ಫ್ಯಾಕ್ಟ್‌ಚೆಕ್: 21 ವರ್ಷದ ಯುವಕ 52 ವರ್ಷದ ಆಂಟಿಯನ್ನು ಮದುವೆ ಆಗಿದ್ದು ನಿಜವೇ?

21 ವರ್ಷದ ಯುವಕ 52 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂಬ ಸುದ್ದಿಯನ್ನು ಇತ್ತೀಚೆಗೆ ಹಲವು ಮುಖ್ಯವಾಹಿನಿ ಮಾಧ್ಯಮಗಳು ಪ್ರಕಟಿಸಿದವು. ‘ವರದಿಗಳಲ್ಲಿ’ ನವವಿವಾಹಿತರ ಬಗ್ಗೆ ಯಾವುದೇ ವಿವರಗಳನ್ನು ಹೊಂದಿರದೆ ಕೇವಲ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಹೊಂದಿದ್ದವು.

“52 ವರ್ಷದ ಆಂಟಿಯನ್ನು ಮದುವೆಯಾದ 21ರ ಯುವಕ! ಬಲು ರೋಚಕ ಈ ಲವ್ ಸ್ಟೋರಿ” ಎಂಬ ಹೇಳಿಕೆಯೊಂದಿಗೆ Zee ನ್ಯೂಸ್ ಕನ್ನಡ ಸ್ಟೋರಿಯೊಂದನ್ನು ಪ್ರಕಟಿಸಿದೆ. ” 52ರ ವಧುವಿನೊಂದಿಗೆ 21ರ ವರನ ಮದುವೆ- ಶಾಕ್ ಆದ ಮಂದಿ “ಎಂಬ ಶೀರ್ಷಿಕೆಯೊಂದಿಗೆ ಒನ್‌ ಇಂಡಿಯಾ.ಕಾಂ ಕನ್ನಡ ಲೇಖನವೊಂದನ್ನು ಪ್ರಕಟಿಸಿದೆ.

Zee ನ್ಯೂಸ್ ಕನ್ನಡ ತನ್ನ ಲೇಖನದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಮದುವೆಯ ವೇದಿಕೆಯ ಮೇಲೆ 21 ವರ್ಷದ ಹುಡುಗ ನಿಂತಿರುವುದನ್ನು ನೋಡಬಹುದು. ಅವನ ಜೊತೆ ಆಂಟಿಯೊಬ್ಬರು ಇರುವುದನ್ನು ನೋಡಬಹುದು. ಇಬ್ಬರೂ ಕೊರಳಿಗೆ ಹಾರ ಹಾಕಿಕೊಂಡಿದ್ದಾರೆ. ಇಬ್ಬರೂ ಮದುವೆಯಾಗಿದ್ದೀರಾ ಎಂದು ಯಾರೋ ಹುಡುಗನನ್ನು ಕೇಳಿದರು. ಆಗ ಹುಡುಗ ಹೌದು ಎಂದು ಉತ್ತರಿಸಿದ. ಆಗ ಆ ವ್ಯಕ್ತಿ ಹುಡುಗನಿಗೆ ಅವನ ವಯಸ್ಸು ಕೇಳಿದಾಗ ಅವನಿಗೆ 21 ವರ್ಷ ಮತ್ತು ಮದುವೆಯಾದ ಮಹಿಳೆಗೆ 52 ವರ್ಷ ಎಂದು ಹೇಳಿದ ಎಂದು ವರದಿ ಮಾಡಿದೆ.

ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ನೀವು ಈ ಮದುವೆಯಿಂದ ಸಂತೋಷವಾಗಿದ್ದೀರಾ ಎಂದು ಕೇಳಿದಾಗ ಮಹಿಳೆ ಹೌದು, ನಾವಿಬ್ಬರೂ ಸಂತೋಷವಾಗಿದ್ದೇವೆ ಎಂದರು. ನಾನು ನನಗಿಂತ ಹೆಚ್ಚಾಗಿ ಅವನನ್ನು ನಂಬುತ್ತೇನೆ. ಏಕೆಂದರೆ ನಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. “ಪ್ರೀತಿಗೆ ವಯಸ್ಸಿಲ್ಲ, ಹೃದಯ ಮಾತ್ರ ಕಾಣುತ್ತದೆ. ಮನುಷ್ಯ ಒಳ್ಳೆಯವನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ” ಎಂದು ಹುಡುಗ ಹೇಳಿದ್ದಾನೆ. ಎಂದು ವಿಡಿಯೋದ ವಿವರಣೆಯನ್ನು ಲೇಖನದಲ್ಲಿ ತಿಳಿಸಲಾಗಿದೆ.

ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕೂಡಲೇ ಅದು ವೈರಲ್ ಆಗಿದೆ. ಇದನ್ನು ಅಮಿತ್ ಚತುರ್ವೇದಿ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದುವರೆಗೆ 22 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಆದರೆ, ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದಕ್ಕೆ ಈ ವಿಡಿಯೋದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಎಂದು ಝೀ ನ್ಯೂಸ್ ವರದಿ ಮಾಡಿದೆ.

ಈ ಸುದ್ದಿ ನಿಜವೇ ಎಂದು ಪರಿಶೀಲಿಸುವಂತೆ ಏನ್‌ ಸುದ್ದಿ.ಕಾಂನ ಓದುಗರು ನಮ್ಮ ವಾಟ್ಸಾಪ್ ಗೆ ಸಂದೇಶಗಳನ್ನು ಕಳುಹಿಸುವ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಕೀ-ವರ್ಡ್ ಸಹಾಯದಿಂದ ಸರ್ಚ್ ಮಾಡಿದಾಗ, ‘ALL in ONE news’ ಎಂಬ’ ಹೆಸರಿನ ಒಂದು ಚಾನೆಲ್ ನಲ್ಲಿ ಇದೇ ವಿಡಿಯೊ ಲಭ್ಯವಾಗಿದ್ದು Instagram ಬಳಕೆದಾರರಾದ @techparesh ಅವರಿಗೆ ವೀಡಿಯೊದ ಕ್ರೆಡಿಟ್ ನೀಡಿದೆ.

