ಫ್ಯಾಕ್ಟ್‌ಚೆಕ್: ಸೋನಿಯಾ ಗಾಂಧಿಯವರ ಹರೆಯದ ಫೋಟೋ ಎಂದು ತಪ್ಪಾಗಿ ನಟಿಯ ಫೋಟೊ ಹಂಚಿಕೆ

ಸೋನಿಯಾ ಗಾಂಧಿ ಹರೆಯದಲ್ಲಿ ಹೇಗಿದ್ದಾರೆ ನೋಡಿ ಎಂಬ ಹೇಳಿಕೆಯೊಂದಿಗೆ ಸೋನಿಯಾ ಗಾಂಧಿ ಮತ್ತು ಯುವತಿಯ ಚಿತ್ರವಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಡಭಾಗದಲ್ಲಿ ಸೋನಿಯಾ ಗಾಂಧಿ ಮತ್ತು ಬಲಭಾಗದಲ್ಲಿ ಯುವತಿಯ ಚಿತ್ರವಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಸೋನಿಯಾ ಗಾಂಧಿ ಅವರು ಚಿಕ್ಕವರಿದ್ದಾಗಿನ ಫೋಟೋ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್ ಮತ್ತು ಫೇಸ್‌ಬುಕ್‌ನ ಹಲವು ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.

2 ಜನರು ಮತ್ತು ಪಠ್ಯ 'Shyam Sunder Lalwani 1d जब वो 15 साल CM और7 साल PM रहने के बावजूद तुम्हारे लिए चायवाला है, तो तुम्हें अपनी पुरानी पहचान से परेशानी क्यों है छम्मक छल्लो.....' ಹೇಳುತ್ತಿದೆ ನ ಚಿತ್ರವಾಗಿರಬಹುದು

ಸೋನಿಯಾ ಗಾಂಧಿ ಯುವತಿಯಾಗಿದ್ದ ಸಂದರ್ಭದ್ದಲ್ಲಿ ತೆಗೆದ ಚಿತ್ರ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊದ ವಾಸ್ತವ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸೋನಿಯಾರವರ ಹರೆಯದ ಫೋಟೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಕೊಲಾಜ್ ಮಾಡಲಾದ ಚಿತ್ರವು ಈ ಹಿಂದೆ ಅಂದರೆ 2020ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. 2020ರಲ್ಲಿ “ಸೋನಿಯಾ ಗಾಂಧಿ ಬಾರ್ ಗರ್ಲ್ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ” ಎಂಬ ಹೇಳಿಕೆಯೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿತ್ತು.

ವೈರಲ್ ಫೋಟೊದಲ್ಲಿ ಇರುವ ಯುವತಿ ಸೋನಿಯಾ ಗಾಂಧಿಯೇ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸೋನಿಯಾ ಗಾಂಧಿಯವರ ಯುವತಿ ಚಿತ್ರ ಎಂದು ಹೇಳಲಾದ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಅದು ಸೋನಿಯಾ ಅವರ ಫೋಟೊ ಅಲ್ಲ ಎಂದು ತಿಳಿದು ಬಂದಿದೆ.

ಹಾಗಿದ್ದರೆ ಆ ಫೋಟೋ ಯಾರದ್ದು?

ವಾಸ್ತವವಾಗಿ ಸೋನಿಯಾ ಗಾಂಧಿ ಫೋಟೊದೊಂದಿಗೆ ಯುವತಿಯ ಫೋಟೊವನ್ನು ಕೊಲಾಜ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರ ಸೋನಿಯಾ ಅವರದ್ದಲ್ಲ. ಹಾಲಿವುಡ್ ಚಿತ್ರ ನಟಿ ರೀಸ್ ವಿದರ್ಸ್ಪೂನ್ ಎಂಬುವವರದ್ದು.

ಫೋಟೋ ಕುರಿತು ಮತ್ತಷ್ಟು ಮಾಹಿತಿಗಾಗಿ ನಿರ್ದಿಷ್ಟ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ BL (BEST LIFE) ನ ಲೇಖನದಲ್ಲಿ “ರೀಸ್ ವಿದರ್ಸ್ಪೂನ್ ಅವರ ಹಾಲಿವುಡ್ ನಲ್ಲಿ ಕಳೆದ 25 ವರ್ಷಗಳಲ್ಲಿ ಅಭಿನಯಿಸಿದ ಫೋಟೊಗಳನ್ನು ರಿಲೀವ್ ಮಾಡಿದ” ವರದಿಯೊಂದು ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಯುವತಿ ಸೋನಿಯಾ ಗಾಂಧಿ ಎಂದು ಹೇಳಿಕೊಳ್ಳಲಾದ ಮಹಿಳೆ ವಾಸ್ತವವಾಗಿ ಸೋನಿಯಾ ಅಲ್ಲ. ಆಕೆ ಹಾಲಿವುಡ್‌ ನಟಿ ಮತ್ತು ನಿರ್ಮಾಪಕಿ ರೀಸ್ ವಿದರ್‌ಸ್ಪೂನ್ ಆಗಿದ್ದಾರೆ. ಸೋನಿಯಾ ಗಾಂಧಿಯವರ ಮೇಲೆ ಈ ರೀತಿ ಸೋಶಿಯಲ್ ಮೀಡಿಯೋ ಟ್ರೋಲ್ ಹೊಸದೇನಲ್ಲ. BJP, ಸಂಘಪರಿವಾರ ಮತ್ತು ಬಲಪಂಥೀಯ ಪ್ರತಿಪಾದಕರು ಸೋನಿಯಾ ಅವರನ್ನು ಬಾರ್ ಗರ್ಲ್, ಇಟಲಿ ಮಹಿಳೆ ಎಂದು ಹೀಯಾಳಿಸುತ್ತಲೇ ಸಂಬಂಧವಿಲ್ಲದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ IT ಸೆಲ್‌ಗಳ ಮೂಲಕ ಹಂಚಿಕೊಂಡು ಕೀಳು ಮಟ್ಟದ ರಾಜಕೀಯ ಮಾಡಿದ ನಿದರ್ಶನಗಳು ಸಾಕಷ್ಟಿವೆ. ಆದರೆ ಇದೆಲ್ಲ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿವೆ.

ಕೃಪೆ:DFRAC

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬ್ರೆಜಿಲ್‌ನಲ್ಲಿ ನಡೆದ ಯುವತಿ ಹತ್ಯೆಯನ್ನು ‘ಲವ್‌ ಜಿಹಾದ್‌’ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights