ಫ್ಯಾಕ್ಟ್‌ಚೆಕ್ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೋದಿಯನ್ನು ಹೊಗಳಿ ಟ್ವೀಟ್ ಮಾಡಿಲ್ಲ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎರಡು ಟ್ವೀಟ್‌ಗಳ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೋದಿಯವರಂತೆ ಪ್ರಧಾನಿಯಾಗಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಾಜಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿರುವ ಟ್ವೀಟ್ ಪ್ರಸಾರವಾಗುತ್ತಿದೆ.
ನಾನು ಕೂಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು ಆದರೆ ಕಾಂಗ್ರೆಸ್ ನನ್ನನ್ನು ಸ್ವಂತ ಕೆಲಸ ಮಾಡಲು ಬಿಡುತ್ತಿರಲಿಲ್ಲ, ನರೇಂದ್ರ ಮೋದಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಅದಕ್ಕಾಗಿಯೇ ದೇಶವು ಪ್ರಗತಿಯಲ್ಲಿದೆ. ಮೋದಿಯಂತಹ ನಾಯಕ ಇಡೀ ಜಗತ್ತಿನಲ್ಲಿ ಮತ್ತೆ ಹುಟ್ಟುವುದಿಲ್ಲ. – ಮನಮೋಹನ್ ಸಿಂಗ್’ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಇದನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಕ್ಷ ರಾಜಕಾರಣ ಮರೆತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅವರ ಟ್ವೀಟ್ ವೈರಲ್ ಆಗಿದೆ. ಲೋಕೇಶ್ ಕುಮಾರ್ ಆರ್ಯ ಎಂಬ ಫೇಸ್‌ಬುಕ್ ಬಳಕೆದಾರೊಬ್ಬರು ಜೂನ್ 6 ರಂದು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ, “ನಾನು ಏನನ್ನು ಹೇಳಲಿ, ಮನಮೋಹನ್ ಸಿಂಗ್ ಅವರೇ ಎಲ್ಲವನ್ನೂ ಹೇಳಿದ್ದಾರೆ. ಕಾಂಗ್ರೆಸಿಗರೇ, ಈಗ ನಿಮ್ಮ ಯೋಗ್ಯತೆ ಬಯಲಾಗಿದೆ” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ರೀತಿ ಮನಮೋಹನ್ ಸಿಂಗ್ ಮೋದಿ ಕುರಿತು ಹೇಳಿಕೆ ನೀಡಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಟ್ವಿಟರ್‌ನಲ್ಲಿ ಸರ್ಚ್ ಮಾಡಿದಾಗ, ಈ ಚಿತ್ರವು 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದು ಕಂಡುಬಂದಿದೆ. ಮತ್ತು ಇದರ ಮೂಲ ಪೋಸ್ಟ್‌ಗಳನ್ನು 2021 ಸೆಪ್ಟೆಂಬರ್ 23 ಮತ್ತು 24 ರಂದು manmohan_5 ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಪೋಸ್ಟ್ ಮಾಡಿದ ಟ್ವಿಟ್ಟರ್ ಐಡಿಯನ್ನು (manmohan_5) ಸರ್ಚ್ ಮಾಡಿದ ನಂತರ ತಿಳಿದುಂದ ಸಂಗತಿ ಏನೆಂದರೆ ಅದು ನಕಲಿ ಐಡಿ ಮತ್ತು ಈಗ ಬಳಕೆಯಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿದೆ. ಇದಕ್ಕೂ ಮುನ್ನ ಮನಮೋಹನ್ ಸಿಂಗ್ ಹೆಸರಿನಲ್ಲಿ ಟ್ವಿಟ್ಟರ್ ನಲ್ಲಿ ಹಲವು ನಕಲಿ ಪೋಸ್ಟ್ ಗಳು ಹರಿದಾಡಿದ್ದವು. ಅವರ ಹೆಸರಿನಲ್ಲಿರುವ ನಕಲಿ ಟ್ವಿಟರ್ ಖಾತೆಗಳ ವಿವರಗಳು ಈ ಕೆಳಗಿನಂತಿವೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಕಲಿ ಖಾತೆಗಳ ಬಗ್ಗೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕ ಸರಳ್ ಪಟೇಲ್ ಅವರು ಟ್ವೀಟ್ ಮಾಡಿದ್ದಾರೆ, “ಹಿಂದೆ, ಮನಮೋಹನ್ ಸಿಂಗ್ ಅವರ ಬಗ್ಗೆ ಕೆಲವು ಟ್ವೀಟ್‌ಗಳನ್ನು ಸುಳ್ಳು ಹೇಳಲಾಗಿತ್ತು, ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಟ್ವಿಟರ್ ಖಾತೆಗಳನ್ನು ಹೊಂದಿಲ್ಲ. ಒಂದು ವೇಳೆ ಅವರು ಟ್ವಿಟರ್‌ಗೆ ಬರಲು ಇಚ್ಛಿಸಿದರೆ ಅದು ಪರಿಶೀಲಿಸಿದ ಮತ್ತು ಅಧಿಕೃತ ಟ್ವಿಟರ್ ಖಾತೆ ಆಗಿರುತ್ತದೆ. ಆದರೆ ಇವು ನಕಲಿ ಖಾತೆ ಇವುಗಳನ್ನು ಅನುಸರಿಸಬೇಡಿ ಎಂದು ಉಲ್ಲೇಖಿಸಿದ್ದಾರೆ.
Tired of people asking, If this account is authentic or not. This is not the first time and won't be the last, so making it clear for once and all.
If Sonia Ji or MMS Ji decides to come on Twitter, They will have a VERIFED twitter account.
So please don't follow fake accounts. https://t.co/O7vwVrYaxX
— Saral Patel (@SaralPatel) June 19, 2020
ಒಟ್ಟಾರೆಯಾಗಿ ಹೇಳುವುದಾದರೆ, ವಾಸ್ತವವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ವಯಕ್ತಿಕ ಟ್ವಿಟರ್ ಖಾತೆಯನ್ನು ಹೊಂದಿಲ್ಲ. ವೈರಲ್ ಟ್ವೀಟ್‌ಗಳಲ್ಲಿ ನಕಲಿಯಾಗಿದೆ. ಮನಮೋಹನ್ ಸಿಂಗ್ ಅವರು ನರೇಂದ್ರ ಮೋದಿ ಅವರನ್ನು ಹೊಗಳಿ ಟ್ವೀಟ್ ಮಾಡಿದಂತೆ ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಇದು ನಕಲಿ ಟ್ವೀಟ್ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಗುಜರಾತ್‌ನಲ್ಲಿ ಭಯಾನಕ ಚಂಡಮಾರುತದ ದೃಶ್ಯಗಳು ಎಂದು CGI ದೃಶ್ಯಗಳ ಹಂಚಿಕೆ