@techparesh ಅವರ Instagram ಟೈಮ್‌ಲೈನ್‌ನಲ್ಲಿ 2 ವಾರಗಳ ಹಿಂದೆ ಪೋಸ್ಟ್ ಮಾಡಿದ  ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ 22 ವರ್ಷ ವಯಸ್ಸಿನವನಾಗಿದ್ದು, ಅದೇ @techparesh Instagram ಖಾತೆಯಲ್ಲಿ ಸಂಬಂಧಗಳ ವಿಭಿನ್ನ ಕಥೆಗಳೊಂದಿಗೆ ಇತರ ಹಲವು ವೀಡಿಯೊಗಳಲ್ಲಿ ಕಾಣಿಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ ಎಂದು ಆಲ್ಟ್‌ನ್ಯೂಸ್ ಕಂಡುಹಿಡಿದಿದೆ. @techparesh ಪೋಸ್ಟ್ ಮಾಡಿದ ಮತ್ತೊಂದು ವೀಡಿಯೊದಲ್ಲಿ, ಅವರು ಇಬ್ಬರು ಹುಡುಗಿಯರ ಬಾಯ್‌ಫ್ರೆಂಡ್ ಆಗಿ ನಟಿಸಿದ್ದಾರೆ.

 

View this post on Instagram

 

A post shared by Paresh Sathaliya (@techparesh)

ಇದು 16.8 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಈ ಬಳಕೆದಾರರ ಖಾತೆಯಲ್ಲಿರುವ ಬಹುತೇಕ ಎಲ್ಲಾ ವೀಡಿಯೊಗಳು ಮದುವೆ/ಸಂಬಂಧಗಳಿಗೆ ಸಂಬಂಧಿಸಿವೆ. ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ಸ್ಕ್ರಿಪ್ಟ್ ಮಾಡಿದ (ನಟನೆ ಮಾಡಿದ) ವೀಡಿಯೊದ್ದಾಗಿದೆ. ‘techparesh’ ಎಂಬ ಇನ್‌ಸ್ಟಾಗ್ರಾಮ್ ಪುಟವು ಮದುವೆಗೆ ಸಂಬಂಧಿಸಿದ ಇನ್ನೂ ಅನೇಕ ಸ್ಕ್ರಿಪ್ಟ್ ವೀಡಿಯೊಗಳನ್ನು ಪ್ರಕಟಿಸಿದೆ. ಈ ವೀಡಿಯೋದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿರುವ ವ್ಯಕ್ತಿಗಳು ‘ಟೆಕ್‌ಪರೇಶ್’ ನಲ್ಲಿ ಅಪ್‌ಲೋಡ್ ಮಾಡಲಾದ ಇತರ ಸ್ಕ್ರಿಪ್ಟ್ ವೀಡಿಯೊಗಳಲ್ಲಿ ಇತರರೊಂದಿಗೆ ಜೋಡಿಯಾಗಿ ನಟಿಸಿದ್ದಾರೆ ಎಂದು ಆಲ್ಟ್‌ನ್ಯೂಸ್  ಕಂಡುಹಿಡಿದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇನ್‌ಸ್ಟಾಗ್ರಾಮ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ಸ್ಕ್ರಿಪ್ಟೆಡ್‌ ವೀಡಿಯೊವನ್ನು ಹಲವು ಮುಖ್ಯವಾಹಿನಿ ಮಾಧ್ಯಮಗಳು 21 ವರ್ಷದ ಹುಡುಗ ಮತ್ತು 52 ವರ್ಷದ ಮಹಿಳೆಯ ನಡುವಿನ ನಿಜವಾದ ಮದುವೆ ಎಂದು ತಪ್ಪಾಗಿ ವರದಿ ಮಾಡಿದೆ. ವೈರಲ್ ವಿಡಿಯೋ ಒಂದು ನಾಟಕೀಯ ವಿಡಿಯೋ ಎಂಬುದು ಸ್ಪಷ್ಟವಾಗಿದ್ದು, ಇದನ್ನು ಪರಿಶೀಲಿಸದೇ ರಂಗು ರಂಗಿನ ಟೈಟಲ್‌ಗಳನ್ನು ನೀಡಿ ಲೇಖನವನ್ನು ಪ್ರಕಟಿಸಿವೆ. ವಾಸ್ತವವಾಗಿ ವಿಡಿಯೋದಲ್ಲಿರುವ ಹುಡುಗ ಮತ್ತು ಮಹಿಳೆ ಇಬ್ಬರೂ ಕಲಾವಿದರಾಗಿದ್ದು, ನಾಟಕೀಯ ದೃಶ್ಯದಲ್ಲಿ ನಟಿಸಿದ ವಿಡಿಯೋ ವೈರಲ್ ಆಗಿದೆ. ಹಾಗಾಗಿ ಇದು ನಿಜವಾದ ಮದುವೆ ಅಲ್ಲ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬ್ರೆಜಿಲ್‌ನಲ್ಲಿ ನಡೆದ ಯುವತಿ ಹತ್ಯೆಯನ್ನು ‘ಲವ್‌ ಜಿಹಾದ್‌’ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights