ಫ್ಯಾಕ್ಟ್‌ಚೆಕ್ : ತ್ರಿವರ್ಣ ಧ್ವಜದ ಬಣ್ಣಗಳ ಶೂಸ್ ತಯಾರಿಸಿದ ಹಳೆಯ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

‘ಕ್ಯಾಂಪಸ್ ಶೂಸ್’ ಕಂಪನಿ ತನ್ನ ಶೂಗಳಿಗೆ ಭಾರತದ ತ್ರಿವರ್ಣ ಧ್ವಜದ ಕೇಸರಿ ಬಿಳಿ ಮತ್ತು ಹಸಿರು ಬಣ್ಣಗಳನ್ನು ಸೋಲ್‌ಗಳಿಗೆ ಬಳಕೆ ಮಾಡುವ ಮೂಲಕ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಶೂಗಳ ಸೋಲ್‌ಗಳ ( ಅಡಿಭಾಗದಲ್ಲಿ) ಮೇಲೆ ಭಾರತೀಯ ತ್ರಿವರ್ಣ ಧ್ವಜವನ್ನು ಹೊಂದಿರುವ ಶೂಗಳನ್ನು ‘ಕ್ಯಾಂಪಸ್ ಶೂಸ್’ ಮಾರುಕಟ್ಟೆಗೆ ಪರಿಚಯಿಸಿದೆ ಎಂವ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಇದು ಭಾರತೀಯ ಧ್ವಜ ಸಂಹಿತೆ, 2002 ರ ಉಲ್ಲಂಘಿನೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, 2021ರಲ್ಲಿ ಮಾಡಲಾದ ಇದೇ ರೀತಿಯ ಟ್ವೀಟ್‌ಗಳು ಲಭ್ಯವಾಗಿದ್ದು, @Akyadav1211 ಎಂಬ ಟ್ವಿಟರ್ ಬಳಕೆದಾರರು ನವೆಂಬರ್ 22, 2021 ಹಂಚಿಕೊಂಡ ಪೋಸ್ಟ್‌ಗೆ ನವೆಂಬರ್ 23, 2021 ರಂದು  ಕ್ಯಾಂಪಸ್ ಶೂಸ್ ನೀಡಿದ ಪ್ರತ್ಯುತ್ತರದಲ್ಲಿ ಈ ಪ್ರಮಾದಕ್ಕೆ ಕ್ಷಮೆಯಾಚಿಸಿ ಪೋಸ್ಟ್‌ ಮಾಡಿದೆ. ತಕ್ಷಣದಿಂದಲೇ ತನ್ನ ಮಾರಾಟ ಮಳಿಗೆಗಳ ನೆಟ್ವರ್ಕ್‌ ನಿಂದ ಈ ಸರಕುಗಳನ್ನು(ಶೂಸ್‌ಗಳನ್ನು) ಕಂಪನಿ ಹಿಂತೆಗೆದುಕೊಂಡಿದೆ” ಮತ್ತು ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೋರಿ ಮರು ಟ್ವೀಟ್ ಮಾಡಿದೆ.

ಕ್ಯಾಂಪಸ್ ಶೂಸ್‌ನ ವಿವಾದಾತ್ಮಕ ಭಾರತ ತ್ರಿವರ್ಣ-ಧ್ವಜದ ಬಣ್ಣಗಳಾದ ಕೇಸರಿ ಬಿಳೆ ಮತ್ತು ಹಸಿರನ್ನು ಬಳಕೆ ಮಾಡಿಕೊಂಡು ಶೂ ವಿನ್ಯಾಸ ಮಾಡಿದ ಕಾರಣಕ್ಕೆಕ್ಷಮೆ ಯಾಚಿಸಿ ಎಲ್ಲಾ ಸರಕುಗಳನ್ನು ತಮ್ಮ ಶೋರೂಮ್ ಮತ್ತು ಮಾರಾಟ ಮಳಿಗೆಗಳಿಂದೆ ಹಿಂತೆಗೆದುಕೊಂಡಿತ್ತು. ಇದು 2021ರಲ್ಲಿ ನಡೆದ ಘಟನೆಯಾಗಿತ್ತು.

ಫೆಬ್ರವರಿ 10, 2023 ರಂದು ಕಂಪನಿಯ ಹೇಳಿಕೆಯನ್ನು ಮತ್ತೊಮ್ಮೆ ಪಿನ್ ಮಾಡಿದ್ದು. 2021ರ ಹಳೆಯ ಫೋಟೋಗಳು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಹಂಚಿಕೊಳ್ಳಲಾಗಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ‘ಕ್ಯಾಂಪಸ್ ಶೂ’ ಕಂಪನಿಯಿಂದ ತಯಾರಿಸಲ್ಪಟ್ಟ ಶೂ ಗಳನ್ನು ಕೇಸರಿ ಬಿಳಿ ಮತ್ತು ಹಸಿರು (ಭಾರತದ ತ್ರಿವರ್ಣ ಧ್ವಜ) ಬಣ್ಣಗಳಲ್ಲಿ ವಿನ್ಯಾಸಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಹಲವು ಆಕ್ಷೇಪಗಳು ವ್ಯಕ್ತವಾದ ಹಿನ್ನಲೆಯಲ್ಲಿ ಕಂಪನಿಯೂ ಕ್ಷಮೆ ಕೇಳಿ ಎಲ್ಲಾ ಶೂಗಳನ್ನು ಹಿಂಪಡೆದುಕೊಂಡಿತ್ತು. ಈಗ ಅದೇ ಹಳೆಯ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಇತ್ತೀಚಿನ ಘಟನೆ ಎಂಬಂತೆ ಬಿಂಬಿಸಲಾಗಿದೆ. ಆದರೆ ಇದು ಹಳೆಯ ಘಟನೆ ಎಂದು ಕ್ಯಾಂಪಸ್‌ ಶೂ ಸ್ಪಷ್ಟನೆ ನೀಡಿದೆ.

ಕೃಪೆ: ನ್ಯೂಸ್ ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಷ್ಯಾ ಅಧ್ಯಕ್ಷ ಪುಟಿನ್ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಫೋಟೊ ಹಾಕಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights