ಫ್ಯಾಕ್ಟ್‌ಚೆಕ್ : ಚಾರ್ಜ್‌ನಲ್ಲಿಟ್ಟ ಮೊಬೈಲ್‌ನಲ್ಲಿ ಮಾತನಾಡುತ್ತಾ ನೀರು ಕುಡಿಯುತ್ತಿದ್ದ ವ್ಯಕ್ತಿಯೊಬ್ಬ ಸಾವನಪ್ಪಿದ್ದಾನೆ ಎಂಬ ವಿಡಿಯೋದ ವಾಸ್ತವವೇನು?

ವ್ಯಕ್ತಿಯೊಬ್ಬ ತನ್ನ ಫೋನ್‌ಅನ್ನು ಚಾರ್ಜ್‌ನಲ್ಲಿಟ್ಟು ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋ ವೈರಲ್ ಆಗಿದೆ. ಆತ ಫೋನ್‌ನಲ್ಲಿ ಮಾತನಾಡುತ್ತಾ ನೀರು ಕುಡಿಯುವಾಗ ಫೋನ್ ಸ್ಫೋಟಗೊಂಡಿದೆ ಎಂದು ಪ್ರತಿಪಾದಿಸಿ ವಿಡಿಯೋ ಪೋಸ್ಟ್‌ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. “ಇದು ಅಪಾಯಕಾರಿ! ನೀರು ಕುಡಿಯುವ ವೇಳೆ ಚಾರ್ಜ್‌ನಲ್ಲಿರುವ ನಿಮ್ಮ ಫೋನ್ ಅನ್ನು ಬಳಸುವಾಗ ಎಲ್ಲರೂ ಕಾಳಜಿ ವಹಿಸಿ. ಮೆದುಳು ಕೂಡ ಆಘಾತಕ್ಕೊಳಗಾಗುವ ಸಾಧ್ಯತೆ ಇದೆ” ಎಂದು ಬರೆಯಲಾಗಿದೆ.

ಫೇಸ್‌ಬುಕ್‌ ಪೇಜ್‌ ನಲ್ಲಿ ಈ ವಿಡಿಯೊವನ್ನು ವ್ಯಾಪಕವಾಗಿ ಪೋಸ್ಟ್ ಮಾಡಲಾಗಿದೆ.

 

ಈ ವಿಡಿಯೋವನ್ನು ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ತಿಳಿಸಿವಂತೆ ಸಾಮಾಜಿಕ ಮಧ್ಯಮ ಬಳಕೆದಾರರು ಏನ್‌ಸುದ್ದಿ.ಕಾಂಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ.  ಹಾಗಾಗಿ ಈ ವೈರಲ್ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇದು ಸ್ಕ್ರಿಪ್ಟೆಂಡ್‌ ವಿಡಿಯೋ ಎಂದು ತಿಳಿದು ಬಂದಿದೆ.

ಇದರ ಮೂಲ ವಿಡಿಯೋವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಗುಟ್ಟಾ ಜ್ವಾಲಾ ಪೋಸ್ಟ್ ಮಾಡಿದ್ದಾರೆ. ‘ಎಚ್ಚರಿಕೆಯಿಂದಿರಿ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಈ ಫೇಸ್‌ಬುಕ್ ಫೇಜ್‌ನಲ್ಲಿ ಹಲವು ಸ್ಕ್ರಿಪ್ಟ್‌ ಮಾಡಿದ ವಿಡಿಯೋಗಳನ್ನು ಪೋಸ್ಟ್‌ ಮಾಡಲಾಗಿದೆ. ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ. ದಯವಿಟ್ಟು ಗಮನಿಸಿ ಎಂಬ ಡಿಸ್‌ಕ್ಲೈಮ್‌ನೊಂದಿಗೆ ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ!” ಎಂದು ಬರೆಯಾಗಿದೆ.

‘ಚಾರ್ಜ್‌ನಲ್ಲಿ ಇಟ್ಟ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತ ನೀಡು ಕುಡಿಯುವಾಗ ಮೊಬೈಲ್ ಸ್ಫೋಟಗೊಂಡಿದೆ’ ಎಂಬ ಹೇಳಿಕೆಯನ್ನು ಉಪಶೀರ್ಷಿಕೆಯಾಗಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಓದುಗರು ಸೂಕ್ಷ್ಮವಾಗಿ ಗಮನಿಸಬೇಕು. ವಾಸ್ತವವಾಗಿ ವಿಡಿಯೋದಲ್ಲಿ ನಿಜವಾದ ಸ್ಫೋಟ ನಡೆಯುತ್ತಿಲ್ಲ ಮತ್ತು ಸಿಸಿ ಟಿವಿಯನ್ನು ಅಳವಡಿಸಿಲ್ಲ ಈ ದೃಶ್ಯಗಳನ್ನು ಇತರೆ ಉದ್ದೇಶಗಳಿಗೆ ಚಿತ್ರೀಕರಿಸಿರುವುದು ಸ್ಪಷ್ಟವಾಗಿದೆ.

ವೈರಲ್ ವಿಡಿಯೋ ನೈಜ ಘಟನೆಯಲ್ಲ

ಸ್ಕ್ರಿಪ್ಟ್ ಮಾಡಿದ ವಿಡಿಯೊವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋದಲ್ಲಿ ಇದು ಸ್ಕ್ರಿಪ್ಟೆಡ್ ವಿಡಿಯೋ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ವಿಡಿಯೋದ ಕೊನೆಯಲ್ಲಿ ಡಿಸ್‌ಕ್ಲೈಮ್‌ಅನ್ನು ಕಾಣಬಹುದು. ವಿಡಿಯೋವನ್ನು ಜಾಗೃತಿ ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಅಪ್‌ಲೋಡ್‌ ಮಾಡಲಾಗಿದೆ ಎಂದು ತಿಳಿಸಿಲಾಗಿದೆ. ಹಾಗಾಗಿ ಇದು ಸ್ಕ್ರಿಪ್ಟೆಡ್ ಮಾಡಲಾದ ವಿಡಿಯೋ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚಾರ್ಜ್‌ನಲ್ಲಿಟ್ಟ ಮೊಬೈಲ್‌ ಫೋನ್‌ನಲ್ಲಿ ಮಾತನಾಡುವಾಗ ಫೋನ್‌ ಸ್ಪೋಟಗೊಂಡಿರುವ ವರದಿಗಳಾಗಿವೆ. ಆದರೆ, ಚಾರ್ಜ್‌ನಲ್ಲಿಟ್ಟ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಾ ನೀರು ಕುಡಿಯುವಾಗ ಸ್ಪೋಟಗೊಂಡಿರುವ ಬಗ್ಗೆ ಯಾವುದೇ ಘಟನೆಯು ವರದಿಯಾಗಿಲ್ಲ. ಆದರೂ, ಮೊಬೈಲ್‌ ಫೋನ್‌ ಜಾರ್ಜ್‌ನಲ್ಲಿದ್ದಾಗ ಫೋನ್‌ನಲ್ಲಿ ಮಾತನಾಡುವುದು ಸೂಕ್ತವಲ್ಲ ಮತ್ತು ಅಪಾಯಕಾರಿ ಎಂಬುದನ್ನು ಅರಿತಿರಬೇಕು. ವಿಜ್ಞಾನದ ಆವಿಷ್ಕಾರಗಳು ಮುಂದುವರೆದಂತೆ ಮಹತ್ತರವಾದ ಬದಲಾವಣೆಗಳು ಬೆಳವಣಿಗೆಳು ಆಗುತ್ತಿವೆ ಅವುಗಳನ್ನು ಉಪಯೋಗಿಸಿವಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ.

ಕೃಪೆ: ಆಲ್ಟ್‌ನ್ಯೂಸ್‌

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನೂ ಓದಿ: ಫ್ಯಾಕ್ಟ್‌ಚೆಕ್ : ತ್ರಿವರ್ಣ ಧ್ವಜದ ಬಣ್ಣಗಳ ಶೂಸ್ ತಯಾರಿಸಿದ ಹಳೆಯ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights