ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಮದ್ಯ ಸೇವಿಸಿದ್ದು ನಿಜವೇ?
ಕಳೆದ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಪಾದಯಾತ್ರೆ ಜನವರಿ 30ರಂದು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಂತ್ಯಗೊಳ್ಳಲಿದೆ. ಕಣಿವೆ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಇಲ್ಲಿನ ಪ್ರಮುಖ ರಾಜಕೀಯ ನಾಯಕರಾದ ನ್ಯಾಷನಲ್ ಕಾನ್ಫರೆನ್ಸ್ನ ಫಾರುಖ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಾಬೂಬ್ ಮುಫ್ತಿ, ಸಿಪಿಐ (ಎಂ)ನ ಮೊಹದ್ ಯೂಸಫ್ ತರಿಗಾಮಿ ಕೂಡ ರಾಹುಲ್ ಗಾಂಧಿ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
ಇದೀಗ ಭಾರತ್ ಜೋಡೋ ಯಾತ್ರೆ ಹರಿಯಾಣದಲ್ಲಿ ಸಾಗುತ್ತಿದ್ದು, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಮೂಲಕ ಜನವರಿ 20ರಂದು ಜಮ್ಮು ಮತ್ತು ಕಾಶ್ಮೀರ ತಲುಪಲಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಆಹಾರ ಸೇವಿಸುತ್ತಿರುವ ಫೋಟೋವೊಂದು ವೈರಲ್ ಆಗಿದೆ.
तपस्वी, तपस्या में लीन है ।। pic.twitter.com/6ABYuTrIws
— कुँवर निर्विकार सिंह (@NirvikarRana) January 9, 2023
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದ್ಯ ಸೇವಿಸಿ, ಮಾಂಸಹಾರ (ಚಿಕನ್) ಸೇವಿಸಿದ್ದಾರೆ ಎಂದು ರಾಹುಲ್ ಗಾಂಧಿಯವರ ಟೇಬಲ್ ಮೇಲೆ ಆಹಾರ ಮತ್ತು ಮದ್ಯದ ಲೋಟವನ್ನು ಇರಿಸಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ”ತಪಸ್ವಿ, ತಪಸ್ಸಿನಲ್ಲಿ ಮುಳುಗಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವ್ಯಂಗ್ಯವಾಗಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯಲ್ಲಿ ಮದ್ಯ ಮತ್ತು ಚಿಕನ್ ಡ್ರಮ್ ಸ್ಟಿಕ್ ನಂತಹ ಆಹಾರವನ್ನು ಸೇವಿಸಿದ್ದು ನಿಜವೇ ಎಂದು ಪರಿಶೀಲಿಸಲು ವೈರಲ್ ಪೋಟೋವನ್ನು ಟ್ವಿಟರ್ ಮೂಲಕ ಸರ್ಚ್ ಮಾಡಿದಾಗ, ಚಿತ್ರವನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.
https://twitter.com/_garrywalia/status/1612038778536824837?ref_src=twsrc%5Etfw%7Ctwcamp%5Etweetembed%7Ctwterm%5E1612038778536824837%7Ctwgr%5E515d73ac1cd843293a6fc7e0618a019f38519b3b%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Frahul-gandhi-having-alcohol-and-chicken-during-bharat-jodo-yatra-2319195-2023-01-09
ಗುರುಪ್ರೀತ್ ಗ್ಯಾರಿ ವಾಲಿಯಾ ಎಂಬ ದೃಢೀಕೃತ ಟ್ವಿಟರ್ ಬಳಕೆದಾರರ ಟ್ವೀಟ್‌ನಲ್ಲಿ, ಅವರ ಪ್ರೊಫೈಲ್ ಬಯೋದಲ್ಲಿ ಪತ್ರಕರ್ತ ಎಂದು ಬರೆದುಕೊಂಡಿದ್ದಾರೆ. ಫೋಟೊದಲ್ಲಿ ರಾಹುಲ್ ಗಾಂಧಿಯವರ ಮುಂದಿನ ಟೇಬಲ್‌ನಲ್ಲಿ ಗಾಜಿನ ಲೋಟದಲ್ಲಿ ಚಹಾ ಜೊತೆಗೆ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ಇಡಲಾಗಿದೆ.

