ಫ್ಯಾಕ್ಟ್‌ಚೆಕ್: ಮೋದಿಯವರ ಮೊರ್ಬಿ ಭೇಟಿಗೆ ₹30 ಕೋಟಿ ಖರ್ಚಾಗಿದ್ದು ನಿಜವೇ?

“ಇತ್ತೀಚೆಗೆ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿದು 135 ಜನರು ಸಾವನಪ್ಪಿದ್ದರು , ಗುಜರಾತ್‌ ತೂಗು ಸೇತುವೆ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಲವು ಗಂಟೆಗಳ ಕಾಲ ಮೊರ್ಬಿಗೆ ಭೇಟಿ ನೀಡಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿ ಅವರು ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಘೋಷಿಸಿದರು. ಆದರೆ, ಈ ನಿಟ್ಟಿನಲ್ಲಿ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿದ್ದು. ಮೋದಿ ಭೇಟಿಗೆ ರಾಜ್ಯ ಸರ್ಕಾರ ಖರ್ಚು ಮಾಡಿದ್ದು 30 ಕೋಟಿ ರೂ. ಆದರೆ ದುರಂತದಲ್ಲಿ ಸಾವನಪ್ಪಿದ ಸಂತ್ರಸ್ತರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂ.ನಂತೆ ಒಟ್ಟು 5 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು RTI ಮೂಲಕ ಬಹಿರಂಗವಾಗಿದೆ, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕ ಸಾಕೇತ್‌ ಗೋಖಲೆ ಆರೋಪಿಸಿದ್ದಾರೆ. “ಈ ಕುರಿತು ಆರ್‌ಟಿಐ ಅಡಿ ಮಾಹಿತಿ ಬಹಿರಂಗವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. 135ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಇತ್ತೀಚಿನ ಸೇತುವೆ ಕುಸಿತದ ದುರಂತದ ನಂತರ ಪ್ರಧಾನಿ ಮೋದಿಯವರು ಅಕ್ಟೋಬರ್ 30ರಂದು ಗುಜರಾತ್ ರಾಜ್ಯದ ಮೊರ್ಬಿ ನಗರಕ್ಕೆ ಭೇಟಿ ನೀಡಿದ್ದರು. ಅದಕ್ಕಾಗಿ 30 ಕೋಟಿ ರೂಪಾಯಿ ವೆಚ್ಚವಾಗಿದೆ. ಅದರಲ್ಲಿ 5.5 ಕೋಟಿ ರೂಪಾಯಿಗಳು ‘ಸ್ವಾಗತ, ಕಾರ್ಯಕ್ರಮ ನಿರ್ವಹಣೆ ಮತ್ತು ಫೋಟೋಗ್ರಫಿ’ಗೆ ಖರ್ಚಾಗಿದೆ ಎಂದು ಗೋಖಲೆ ದೂರಿದ್ದಾರೆ.

ಮೋರ್ಬಿ ದುರಂತದ 135 ಸಂತ್ರಸ್ತರಿಗೆ ತಲಾ 4 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಆದರೆ ಪ್ರಧಾನ ಮೋದಿಯವರ ಭೇಟಿಗೆ ಹೆಚ್ಚಿನ ಖರ್ಚಾಗಿದೆ ಎಂದು ಹೋಲಿಕೆ ಮಾಡಿರುವ ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ RTI ನ ಪ್ರತಿಕ್ರಿಯೆಯನ್ನು ಗೂಗಲ್ ಸರ್ಚ್ ಮಾಡಿದಾಗ, ಯಾವುದೇ ಅಧಿಕೃತ ಮಾಹಿತಿಯು ಎಲ್ಲಿಯೂ ಕಂಡುಬಂದಿಲ್ಲ. ಪೋಸ್ಟ್‌ನ ಪ್ರಕಾರ, ಪ್ರಧಾನಿ ಮೋದಿಯವರ ಮೊರ್ಬಿ ಭೇಟಿಗೆ ಸರ್ಕಾರವು 30 ಕೋಟಿ ರೂ ಖರ್ಚು ಮಾಡಿದೆ ಎಂದು RTI ನಿಂದ ಬಹಿರಂಗ ಆಗಿದೆ ಎಂದು ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಕೂಡ ಇದೇ ಹೇಳಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ, ಆದರೆ ‘ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ’ ಇದು ಸುಳ್ಳು ಸುದ್ದಿ ಮತ್ತು ಅಂತಹ ಮಾಹಿತಿಯನ್ನು ನೀಡುವ ಯಾವುದೇ RTI ಉತ್ತರವನ್ನು ಸರ್ಕಾರ ನೀಡಿಲ್ಲ ಎಂದು ವಿವರಿಸಿದೆ.

ಸಾಕೇತ್ ಗೋಖಲೆ ಪೋಸ್ಟ್ ಮಾಡಿರುವ ಫೋಟೋದಲ್ಲಿ ನಿಯತಕಾಲಿಕೆಯೊಂದರಲ್ಲಿ RTI ಬಗ್ಗೆ ಲೇಖನವಿದೆ ಎಂದು ‘ಡಾಕ್ಸ್ ಪಟೇಲ್’ ಎಂಬ ವ್ಯಕ್ತಿ ಟ್ವೀಟ್ ಮಾಡಿರುವುದನ್ನು ಕಾಣಬಹುದು. ಯಾವ ಪತ್ರಿಕೆಯಲ್ಲಿ ಆ ಲೇಖನ ಬಂದಿದೆ ಎಂದು ಕೆಲವರು ‘ಡಾಕ್ಸ್ ಪಟೇಲ್’ ಅವರನ್ನು ಕೇಳಿದಾಗ ‘ಗುಜರಾತ್ ಸಮಾಚಾರ’ ಪತ್ರಿಕೆಯಲ್ಲಿ ಬಂದಿದೆ ಎಂದು ಹೇಳಿದರು. ಆದರೆ, ಗುಜರಾತ್ ಸಮಾಚಾರ್ ನಿಯತಕಾಲಿಕದಲ್ಲಿ ಪ್ರಕಟವಾದ ಆ ಲೇಖನದ ಬಗ್ಗೆ ನಮಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ಮೇಲಾಗಿ ಗುಜರಾತ್ ಸಮಾಚಾರ್ ಪತ್ರಿಕೆಗೆ ಸಂಬಂಧಿಸಿದವರು ಇಂತಹ ಸುದ್ದಿಗಳನ್ನು ಪ್ರಕಟಿಸಿಲ್ಲ ಎಂದು ‘ಬೂಮ್ ಲೈವ್’ ವರದಿ ಮಾಡಿದೆ. ಅಂತಹ ಯಾವುದೇ RTI ಉತ್ತರವನ್ನು ನಾವು ನೀಡಿಲ್ಲ ಎಂದು ಮೊರ್ಬಿ ಜಿಲ್ಲಾಧಿಕಾರಿಯೂ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರ ಮೊರ್ಬಿ ಭೇಟಿಗೆ ಸರ್ಕಾರ 30 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬುದಕ್ಕೆ  RTIನಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಭಾರತ ಸರ್ಕಾರದ ‘ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ’ (PIB) ಸ್ಪಷ್ಟಪಡಿಸಿದೆ. ಹಾಗೆಯೇ ಗುಜರಾತ್ ಸಮಾಚಾರ್ ಮ್ಯಾಗಜಿನ್ ನಲ್ಲಿ RTI ಉತ್ತರ ಎಂದು ಕೆಲವರು ಶೇರ್ ಮಾಡಿದ್ದು, ಅಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ವಿಕಾಸ ಪುರುಷನಲ್ಲ, ವಿನಾಶ ಪುರುಷ ಎಂದು ಉಮಾ ಭಾರತಿ ಹೇಳಿದರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights