ಫ್ಯಾಕ್ಟ್‌ಚೆಕ್: ಅಣ್ಣಾಮಲೈ ಧರಿಸಿದ್ದ ವಾಚು ರಫೇಲ್ ವಿಮಾನದ ಭಾಗಗಳಿಂದ ತಯಾರಿಸಲಾಗಿದೆಯೇ?

ತಮಿಳುನಾಡು ರಾಜಕಾರಣದಲ್ಲಿ ದುಬಾರಿ ವಾಚ್ ಖರೀದಿ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ತಮಿಳುನಾಡು ಘಟಕದ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು 5 ಲಕ್ಷ ರೂ. ಮೌಲ್ಯದ ರಫೇಲ್ ವಾಚ್ ಖರೀದಿಸಿದ್ದು, ಅದರ ರಶೀದಿಯನ್ನು ಬಿಡುಗಡೆ ಮಾಡುವಂತೆ  ತಮಿಳುನಾಡು ಸಚಿವ ಸೆಂಥಿಲ್​ ಬಾಲಾಜಿ ಸವಾಲು ಎಸೆದಿದ್ದರು.

ಸಾಮಾಜಿಕ ಜಾಲತಾಣದಲ್ಲಿ ದುಬಾರಿ ವಾಚ್​ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕೊಯಮತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅಣ್ಣಾಮಲೈ ಕೂಡ ಸ್ಪಷ್ಟನೆ ನೀಡಿದ್ದಾರೆ. ಇದುವರೆಗೂ ನಾನು ಧರಿಸುತ್ತಿದ್ದ ಶರ್ಟ್​, ಪ್ಯಾಂಟ್​, ಪಂಚೆ ಹಾಗೂ ನಾನು ಬಳಸುತ್ತಿದ್ದ ಕಾರು ಇವುಗಳನ್ನು ಹೋಲಿಕೆ ಮಾಡಿ ಮಾತನಾಡುತ್ತಿದ್ದವರು. ಇದೀಗ ಹೊಸ ಚರ್ಚೆ ಆರಂಭಿಸಿದ್ದಾರೆ. ನನ್ನ ವಾಚ್​ ಬಗ್ಗೆ ಮಾತನಾಡುತ್ತಿದ್ದಾರೆ.

https://twitter.com/ieexplained/status/1606178833438511109

ನಾನು ಕಟ್ಟಿರುವುದು ರಫೇಲ್ ವಾಚ್​. ಭಾರತಕ್ಕೆ ಫ್ರಾನ್ಸ್​ನಿಂದ ಬಂದ ರಫೇಲ್​ ವಿಮಾನಕ್ಕೂ ಇದಕ್ಕೂ ಸಂಬಂಧ ಇದೆ. ರಫೇಲ್​ ವಿಮಾನಗಳ ಬಿಡಿ ಭಾಗಗಳನ್ನು ಬಳಸಿ ಕೇವಲ 500 ವಾಚ್​ಗಳನ್ನು ತಯಾರಿಸಲಾಗಿದೆ. ಇದೊಂದು ವಿಶೇಷ ರಫೇಲ್​ ಆವೃತ್ತಿಯಾಗಿದೆ. ರಫೇಲ್​ ವಿಮಾನದಲ್ಲಿ ಯಾವೆಲ್ಲ ಭಾಗಗಳು ಇವೆಯೋ ಅದೆಲ್ಲ ನಾನು ಕಟ್ಟಿರುವ ವಾಚ್​ನಲ್ಲಿ ಇದೆ. ನಾನೊಬ್ಬ ರಾಷ್ಟ್ರಪ್ರೇಮಿ. ನನಗೆ ರಫೇಲ್​ ವಿಮಾನವನ್ನು ಓಡಿಸುವ ಭಾಗ್ಯ ದೊರೆಯಲಿಲ್ಲ. ಅದಕ್ಕಾಗಿ ನಾನು ರಫೇಲ್​ ವಿಮಾನದ ಭಾಗಗಳಿಂದ ತಯಾರಿಸಿದ ವಾಚ್​ ಅನ್ನು ಧರಿಸುತ್ತಿದ್ದೇನೆ. ಇದು ದೇಶ ಪ್ರೇಮದ ಸಂಕೇತ,  ಆದರೆ ಇದನ್ನು ಪ್ರತ್ಯೇಕತಾವಾದಿಗಳು ಪ್ರಶ್ನಿಸುತ್ತಾರೆ ಎಂದು ಹೇಳಿದ್ದಾರೆ.

