ಫ್ಯಾಕ್ಟ್ಚೆಕ್ : ಇದು ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವೇ?
4 ಜನರ ಮಹಿಳೆಯರ ಗುಂಪೊಂದು ಕೈಯಲ್ಲಿ ಬಂದೂಕುಗಳನ್ನಿಡಿದು ಕಾರಿನಲ್ಲಿ ಕುಳಿತಿರುವ ಹಳೆಯ ಚಿತ್ರ ಮತ್ತು ಮರುಸೃಷ್ಟಿಸಿದ ಫೋಟೋದ ಕೊಲಾಜ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅದೇ ವಿಲ್ಲಿಸ್ ಜೀಪ್ನಲ್ಲಿ ತಮ್ಮ 1971 ರ ಛಾಯಾಚಿತ್ರವನ್ನು ಮರುಸೃಷ್ಟಿಸಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
Four Bangladeshi freedom fighters recreate their 1971 photograph in the same Willy's Jeep. pic.twitter.com/5FUxfJThFC
— K J Singh (@kjsingh2) March 27, 2023
ಇದೇ ಚಿತ್ರವನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದ್ದು, ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದ ನಂತರ ಬಾಂಗ್ಲಾದೇಶದ ಮಹಿಳೆಯರು ತಲೆಗೆ ಸ್ಕಾರ್ಫ್ ಧರಿಸಿ ಇಸ್ಲಾಂ ಧರ್ಮವನ್ನು ಅನುಸರಿಸಿದ್ದಕ್ಕಾಗಿ ಅಪಹಾಸ್ಯ ಮಾಡುವ ಶೀರ್ಷಿಕೆಗಳೊಂದಿಗೆ ಅದೇ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಹಾಗಿದ್ದರೆ ಈ ಫೋಟೊದಲ್ಲಿ ಇರುವ ಮಹಿಳೆಯರು ನಿಜವಾಗಿಯೂ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರು ಎಂಬುದು ನಿಜವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ‘yesterdaytoday’ ಎಂಬ ವೆಬ್ಸೈಟ್ನಲ್ಲಿ “1960 ರ ಸಂಪುಟ 6 ರಿಂದ 50 ಅದ್ಭುತ ವಿಂಟೇಜ್ ಫೋಟೋಗಳು” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಚಿತ್ರ ಕಂಡುಬಂದಿದೆ. ಫೋಟೋದಲ್ಲಿ “ಬಾಂಗ್ಲಾದೇಶಿ ಮಹಿಳೆಯರು ಒಂದು ಹಳ್ಳಿಯಲ್ಲಿ ಬಂದೂಕುಗಳೊಂದಿಗೆ ಪೋಸ್ ನೀಡುತ್ತಿರುವ ಚಿತ್ರ ಲಭ್ಯವಾಗಿದೆ.
ರಿವರ್ಸ್ ಸರ್ಚ್ನ ಇನ್ನೊಂದು ಫಲಿತಾಂಶವು ಜುಲೈ 2013 ರಲ್ಲಿ ‘Bangladesh Old Photo Archive’ ಎಂಬ ಫೇಸ್ಬುಕ್ ಪುಟದಿಂದ ಪೋಸ್ಟ್ ಮಾಡಿದ ಚಿತ್ರವೊಂದು ಲಭ್ಯವಾಗಿದೆ, “ಮಹಿಳೆಯರು ಪ್ರವಾಸಕ್ಕೆಂದು ತಮ್ಮ ಹಳ್ಳಿಗೆ ಬಂದಾಗ ಗನ್ ಹಿಡಿದು ಪೋಸ್ ನೀಡುತ್ತಿರುವ ಚಿತ್ರ ಎಂಬ ಶೀರ್ಷಿಕೆಯೊಂದಿಗೆ ರೆಹಾನ್ ಅಹ್ಮದ್ ಎಂಬ ಫೇಸ್ಬುಕ್ ಬಳಕೆದಾರರ ಪ್ರೊಫೈಲ್ನಲ್ಲಿ ಈ ಫೋಟೋ ಕಂಡುಬಂದಿದೆ.
ರೆಹಾನ್ ಅಹ್ಮದ್ ಅವರ ಪ್ರೊಫೈಲ್ ಅನ್ನು ಸರ್ಚ್ ಮಾಡಿದಾಗ, ಅವರು ಆಗಸ್ಟ್ 2020 ರಲ್ಲಿ ಅದೇ ಚಿತ್ರವನ್ನು ಪೋಸ್ಟ್ ಮಾಡುವುದು ಕಂಡುಬಂದಿದೆ. ಈ ಫೇಸ್ಬುಕ್ ಪೋಸ್ಟ್ನ ಕಾಮೆಂಟ್ ವಿಭಾಗದಲ್ಲಿ ಫೋಟೋ ವಿವರಗಳನ್ನು ನೀಡಲಾಗಿದೆ. ಫೋಟೋದಲ್ಲಿರುವ ಜನರನ್ನು ಗುರುತಿಸಲು ಕೇಳಿದ ಕಾಮೆಂಟ್ಗೆ, ಪ್ರತಿಕ್ರಿಯಿಸಿರುವ ರೆಹಾನ್ ಅಹ್ಮದ್ ಅವರು ತಮ್ಮ ಅಜ್ಜಿ ಮತ್ತು ಇತರರ ಚಿತ್ರವನ್ನು 1961 ರಲ್ಲಿ ಅವರ ಅಜ್ಜ ತೆಗೆದಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತು ಅದನ್ನು 2017 ರಲ್ಲಿ ಮರುಸೃಷ್ಟಿಸಲಾಗಿದೆ. ಹಾಗಾಗಿ ವೈರಲ್ ಫೋಟೋದಲ್ಲಿರುವ ಮಹಿಳೆಯರು, ಸ್ವಾತಂತ್ರ ಹೋರಾಟಗಾರರಲ್ಲ ಎಂಬುದು ಸ್ಪಷ್ಟವಾಗಿದೆ.
ವೈರಲ್ ಚಿತ್ರ ಬಗ್ಗೆ ಮಾತನಾಡಿದ ರಿಫತ್ ಅಹಮದ್, “ನನ್ನ ಹಿರಿಯ ಮಗನ ಮದುವೆ ಸಮಯದಲ್ಲಿ, ನಾವು ಎರಡೂ ಕುಟುಂಬಗಳಿಂದ ಹಳೆಯ ಫೋಟೋಗಳನ್ನು ತಂದು ಮರುಮುದ್ರಣ ಮಾಡಿದ್ದೇವೆ. ಅವುಗಳನ್ನು ನೋಡಿದ ಎಲ್ಲರು ಮೆಚ್ಚಿ ಭಾವುಕರಾದರು. 2017 ರಲ್ಲಿ ಎಲ್ಲಾ ನಾಲ್ವರು ಮಹಿಳೆಯರು ಸೇರಿ ಈ ಚಿತ್ರವನ್ನು ರಚಿಸಿದೆವು. ಛಾಯಾಚಿತ್ರದಲ್ಲಿ ಇರುವ ಮಹಿಳೆಯರಲ್ಲಿ ಆಯೇಶಾ ಅಹ್ಮದ್, ರೋಕಿಯಾ ಅಹ್ಮದ್, ರಶೀದಾ ಅಹ್ಮದ್ ಮತ್ತು ಶಹನಾರಾ ಅಹ್ಮದ್ ಇದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರು ತೆಗೆಸಿದ ಪೋಟೊವನ್ನು ಮತ್ತೆ ಅದೇ ವಿಲ್ಲಿಸ್ ಜೀಪ್ನಲ್ಲಿ ಕುಳಿತು ಛಾಯಾಚಿತ್ರವನ್ನು 2023ರಲ್ಲಿ ಮರುಸೃಷ್ಟಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವಾಗಿ ಇವರ್ಯಾರು ಸ್ವಾತಂತ್ರ ಹೋರಾಟಗಾರರಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪಾಕಿಸ್ತಾನದಲ್ಲೂ ಅರಳಿದ ಕಮಲ ಎಂದು ಸುಳ್ಳು ವಿಡಿಯೋ ಹಂಚಿಕೊಂಡ BJP ಬೆಂಬಲಿಗರು