ಜನವರಿ 8 ರ ಈ ಟ್ವೀಟ್ ನಲ್ಲಿ ಹೀಗೆ ಬರೆಯಲಾಗಿದೆ. “ಭಕ್ತರು ಚಿತ್ರದಲ್ಲಿ ಯಾವುದೇ ನ್ಯೂನತೆಗಳನ್ನು ಕಂಡುಕೊಳ್ಳಬಹುದೇ ಎಂದು ಪರಿಶೀಲಿಸಲು ಅದನ್ನು ಜೂಮ್ ಮಾಡಬೇಕು.” ಎರಡೂ ಚಿತ್ರಗಳನ್ನು ಹೋಲಿಸಿದಾಗ ಒಂದು ಗ್ಲಾಸ್ ಆಲ್ಕೋಹಾಲ್ ಮತ್ತು ಚಿಕನ್ ಪ್ಲೇಟ್ ಅನ್ನು ನಂತರ ಮೂಲ ಚಿತ್ರಕ್ಕೆ ಡಿಜಿಟಲ್ ಆಗಿ ಸೇರಿಸಲಾಯಿತು ಎಂದು ಸ್ಪಷ್ಟಪಡಿಸಿದೆ.

ಮತ್ತಷ್ಟು ಮಾಹಿತಿಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ಜನವರಿ 9 ರಂದು ಪ್ರಕಟವಾದ ಟೈಮ್ಸ್ ನೌ ವರದಿಯು ಈ ಯಾತ್ರೆಯ ಮೂಲಕ ಗಾಂಧಿಯವರ ಆಹಾರಕ್ರಮವನ್ನು ಡಿಕೋಡ್ ಮಾಡುವುದನ್ನು ನಾವು ನೋಡಿದ್ದೇವೆ. ಈ ವರದಿಯಲ್ಲಿ ಪತ್ರಕರ್ತ ಪರಂಜಾಯ್ ಗುಹಾ ಠಾಕುರ್ತಾ ಅವರು ಕೆಫೆಯೊಳಗೆ ಚಿತ್ರೀಕರಿಸಿದ ರಾಹುಲ್ ಗಾಂಧಿಯವರ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.
It was sheer coincidence: travelling to Punjab this morning, I crossed the Bharat Jodo Yatra. With some difficulty and a scuffle, I was able to meet Rahul Gandhi while he was eating at a dhaba a few kms from Karnal. We discussed politics, economics and India’s richest men.. 1/2 pic.twitter.com/yg4394bFfT
— ParanjoyGuhaThakurta (@paranjoygt) January 7, 2023
ಜನವರಿ 7 ರಿಂದ ಪ್ರತಿ ಗುಹಾ ಠಾಕುರ್ತಾ ಅವರ ಟ್ವೀಟ್ ಮಾಡಿದ್ದು, ಯಾತ್ರೆಯು ಪಂಜಾಬ್ ಅನ್ನು ದಾಟುವ ಸಂದರ್ಭದಲ್ಲಿ ಅವರು ಗಾಂಧಿಯನ್ನು ಭೇಟಿಯಾದ ಫೋಟೊವನ್ನು ಹಂಚಿಕೊಂಡಿದ್ದಾರೆ. ಹರಿಯಾಣದ ಕರ್ನಾಲ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಧಾಬಾದಲ್ಲಿ ಗಾಂಧಿ ಊಟ ಮಾಡುತ್ತಿದ್ದಾಗ ಅವರು ಭೇಟಿಯಾದರು ಎಂದು ಠಾಕುರ್ತಾ ಉಲ್ಲೇಖಿಸಿದ್ದಾರೆ.
ರಾಹುಲ್ ಗಾಂಧಿ ಮಾಂಸ ತಿನ್ನುತ್ತಾರೋ ಅಥವಾ ಮದ್ಯ ಸೇವಿಸುತ್ತಾರೋ ಎಂಬುದು ಚರ್ಚೆಯಾಗಬೇಕಾದ ವಿಷಯವೇ ಅಲ್ಲ. ಮತ್ತು ಅದು ಅಪರಾಧವೂ ಅಲ್ಲ. ಆದರೆ ವಾಸ್ತವವಾಗಿ ವೈರಲ್ ಆಗಿರುವ ಚಿತ್ರವನ್ನು ಫೋಟೋಶಾಪ್ ಮಾಡಲ್ಪಟ್ಟಿದೆ ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ ಭಾರತ್ ಜೋಡೊ ಯಾತ್ರೆ ಕೇರಳದಲ್ಲಿ ಇದ್ದ ಸಂದರ್ಭದಲ್ಲೂ ಇದೇ ರೀತಿಯ ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಎಡಿಟ್ ಮಾಡಿದ ಫೋಟೊವನ್ನು ಹಂಚಿಕೊಳ್ಳಲಾಗಿತ್ತು. ದನ್ನು ಕೂಡ ಹಾಗೆಯೇ ಮಾಡಲಾಗದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸೈಕಲ್ ರಿಕ್ಷಾ ಓಡಿಸಿ ಮಗಳನ್ನು ASI ಮಾಡಿಸಿದ ತಂದೆ ಎಂಬುದು ನಿಜವೇ?