“ಪ್ರಪಂಚದಲ್ಲಿ ಈ ರೀತಿಯ ವಾಚ್‌ಗಳು ಕೇವಲ 500 ಇವೆ. ಇದರಲ್ಲಿ ನನ್ನ ಗಡಿಯಾರ 149 ನೇ ವಾಚ್ ಆಗಿದೆ. ಇದು ಸಂಗ್ರಹಿತ ಆವೃತ್ತಿಯಾಗಿದೆ, ವಿಶೇಷ ಆವೃತ್ತಿಯಾಗಿದೆ. ನಾನು ಧರಿಸಿರುವ ವಾಚ್ ರಫೇಲ್ ವಿಮಾನದ ಭಾಗಗಳಿಂದ ಮಾಡಲ್ಪಟ್ಟಿದೆ. ನಾನು ನಾನು ಬದುಕಿರುವವರೆಗೂ ಇದನ್ನು ಧರಿಸುತ್ತೇನೆ”. ಹಾಗಿದ್ದರೆ ಅಣ್ಣಾಮಲೈ ಹೇಳಿರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಧ್ಯಮಗಳಲ್ಲಿ ವೈರಲ್ ಆಗಿರುವ ಅಣ್ಣಾಮಲೈ ಅವರ ಹೇಳಿಕೆಯನ್ನು ಪರಿಶೀಲಿಸಲು ಗೂಗಲ್‌ನಲ್ಲಿ ರಫೇಲ್ ವಾಚ್ ಎಂದು ಹುಡುಕಿದಾಗ, ಅದು ಬೆಲ್ ಆ್ಯಂಡ್ ರಾಸ್ ಎಂಬ ಕಂಪನಿ ತಯಾರಿಸಿದ ಬಿಆರ್ 03 ರಫೇಲ್ ಮಾದರಿಯ ವಾಚ್ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ಇದು ರಫೇಲ್ ಬಿಡಿಭಾಗಗಳಿಂದ ಮಾಡಲ್ಪಟ್ಟಿದೆಯೇ ಎಂದು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ,  ಅಂತಹ ಯಾವುದೇ ಮಾಹಿತಿ ಕಂಡುಬಂದಿಲ್ಲ (ಗೂಗಲ್ ಹುಡುಕಾಟ ಫಲಿತಾಂಶ). ಇದಲ್ಲದೆ, ಹೆಚ್ಚಿನ ಮಾಹಿತಿಗಾಗಿ ಬೆಲ್ ಮತ್ತು ರಾಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದಾಗ ವಾಚ್‌ನ ಬೆಲೆ $6,200 ಎಂದು ತಿಳಿದುಬಂದಿದೆ (ವಾಚ್‌ನ ಬೆಲೆ ತೆರಿಗೆಯನ್ನು ಹೊರತುಪಡಿಸಿ ಭಾರತೀಯ ರೂಪಾಯಿಗಳಲ್ಲಿ ಸುಮಾರು 5 ಲಕ್ಷ ರೂ.).

ಅಲ್ಲದೆ, ತಯಾರಕರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಬಿಆರ್ 03-94 ರಫೇಲ್ ವಾಚ್ ಅನ್ನು ಸೆರಾಮಿಕ್ ಬಳಸಿ ವಿನ್ಯಾಸಗೊಳಿಸಲಾಗಿದೆ, ರಫೇಲ್ ವಿಮಾನವನ್ನು ನವೀನ, ಹೆಚ್ಚಿನ ಕಾರ್ಯಕ್ಷಮತೆಯ ವಸ್ತುಗಳೊಂದಿಗೆ ನಿರ್ಮಿಸಲಾಗಿದೆ. ರಫೇಲ್ ಫೈಟರ್ ಜೆಟ್‌ನ ಬಿಡಿಭಾಗಗಳೊಂದಿಗೆ ಗಡಿಯಾರವನ್ನು ತಯಾರಿಸಿದ ಯಾವುದೇ ಸೂಚನೆಯಿಲ್ಲ.

ಅದೇ ರೀತಿ, ಜೂನ್ 15 ರಿಂದ 21, 2015 ರವರೆಗೆ ಫ್ರಾನ್ಸ್‌ನ ಲೆ ಬೌರ್ಗೆಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಏರ್‌ಶೋನಲ್ಲಿ ಕೇವಲ 500 ಸೀಮಿತ ಆವೃತ್ತಿಯ ಕೈಗಡಿಯಾರಗಳನ್ನು ಉತ್ಪಾದಿಸಲಾಗಿದೆ ಮತ್ತು ಪರಿಚಯಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತರುವಾಯ, ರಫೇಲ್ ಯುದ್ಧವಿಮಾನಗಳ ತಯಾರಕರಾದ ಡಸಾಲ್ಟ್ ಏವಿಯೇಷನ್‌ನ ಸಿಇಒ ಎರಿಕ್ ಟ್ರಾಪ್ಪಿಯರ್, ಬೆಲ್ ಮತ್ತು ರಾಸ್‌ಗೆ ನೀಡಿದ ಸಂದರ್ಶನದಲ್ಲಿ, “ಈ ಗಡಿಯಾರವನ್ನು ರಫೇಲ್ ಯುದ್ಧ ವಿಮಾನದಂತೆ ಮಾಡಲಾಗಿದೆ. ವಾಚ್‌ನ ವಿನ್ಯಾಸವು ರಫೇಲ್ ಯುದ್ಧ ವಿಮಾನದಂತಿದೆ. ” ಇದರಲ್ಲಿ ರಫೇಲ್ ವಿಮಾನದ ಬಿಡಿಭಾಗಗಳಿಂದ ವಾಚ್ ತಯಾರಿಸಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಈ ವೀಡಿಯೊವನ್ನು ಬೆಲ್ ಮತ್ತು ರಾಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಣ್ಣಾಮಲೈ ಧರಿಸಿರುವ ವಾಚ್ ಅನ್ನು ರಫೇಲ್ ವಿಮಾನದ ಭಾಗಗಳಿಂದ ತಯಾರಿಸಲಾಗಿದೆ  ಎಂಬುದಕ್ಕೆ ಯಾವುದೇ ಪುರಾವೆಗಳಾಗಲಿ ಆಧಾರಗಳಾಗಲಿ ಇಲ್ಲ. ಹಾಗಾಗಿ ಅಣ್ಣಾಮಲೈ ಪತ್ರಿಕಾಕೋಷ್ಠಿಯಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು ಎಂದು ತಿಳಿದುಬಂದಿದೆ.

ಕೃಪೆ: ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ದನ್ನು ಓದಿರಿ: ಫ್ಯಾಕ್ಟ್‌ಚೆಕ್: ಒಬ್ಬ ಬಾಯ್ ಫ್ರೆಂಡ್‌ಗಾಗಿ 5 ಹುಡುಗಿಯರ ಮಾರಾಮಾರಿ ನಡೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights