.

ನವೆಂಬರ್ 13, 2016 ರಂದು ಇಂಡಿಯಾ ಟುಡೇ ಈ ಬಗ್ಗೆ ವರದಿ ಮಾಡಿದೆ. ” PM Modi in Japan: I salute the people of India for supporting demonetisation despite inconvenience” ಎಂದು ಆ ಸುದ್ದಿಗೆ ಶೀರ್ಷಿಕೆ ನೀಡಲಾಗಿತ್ತು

ಒಟ್ಟಾರೆಯಾಗಿ ಹೇಳುವುದಾದರೆ,ವೈರಲ್ ಆಗಿರುವ ವಿಡಿಯೊ 2016ರಲ್ಲಿ ಮೋದಿ ಅವರು ಜಪಾನ್‌ನಲ್ಲಿ ಮಾಡಿದ ಭಾಷಣದ ವಿಡಿಯೊ ಆಗಿದ್ದು. ಮೂಲ ವಿಡಿಯೊವನ್ನು ಪರಿಶೀಲಿಸಿದಾಗ ನೋಟು ಅಮಾನ್ಯೀಕರಣದ ನಂತರ ಕಷ್ಟ ಅನುಭವಿಸಿದ ಜನರನ್ನು ಪ್ರಧಾನಿ ಮೋದಿ ಗೇಲಿ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯಾ ಟಡೇ ವರದಿ ಮಾಡಿದೆ.

ಕೃಪೆ : ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗೋವಾದ ಕಡಲ ತೀರಗಳಲ್ಲಿ ಮದ್ಯಪಾನ ನಿಷೇದ ಮಾಡಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights