ಫ್ಯಾಕ್ಟ್‌ಚೆಕ್ : ನೆಹರು ಮತ್ತು ಇಂದಿರಾ ಅವರೊಂದಿಗೆ ಇರುವ ವ್ಯಕ್ತಿಗಳು ಯಾರು ಗೊತ್ತೆ?

ಇವರು ಯಾರು ಬಲ್ಲಿರೇನು ? ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ನೆಹರು, ಇಂದಿರಾ ಗಾಂಧಿ ಮತ್ತು ಇನ್ನಿತರ ಇಬ್ಬರನ್ನು ಒಳಗೊಂಡ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ” ಚಿತ್ರದ ಮೇಲ್ಭಾಗದಲ್ಲಿ ಲೋ ಗುಲಾಮರಾ ನೋಡ್ರೋ ನಿಮ್ಮ ಮುಸ್ಲಿಂ ಮಾವಂದಿರನ್ನು” ಎಂಬ ಕ್ಯಾಪ್ಷನ್ ಇದ್ದು, ಕೆಳ ಭಾಗದಲ್ಲಿ ನೆಹರು, ಇಂದಿರಾ, ಯೂನಸ್‌ ಖಾನ್( ಇಂದಿರಾಳ ಮಾವ) ಮತ್ತು ಫಿರೋಜ್ ಖಾನ್ (ಇಂದಿರಾಳ ಗಂಡ) ಇದೊಂದು ಅಪರೂಪದ ಚಿತ್ರ ಇದನ್ನು ಗುಲಾಮರಿಗೆ ಆದಷ್ಟೂ ಶೇರ್ ಮಾಡಿ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಕಪ್ಪು ಬಿಳುಪಿನ ಫೋಟೋದಲ್ಲಿ  ಇಂದಿರಾ ಗಾಂಧಿಯವರ ಬಲಭಾಗದಲ್ಲಿ ಜವಾಹರಲಾಲ್ ನೆಹರು ನಿಂತಿರುವುದನ್ನು ತೋರಿಸುತ್ತದೆ, ಅವರ ಎಡಭಾಗದಲ್ಲಿರುವ ಇತರ ಇಬ್ಬರು ಪುರುಷರು ಅವರ “ಪತಿ ಫಿರೋಜ್ ಖಾನ್ ಮತ್ತು ಮಾವ ಯೂನಸ್ ಖಾನ್” ಇದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಕೇಸರಿ ನಂದನ ಎಂಬ ಬಲಪಂಥೀಯ ಫೇಸ್‌ಬುಕ್ ಪೇಜ್‌ನಲ್ಲಿ ಈ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಪರೂಪದ ಚಿತ್ರಗಳ ಸ್ಟಾಕ್ ಗ್ಯಾಲರಿಯಾದ alamy.com  ನಲ್ಲಿ ಇದೇ ರೀತಿಯ ಫೋಟೋ ಲಭ್ಯವಾಗಿದೆ. ಫೋಟೋಗೆ ‘ನೆಹರು ಗಾಂಧಿ ರೋರಿಚ್ – ಇಮೇಜ್ ID: KJCGNG’ ಎಂದು ಶೀರ್ಷಿಕೆ ನೀಡಲಾಗಿದೆ.

ಲಭ್ಯವಾದ ಮಾಹಿತಿಗಳ ಪ್ರಕಾರ ನೆಹರು, ಇಂದಿರಾ ಜೊತೆಯಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು ಯೂನಸ್ ಖಾನ್ ಮತ್ತು ನಿಕೋಲಸ್ ರೋರಿಚ್ ಎಂದು ಗುರುತಿಸಲಾಗಿದೆ. ಫಿರೋಜ್ ಖಾನ್ ಎಂದು ಗುರುತಿಸಲಾದ ವ್ಯಕ್ತಿ ಮೊಹಮ್ಮದ್ ಯೂನಸ್ ಖಾನ್, ಅವರು ಭಾರತೀಯ ರಾಜತಾಂತ್ರಿಕ ಸಲಹೆಗಾರರಾಗಿದ್ದರು, ನಿಕೋಲಸ್ ರೋರಿಚ್ ರಷ್ಯಾದ ವರ್ಣಚಿತ್ರಕಾರ ಎಂದು ಉಲ್ಲೇಖಿಸಲಾಗಿದೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ನ್ಯೂಯಾರ್ಕ್ ನಗರದ ನಿಕೋಲಸ್ ರೋರಿಚ್ ಮ್ಯೂಸಿಯಂನ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಾಗಿದೆ, ಇದು ರಷ್ಯಾದ ಕಲಾವಿದನ ಕೃತಿಗಳಿಗೆ ಸಮರ್ಪಿಸಲಾಗಿದೆ ಎಂದು ತಿಳಿಸಿಲಾಗಿದೆ. ರೋರಿಚ್ ತನ್ನ ಬದುಕಿನ ಅಂತ್ಯಕಾಲದಲ್ಲಿ ಭಾರತದ ನಗ್ಗರ್‌ನಲ್ಲಿ ನೆಲೆಸಿದ್ದರು. 1942 ರಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದು ಹೇಳುವ ಆರ್ಕೈವ್‌ನಲ್ಲಿ ಮಾಹಿತಿ ಲಭ್ಯವಾಗಿದೆ.

ಮೊಹಮ್ಮದ್ ಯೂನಸ್ ಖಾನ್ ಅವರ ವಿಕಿಪೀಡಿಯಾ ಪೇಜ್‌ನಲ್ಲಿ ಇದೇ ಮಾಹಿತಿ ಲಭ್ಯವಾಗಿದ್ದು, ಫೋಟೋದಲ್ಲಿ ಬಲಭಾಗದಲ್ಲಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೆಲೆನಾ ಇವನೊವ್ನಾ ರೋರಿಚ್ ಎಂಬ ಪುಸ್ತಕದಲ್ಲಿ ಇದೇ ಚಿತ್ರವನ್ನು ಬಳಸಲಾಗಿದೆ. ಸಂಪುಟ 7. ಪುಸ್ತಕದಲ್ಲಿ ಬಲಭಾಗದಲ್ಲಿರುವ ವ್ಯಕ್ತಿಯನ್ನು ಎಂ ಯೂನಸ್ ಎಂದು ಗುರುತಿಸುವ ಶೀರ್ಷಿಕೆಯೊಂದಿಗೆ. ಅವರ ನಾಲ್ವರ ಮತ್ತೊಂದು ಚಿತ್ರವೂ ಇದೆ.

2001 ರ ಜೂನ್ 18 ರಂದು ದಿ ಹಿಂದೂ ಪತ್ರಿಕೆಯಲ್ಲಿ ಮೊಹಮ್ಮದ್ ಯೂನಸ್ ನಿಧನರಾದ ಸುದ್ದಿಯನ್ನು ಪ್ರಕಟಿಸಿದೆ. ಖ್ಯಾತ ರಾಜತಾಂತ್ರಿಕ, ಭಾರತೀಯ ಟ್ರೇಡ್ ಫೇರ್ ಅಥಾರಿಟಿಯ ಮಾಜಿ ಅಧ್ಯಕ್ಷ ಮತ್ತು ನೆಹರು ಕುಟುಂಬದ ಆತ್ಮೀಯ ಸ್ನೇಹಿತ ಮೊಹಮ್ಮದ್ ಯೂನಸ್ ಅವರು ದೀರ್ಘಕಾಲದ ಅನಾರೋಗ್ಯದಿಂದ ತಮ್ಮ 85 ನೇ ವಯಸ್ಸಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾದರು ಎಂದು ಸುದ್ದಿ ಪ್ರಕಟಿಸಿದೆ.  ಅವರು ಭಾರತೀಯ ವಿದೇಶಾಂಗ ಸೇವೆಯಿಂದ ನಿವೃತ್ತರಾದ ನಂತರ ಇಂದಿರಾ ಗಾಂಧಿಯವರ ವಿಶೇಷ ಪ್ರತಿನಿಧಿಯಾಗಿ ನೇಮಕಗೊಂಡರು ಎಂದು ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಕಂಚಿಕೊಳ್ಳಲಾದ ಚಿತ್ರದಲ್ಲಿ ನೆಹರು ಮತ್ತು ಇಂದಿರಾ ಗಾಂಧಿಯರೊಂದಿಗೆ ಇರುವ ವ್ಯಕ್ತಿಗಳು, ರಾಜತಾಂತ್ರಿಕ ವ್ಯಕ್ತಿಯಾದ ಮೊಹಮ್ಮದ್ ಯೂನಸ್ ಹಾಗೂ ರಷ್ಯಾದ ವರ್ಣಚಿತ್ರಕಾರ ನಿಕೋಲಸ್ ರೋರಿಚ್ ಎಂಬುದು ಸ್ಪಷ್ಟವಾಗಿದೆ. ಆದರೆ ಬಲಪಂಥೀಯ ಪ್ರತಿಪಾದಕ ಸೋ‍ಷಿಯಲ್ ಮೀಡಿಯಾಗಳು ನೆಹರು ಕುಟುಂಬವನ್ನು ಹೀಗಳೆಯಲು ಸಂಬಂಧವಿಲ್ಲದ ಫೋಟೊವನ್ನು ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಅಶ್ಲೀಲ ಚಿತ್ರ ನೋಡುತ್ತಿರುವಂತೆ ಎಡಿಟ್ ಮಾಡಿದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights