ಫ್ಯಾಕ್ಟ್ಚೆಕ್ : ಯೋಗ ಕಸರತ್ತು ಮಾಡುತ್ತಿರುವ ವ್ಯಕ್ತಿ ಯಾರು ಗೊತ್ತೇ?
ಪ್ರಧಾನಿ ನರೇಂದ್ರ ಮೋದಿ ತಾವು ಯುವಕರಾಗಿದ್ದ ಸಂದರ್ಭದಲ್ಲಿ ಯೋಗ ಕಸರತ್ತುಗಳನ್ನು ಹೀಗೆ ಮಾಡುತ್ತಿದ್ದರು ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಯುವಕ ನರೇಂದ್ರ ಮೋದಿ ಯೋಗ ಮಾಡುತ್ತಿರುವ ಕಪ್ಪು ಬಿಳುಪು ವಿಡಿಯೋ ಎಂಬ ಪ್ರತಿಪಾದನೆಯೊಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಯೋಗದ ವಿಭಿನ್ನ ಭಂಗಿಗಳನ್ನು ಪ್ರದರ್ಶಿಸುವ ವ್ಯಕ್ತಿಯೊಬ್ಬರ ಬ್ಲಾಕ್-ಅಂಡ್-ವೈಟ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ಪ್ರಧಾನಿ ನರೇಂದ್ರ ಮೋದಿಯವರು ಪ್ರದರ್ಶಿಸುತ್ತಿರುವ ಆಸನಗಳ ಅಪರೂಪದ ತುಣುಕಾಗಿದೆ ಎಂದು ಹೇಳಲಾಗಿದೆ.
8 ನಿಮಿಷಗಳ ಸುದೀರ್ಘ ವೀಡಿಯೊವನ್ನು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇದು “ಮೋದಿ ಜಿ ಯೋಗವನ್ನು ಪ್ರದರ್ಶಿಸುವ ಅಪರೂಪದ ತುಣುಕು” ಎಂದು ಹೇಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗಾಸನಗಳ ಪ್ರಬಲ ಪ್ರತಿಪಾದಕರಾಗಿದ್ದಾರೆ ಮತ್ತು ಅವರು ವಿವಿಧ ಆಸನಗಳನ್ನು ಪ್ರದರ್ಶಿಸುವ ವೀಡಿಯೊಗಳು ಅಂತರ್ಜಾಲದಲ್ಲಿ ಆಗಾಗ್ಗೆ ಕಂಡುಬರುತ್ತವೆ. ಮೋದಿ ಯುವಕನಾಗಿದ್ದ ಸಂದರ್ಭದಲ್ಲಿ ಇಂತಹ ಪ್ರದರ್ಶನಗಳನ್ನು ನೀಡುತ್ತಿದ್ದರು ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋವನ್ನು ಪರಿಶೀಲಿಸುವಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ? ಪ್ರಧಾನಿ ಮೋದಿ ತಮ್ಮ ಯವ್ವೌನಾವಸ್ಥೆಯಲ್ಲಿ ಇದ್ದಾಗ, ಇಂತಹ ಕಷ್ಟಕರವಾದ ಯೋಗವನ್ನು ಮಾಡುತ್ತಿದ್ದರೆ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀ ಫ್ರೇಮ್ಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೊದಲ್ಲಿರುವ ವ್ಯಕ್ತಿ ಬಿಕೆಎಸ್ ಅಯ್ಯಂಗಾರ್ ಆಗಿದ್ದು ಇವರು “ಅಯ್ಯಂಗಾರ್ ಯೋಗ” ದ ಸ್ಥಾಪಕರೂ ಆಗಿದ್ದಾರೆ. ಅದೇ ವೀಡಿಯೊವನ್ನು ಜೂನ್ 12, 2009 ರಂದು ಯೂಟ್ಯೂಬ್ ಚಾನೆಲ್ “ಟಾಮ್ ಮಾರ್ಟಿನ್” ನಲ್ಲಿ ಅಪ್ಲೋಡ್ ಮಾಡಲಾಗಿದೆ. ಶೀರ್ಷಿಕೆಯಲ್ಲಿ “ಕೃಷ್ಣಮಾಚಾರ್ಯ ಮತ್ತು ಬಿ.ಕೆ.ಎಸ್. ಅಯ್ಯಂಗಾರ್ 1938 ರಲ್ಲಿ ಯೋಗ ಸೂತ್ರಗಳೊಂದಿಗೆ, ಭಾಗ 1 ಆಫ್ 6” ಎಂದು ಬರೆಯಲಾಗಿದೆ.
ಅದೇ ಯೂಟ್ಯೂಬ್ ಚಾನೆಲ್ ಇದೇ ರೀತಿಯ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿದ ಅದೇ ವೀಡಿಯೊದ 45 ನಿಮಿಷಗಳ ಆವೃತ್ತಿಯನ್ನು ಸಹ ನೋಡಬಹುದು. ಈ ವೀಡಿಯೊವನ್ನು ಜನವರಿ 28, 2012 ರಂದು ಅಪ್ಲೋಡ್ ಮಾಡಲಾಗಿದೆ.
1938 ರಲ್ಲಿ ಅವರ ಶಿಕ್ಷಕ ಟಿ ಕೃಷ್ಣಮಾಚಾರ್ಯ ಅವರೊಂದಿಗೆ ಅಯ್ಯಂಗಾರ್ ಅವರ ವೀಡಿಯೊ ಕ್ಲಿಪ್ ಅನ್ನು ಉಲ್ಲೇಖಿಸುವ ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.
“ದಿ ವಾಷಿಂಗ್ಟನ್ ಪೋಸ್ಟ್” ನ ಲೇಖನವೊಂದರ ಪ್ರಕಾರ, 1938 ರಲ್ಲಿ ಟಿ ಕೃಷ್ಣಮಾಚಾರ್ಯ ಮತ್ತು ಬಿಕೆಎಸ್ ಅಯ್ಯಂಗಾರ್ ಅವರ ಚಲನಚಿತ್ರ 2013 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ “ಯೋಗ: ದಿ ಆರ್ಟ್ ಆಫ್ ಟ್ರಾನ್ಸ್ಫರ್ಮೇಷನ್” ಎಂಬ ಯೋಗ ಕಲೆಗಳ ಪ್ರದರ್ಶನದ ಭಾಗವಾಗಿತ್ತು. ಬಿಕೆಎಸ್ ಅಯ್ಯಂಗಾರ್ ಅವರ ಪುತ್ರಿ ಸುನೀತಾ ಪಾರ್ಥಸಾರಥಿಯನ್ನು ಭೇಟಿ ಮಾಡಿದಾಗ ಅವರು ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ನನ್ನ ತಂದೆ ಎಂದು ದೃಢಪಡಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೊ ಪೌರಾಣಿಕ ಯೋಗ ಶಿಕ್ಷಕ ಬಿಕೆಎಸ್ ಅಯ್ಯಂಗಾರ್ ಅವರದ್ದು ಎಂದು ಸ್ಪಷ್ಟವಾಗಿದ್ದು. ಪ್ರಧಾನಿ ಮೋದಿ ಜನಿಸುವ ಒಂದು ದಶಕಕ್ಕೂ ಮುನ್ನ 1938 ರಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಪ್ರಧಾನಿ ಮೋದಿ 1950 ರಲ್ಲಿ ಜನಿಸಿದರು. ಹೀಗಾಗಿ ವೈರಲ್ ವೀಡಿಯೋ /ಫೋಟೋಗಳಿಗೂ ಮೋದಿಯವರಿಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಕಳೆದ ವಷ್ವೂ ಇಂತಹದೇ ಪ್ರತಿಪಾದನೆಯೊಂದಿಗೆ ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಏನ್ಸುದ್ದಿ.ಕಾಂ ವೈರಲ್ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು ಎಂದು ಫ್ಯಾಕ್ಟ್ಚೆಕ್ ಸ್ಟೋರಿಯನ್ನು ಪ್ರಕಟಿಸಿತ್ತು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ನೆಹರು ಮತ್ತು ಇಂದಿರಾ ಅವರೊಂದಿಗೆ ಇರುವ ವ್ಯಕ್ತಿಗಳು ಯಾರು ಗೊತ್ತೆ?