ಫ್ಯಾಕ್ಟ್‌ಚೆಕ್: ಮೋದಿ ಅವರ ಫೋಟೊ ಕ್ಲಿಕ್ಕಿಸುವಾಗ ಸಮಯ 4:20 ಆಗಿತ್ತೆ? ಈ ಸ್ಟೋರಿ ಓದಿ

ರೈಲ್ವೆ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಡಿಜಿಟಲ್ ಗಡಿಯಾರದ ಕೆಳಗೆ ನಿಂತಿರುವ ಮೋದಿಯವರ ಫೋಟೊವನ್ನು ನೋಡಬಹುದು. ಆ ಫೋಟೋ ಕ್ಲಿಕ್ಕಿಸಿದ ಸಮಯ ಸರಿಯಾಗಿ 4:20 ಎಂದು ತೋರಿಸುತ್ತಿದೆ.

https://twitter.com/JayashankarKV/status/1604340473186787328?t=tj-daStQq20M_94hvzW3RQ&s=19

ಟ್ವಿಟ್ಟರ್ ಬಳಕೆದಾರ ಜಯಶಂಕರ್ ಕೇನಾತ್ ಅವರು ಈ ಫೋಟೋವನ್ನು ‘ವಾಟ್ ಎ ಆಪ್ಟ್ ಕ್ಯಾಪ್ಚರ್’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಅವರ ಟ್ವೀಟ್‌ಗೆ 900+ ರಿಟ್ವೀಟ್‌ಗಳು ಮತ್ತು 6,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಎಂಬುದು ವಂಚನೆ ಮತ್ತು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದೆ. ಭಾರತದಲ್ಲಿ ವಂಚಕನನ್ನು ‘420’ ಎಂಬ ಪದ ಬಳಕೆಯಿಂದ ಕರೆಯುವುದು ಸಾಮಾನ್ಯ. ಪ್ರಧಾನಿಯನ್ನು ಲೇವಡಿ ಮಾಡಲು ಫೋಟೋ ಬಳಸಲಾಗುತ್ತಿದೆ.

https://twitter.com/AbihaZaidi21/status/1604719198806151168?t=ZVE28czMSQBwrYQ-HK9Dug&s=19

ಮತ್ತೊಬ್ಬ ಬಳಕೆದಾರ ಅಬಿಹಾ ಜೈದಿ ಕೂಡ ಇದೇ ರೀತಿಯ ಶೀರ್ಷಿಕೆಯೊಂದಿಗೆ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವೈರಲ್ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗಿರುವ ಫೋಟೋಗಳ ವಾಸ್ತವವೇನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಕಳೆದ ವರ್ಷ ಇದೇ ಸಮಯದಲ್ಲಿ ವಾರಣಾಸಿ ರೈಲು ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಕುರಿತು ಅನೇಕ ಸುದ್ದಿ ಲೇಖನಗಳು ಕಂಡುಬಂದಿವೆ. ಈ ಫೋಟೋಗಳನ್ನು ಪ್ರಧಾನಿ ಮೋದಿಯವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.


ಪ್ರಧಾನಿ ಮೋದಿಯವರ ಟ್ವಿಟ್ಟರ್ ಖಾತೆಯನ್ನು ಸರ್ಚ್ ಮಾಡಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊಗಳ ಮೂಲ ಸೆಟ್ ಅನ್ನು ಕಂಡುಕೊಂಡಿದ್ದೇವೆ. ಮೂಲ ಫೋಟೋದಲ್ಲಿನ ನಿಲ್ದಾಣದ ಗಡಿಯಾರದ ಸಮಯವು ’01:13′ ಆಗಿದೆ. 01:23 AM ಸಮಯದಲ್ಲಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗಿದೆ.

 

ನಾವು ಎರಡು ಫೋಟೋಗಳನ್ನು ಹೋಲಿಸಿದಾಗ,ಒಂದು ಕಂಬದ ಮೇಲೆ ವಾಟರ್‌ಮಾರ್ಕ್ ಅನ್ನು ಗಮನಿಸಿದ್ದೇವೆ. ಆದರೆ ಮೂಲ ಫೋಟೋದಲ್ಲಿ ಕಂಬದ ಮೇಲೆ ಏನನ್ನು ಬರೆಯಲಾಗಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋವನ್ನು ಮಾರ್ಫ್ ಮಾಡಲಾಗಿದೆ ಎಂಬುದು ಇದರಿಂದ ಸ್ವಷ್ಟವಾಗಿದೆ.

ಕಳೆದ ವರ್ಷ ವಾರಣಾಸಿ ರೈಲ್ವೇ ನಿಲ್ದಾಣಕ್ಕೆ ಪ್ರಧಾನಿ ಮೋದಿಯವರ ಭೇಟಿಯ ಮಾರ್ಫ್ ಮಾಡಿದ ಫೋಟೋವನ್ನು ಅಪಹಾಸ್ಯ ಮಾಡಲು ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ ‘ಮೋದಿ 420’ ಎಂದು ಬರೆದಿರುವ ಮಾರ್ಫ್ ಮಾಡಿದ ಜೆರ್ಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದಾಗ ಸೆರೆಹಿಡಿದ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಮೂಲ ಫೋಟೊದ ಡಿಜಿಟಲ್ ಗಡಿಯಾರದಲ್ಲಿ 1.13AM ಎಂಬುದನ್ನು 4:20 ಎಂದು ಎಡಿಟ್ ಮಾಡುವ ಮೂಲಕ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿಯೊಂದಿಗೆ ಇರುವ ವ್ಯಕ್ತಿ ಅಮಿತ್ ಶಾ ಅಲ್ಲ! ಮತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights