ಫ್ಯಾಕ್ಟ್‌ಚೆಕ್: ಬರೆದಿರುವ, ಗೀಚಿದ ನೋಟುಗಳನ ಬ್ಯಾನ್ ಮಾಡಿದೆಯೇ RBI?

ರೂಪಾಯಿ ನೋಟುಗಳ ಮೇಲೆ ಫೋನ್‌ನಂ, ಪ್ರೇಮ ನಿವೇದನೆ, ತಮ್ಮ ಪ್ರೀತಿ ಪಾತ್ರರ ಹೆಸರು ಹೀಗೆ ಏನೇನೋ ಬರೆಯುವುದನ್ನು ನೋಡಿದ್ದೇವೆ, ನೋಟಿನ ಮೇಲೆ ಬರೆದಿದ್ದರೆ ಅಂತಹ ನೋಟುಗಳನ್ನು ದಿನಸಿ ಅಂಗಡಿಗಳಲ್ಲಾಗಲಿ, BMTC/KSRTC ಬಸ್ಸುಗಳಲ್ಲಾಗಲಿ ಈಗಾಗಲೆ ತೆಗೆದುಕೊಳ್ಳುತ್ತಿರಲಿಲ್ಲ, ಇನ್ನು ಮುಂದೆ ಇಂತಹ ನೋಟುಗಳನ್ನು ಬಳಸದಂತೆ RBI ಕೂಡ ಆದೇಶಿಸಿದೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಚಲಾವಣೆಯಲ್ಲಿರುವ ನೋಟುಗಳ ಮೇಲೆ ಯಾವುದೇ ರೀತಿಯ ಬರಹ ಇದ್ದರೆ, ಆ ನೋಟು ಚಲಾವಣೆಗೆ ಯೋಗ್ಯವಲ್ಲ ಎಂದು ತಿಳಿಸುವ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ನೋಟುಗಳ ಮೇಲೆ ಬರೆಯದಿರಿ, ಹಾಳು ಮಾಡದಿರಿ ಎಂದು  ಆಗಾಗ ಎಚ್ಚರಿಸುತ್ತಲೇ ಇದ್ದರೂ ನೋಟುಗಳ ಮೇಲೆ ಅಕ್ಷರಗಳು ಅಥವಾ ಸಂಖ್ಯೆಯನ್ನು ಬರೆಯುವುದನ್ನು ಕೆಲವರು ರೂಢಿ ಮಾಡಿಕೊಂಡಿದ್ದಾರೆ. A stamp of fake on an image which claims that writing anything on new note makes the note invalid. The headline says that this claim is fake

‘ನೋಟುಗಳ ಮೇಲೆ ಯಾವುದೇ ರೀತಿಯ ಬರಹ ಕಂಡುಬಂದರೂ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತಿಳಿಸಿದೆ’ ಎಂಬುದಾಗಿ ಸಂದೇಶದಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಸಂದೇಶದಲ್ಲಿ ವೈರಲ್ ಆಗಿರುವ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ನೋಟುಗಳ ಮೇಲೆ ಬರಹಗಳನ್ನು ಬರೆದಿದ್ದರೆ ಅಂತ ನೋಟುಗಳನ್ನು ಚಲಾವಣೆ ಮಾಡದಂತೆ RBI ಅಮಾನ್ಯ ಮಾಡಿದೆಯೇ ಎಂದು  ಪರಿಶೀಲಿಸಿದಾಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಂತಹ ಯಾವುದೇ ಪ್ರಸ್ತಾಪವಾಗಲಿ, ಸುತ್ತೋಲೆಯಾಗಲಿ, ಪ್ರಕಟಣೆಯಾಗಲಿ ಬಂದಿಲ್ಲ ಎಂದು PIB ತಿಳಿಸಿದೆ. ಬರಹಗಳಿರುವ ನೋಟುಗಳನ್ನು ಚಲಾವಣೆ ಮಾಡಬಹುದು, ಎಲ್ಲಿಯೂ ಅದನ್ನು ಅಮಾನ್ಯ ಮಾಡಿರುವ ಬಗ್ಗೆ ಪ್ರಸ್ತಾಮ ಮಾಡಿಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು ಎಂದು ಪ್ರೆಸ್ ಇರ್ನ್ಫಮೇಷನ್ ಬ್ಯೂರೋ ಸ್ಪಷ್ಟಪಡಿಸಿದೆ.

ಬರಹ ಇರುವ ನೋಟುಗಳು ಚಲಾವಣೆಗೆ ಯೋಗ್ಯವಾಗಿವೆ. ಜನರು ನೋಟುಗಳ ಮೇಲೆ ಏನನ್ನೂ ಬರೆಯಬಾರದು ಎಂದು ಆರ್‌ಬಿಐ ಮನವಿ ಮಾಡಿದೆ. ಸ್ವಚ್ಛ ನೋಟು ನೀತಿಯ ಪ್ರಕಾರ, ನೋಟುಗಳ ಮೇಲೆ ಬರೆಯುವುದರಿಂದ ಅವು ವಿರೂಪಗೊಳ್ಳುತ್ತವೆ ಹಾಗೂ ಅವುಗಳ ಆಯಸ್ಸು ಕಡಿಮೆಯಾಗುತ್ತದೆ. ಹೀಗಾಗಿ ಜನರು ನೋಟುಗಳ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಲಾಗಿದೆ.

ರೂಪಾಯಿ ನೋಟಿನ ಮೇಲೆ ಇದನ್ನು ಮಾಡಬಾರದು:

  • ಯಾವುದೇ ಬ್ಯಾಂಕ್ ನೋಟಿಗೆ ಸ್ಟೇಪಲ್ ಪಿನ್ ಅದುಮದಿರಿ
  • ನೋಟುಗಳನ್ನು ಪೋಣಿಸಿ ಹಾರದಂತೆ ಮಾಡದಿರಿ
  • ಡೆಕೋರೇಶನ್ ಮಾಡಲು ನೋಟುಗಳನ್ನು ಬಳಸದಿರಿ
  • ಅಭಿಮಾನ ತೋರಲು ನೋಟುಗಳನ್ನು ಎರಚುವುದೋ, ನೆಲಕ್ಕೆ ಬಿಸುಡುವುದೋ ಇತ್ಯಾದಿ ಮಾಡದಿರಿ
  • ನೋಟುಗಳ ಮೇಲೆ ಬರೆಯದಿರಿ
  • ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ. ಹಿಂದೆ, ಬ್ಯಾಂಕಿನಲ್ಲಿರುವ ಸಿಬ್ಬಂದಿಯೇ ಸಾಮಾನ್ಯವಾಗಿ ನೋಟುಗಳ ಕಂತೆಗೆ ಸ್ಟೇಪಲ್ ಪಿನ್ ಚುಚ್ಚುವುದುಂಟು ಮತ್ತು ಎಣಿಕೆಗೆ ಸಹಾಯವಾಗಲು ಗುರುತಿಗೆ ನಂಬರ್ ಬರೆಯುತ್ತಿದ್ದುಂಟು. ಈಗ ರಬ್ಬರ ಬ್ಯಾಂಡ್ ಹಾಕಲಾಗುತ್ತದೆ ಮತ್ತು ಎಣಿಕೆಗೆ ಮೆಷೀನ್ ಕೂಡ ಇದೆ.
  • ಹಲವು ಕಾರಣಗಳಿಂದ ಒಂದು ನೋಟು ಕೆಲ ವರ್ಷಗಳ ಬಳಿಕ ಹಾಳಾದ ಸ್ಥಿತಿಗೆ ಬರುವುದುಂಟು. ಹಲವೊಮ್ಮೆ ನೋಟು ಹರಿದುಹೋಗುವುದುಂಟು. ಒಂದು ವೇಳೆ ಆ ರೀತಿ ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ನೋಟಿನ ನಂಬರ್ ಸರಿಯಾಗಿ ಕಾಣುವಂತಿದ್ದರೆ ಅದನ್ನು ಯಾವುದೇ ಬ್ಯಾಂಕಿಗೆ ಹೋಗಿ ಹೊಸ ನೋಟಿಗೆ ವಿನಿಮಯ ಮಾಡಬಹುದು.

ರೂಪಾಯಿ ನೋಟುಗಳ ಮೇಲೆ ಯಾವದೇ ರೀತಿಯ ಬರವಣಿಗೆ ಮಾಡಬಾರದು ಎಂಬುದು ಸಾಮಾನ್ಯ ಇಳುವಳಿಕೆ, ಆದರೆ ಜನಸಾಮಾನ್ಯರು ನೋಟಿನ ಮೇಲೆ ಬರಯುವುದನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದ ಪರಿಣಾಮ ಹಳೆಯ ನೋಟುಗಳ ಮೇಲೆ ಒಂದಿಲ್ಲೊಂದು ಬರಹಗಳು ಕಂಡುಬರುತ್ತವೆ. ಅಂತಹ ನೋಟುಗಳು ಬೇಗನೆ ಹಾಳಾಗುತ್ತವೆ ಆದ್ದರಿಂದ ನೋಟುಗಳ ಮೇಲೆ ಬರೆಯದಂತೆ RBI ಮನವಿ ಮಾಡಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಮದ್ಯ ಸೇವಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights